ರಾಜಕೀಯ ಅಂದ್ರೆ ಅದು ಹೊಸಲು, ಕೆಟ್ಟದ್ದು, ರೌಡಿಸಂ, ಭ್ರಷ್ಟಾಚಾರಿಗಳ ಸ್ವರ್ಗ, ಸ್ವಜನಪಕ್ಷಪಾತ, ಹೀಗೆ ಹತ್ತು ಹಲವು ರೀತಿಯಲ್ಲಿ ಜನಸಾಮಾನ್ಯರು ಮಾತನಾಡಿಕೊಳ್ಳುವುದನ್ನು ನಾವು ನಿತ್ಯ ಕೇಳುತ್ತಲಿರುತ್ತೇವೆ ಮತ್ತು ನೋಡುತ್ತಲಿರುತ್ತೇವೆ. ಇದಕ್ಕೆ ವಿರುದ್ದವಾಗಿ ‘ಕಾಯಕವೇ ಕೈಲಾಸ’ವೆಂದು ಜನಸಾಮಾನ್ಯರ ಒಳಿತಿಗಾಗಿ ಹಗಲಿರುಳು ದುಡಿಯುತ್ತಿರುವ ಸರಳ, ಸಜ್ಜನ ರಾಜಕಾರಿಣಿಯೊಬ್ಬರ ಅಭಿವೃದ್ಧಿ ರಾಜಕೀಯವನ್ನು ನಿಮಗೆ ಪರಿಚಯಿಸಲೇ ಬೇಕು.

ಅದು ದೂರದ ಬೇರಾರೂ ಅಲ್ಲ, ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರು ಮಹಾನಗರಪಾಲಿಕೆಯ ಸದಸ್ಯರಾದ ಜೆ.ಎಸ್. ಜಗದೀಶ್, ಸಮಾಜ ಸೇವೆನ್ನೇ ತನ್ನ ಉಸಿರಾಗಿಸಿಕೊಂಡು ತಮ್ಮನ್ನು ಸಂಪೂರ್ಣವಾಗಿ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಮೈಸೂರಿನ 22ನೇ ವಾರ್ಡನಿಂದ ಗೆದ್ದಿರುವ ಇವರು ,ತಮ್ಮ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಟಿ. ಕೆ. ಬಡಾವಣಿಯಿಂದ ಕೃಷ್ಣಮೂರ್ತಿ ಲೇಔಟ್ ವರೆಗೂ ಮತ್ತು ಅದರಲ್ಲಿ ಬರುವ ಖಾಸಗಿ ಬಡಾವಣೆಗಳು ಸೇರಿ ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.

ಮೈಸೂರು ಮಹಾನಗರಪಾಲಿಕೆಯಲ್ಲಿ ನಂಬರ್ 1 ವಾರ್ಡ್ ಮತ್ತು ನಂಬರ್ ಒನ್ ಕಾರ್ಪೋರೇಟರ್ ಅಂತ ಪತ್ರಿಕೆಗಳು ಮತ್ತು ಟಿವಿಗಳು ಮನಸಾರೆ ಹೊಗಳಿ ಇವರ ಬೆನ್ನುತಟ್ಟಿವೆ. ಅಭಿವೃದ್ಧಿ ರಾಜಕೀಯದ ಹೊಸ ಮಾದರಿಯನ್ನು ತೋರಿಸಿದ್ದಾರೆ. “ಇದ್ದರೆ ಹೀಗಿರಬೇಕು ನಮ್ಮ ಜನಪ್ರತಿನಿಧಿ ಎನ್ನುವುದಕ್ಕೆ ಜೆ.ಎಸ್. ಜಗದೀಶ್ ಒಂದು ರೋಲ್ಡ್ ಮಾಡೆಲ್ ರಾಜಕಾರಣಿ” ಆಗಿದ್ದಾರೆ. ಪ್ರಸ್ತುತ ರಾಜಕಾರಣ ಮತ್ತು ರಾಜಕಾರಣಿಗಳ ಬಗ್ಗೆ ಇರುವ ಕೆಟ್ಟ ಅಭಿಪ್ರಾಯಗಳನ್ನು ದೂರ ಮಾಡಿ ಮತದಾರರಲ್ಲಿ ಭರವಸೆಯ ಬೆಳಕನ್ನು ನೀಡಿದ ಯುವ ನೇತಾರ. ಇಂತಹ ಒಬ್ಬ ವ್ಯಕ್ತಿ ಪ್ರತಿ ಊರಿಗೆ ಇದ್ದರೆ ಸಾಕು, ಆ ಊರು ಮತ್ತು ಊರಿನ ನಾಗರಿಕರು ಕೂಡ ಉದ್ಧಾರ ಆಗುತ್ತಾರೆ ಎಂಬುದಕ್ಕೆ ಇವರ ಕಾರ್ಯ ವೈಖರಿಯೇ ಪ್ರತ್ಯಕ್ಷವಾದ ಸಾಕ್ಷಿ.

ನಾಗರೀಕರ ಮೂಲಭೂತ ಅವಶ್ಯಕತೆಗಳಾದ ಕುಡಿಯುವ ನೀರು, ಡಾಂಬರೀಕರಣಗೊಂಡ ವಿಶಾಲ ರಸ್ತೆಗಳು, ಒಳಚರಂಡಿ ವ್ಯವಸ್ಥೆ, ಸ್ವಚ್ಚತೆಗೆ ಪ್ರಥಮ ಆದ್ಯತೆ ಕೊಟ್ಟು, ತ್ವರಿತವಾದ ಕಸವಿಲೇವಾರಿ, ನಂದದ ಬೀದಿ ದೀಪಗಳು, ಕಂಗೊಳಿಸುವ ಹಸಿರು ಉದ್ಯಾನವನಗಳು, ಓಪನ್ ಜಿಮ್, ಮಕ್ಕಳ ಆಟದ ಮೈದಾನ, ಸಾರ್ವಜನಿಕ ಉಪಯೋಗಿ ಕಟ್ಟಡಗಳು, ಗ್ರಂಥಾಲಯಗಳು, ಹೀಗೆ ಹತ್ತು ಹಲವು ಮೂಲಭೂತ ನಾಗರೀಕ ಸೌಲಭ್ಯಗಳನ್ನು ಸಕಾಲಕ್ಕೆ ತರುವ ನಿಟ್ಟಿನಲ್ಲಿ ಜೆ.ಎಸ್.ಜಗದೀಶ್ ಅವರು ಹಗಲಿರುಳು ಶ್ರಮಿಸಿದ್ದಾರೆ.

ಕೇಂದ್ರ, ರಾಜ್ಯ ಮತ್ತು ಪಾಲಿಕೆವತಿಯಿಂದ ಸಿಗುವ ಅನುದಾನದಲ್ಲಿ ಸಿಂಹಪಾಲನ್ನು ತಮ್ಮ ವಾರ್ಡಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಬಡವರು ಮತ್ತು ಮಧ್ಯಮವರ್ಗದ ಜನರಿಗೆ ವಿವಿಧ ಸವಲತ್ತುಗಳು, ಸಹಾಯಧನ, ಪರಿಕರಗಳು ಹೀಗೆ ಹತ್ತು ಹಲವು ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಸಕಾಲದಲ್ಲಿ ತಲುಪಿಸುವಲ್ಲಿ ಜೆ.ಎಸ್.ಜಗದೀಶ್ ಇತರ ಪಾಲಿಕೆ ಸದಸ್ಯರಿಗೆ ಮಾದರಿಯಾಗಿದ್ದಾರೆ ಎಂದು ಮೈಸೂರಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಇಂತಹ ಸರಳ, ಸಜ್ಜನ, ಕ್ರಿಯಾಶೀಲ, ಮಾದರಿ ರಾಜಕಾರಣಿಗಳು ಸಂಖ್ಯೆ ಅಕ್ಷಯವಾಗಲಿ. ಅವರ ರಾಜಕೀಯ ಭವಿಷ್ಯ ಉಜ್ವಲವಾಗಿರಲಿ. ಚುನಾವಣಾ ರಾಜಕೀಯದಲ್ಲಿ ಸೋಲಿಲ್ಲದ ಸರದಾರನಾಗಲಿ ಎಂದು ಹಾರೈಸುತ್ತೇವೆ.

ಜೆ.ಎಸ್. ಜಗದೀಶ್ ರವರು ಮಾಡಿರುವ ಅಭಿವೃದ್ಧಿಗಳ ಕಿರು ಚಿತ್ರಣ ಹಾಗು ಜನರು ಅವರಿಗೆ ನೀಡಿರುವ ಸಂದೇಶಗಳ ವಿಡಿಯೋವನ್ನು ವೀಕ್ಷಿಸಿ..

LEAVE A REPLY

Please enter your comment!
Please enter your name here