ಆಡು ನುಡಿಯಂತೆ ಬಲಗೈಯಿಂದ ಕೊಟ್ಟಿದ್ದು ಎಡಗೈಗೂ ಗೊತ್ತ ಆಗಬಾರದು ಎಂಬುದು ಗೊತ್ತಿರುವ ಮಾತು ಅದರಂತೆ ನಮ್ಮ ನೆಚ್ಚಿನ ನಟ ನಿರ್ದೇಶಕ, ನಟ ರವಿಚಂದ್ರನ್ ಮಡಿಕೇರಿ(ಕೊಡಗು) ಸಂತ್ರಸ್ತರಿಗೆ ನಮ್ಮ ಸಿನಿಮಾದವರಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡೋಣ ಆದರೆ ಅದನ್ನು ಈ ರೀತಿಯಾಗಿ ಮಾಡೋಣ

1.ಚಿತ್ರೀಕರಣ ನಡೆಸುತ್ತಿರುವ ಸಿನಿಮಾಗಳು ತಲಾ 10000 ರೂಪಾಯಿಗಳನ್ನು ಪರಿಹಾರ ನಿಧಿಗೆ ನೀಡಬೇಕು

2. ಸಿನಿಮಾಗಳ ಟಿಕೆಟ್ ದರವನ್ನು ಇಮ್ಮಡಿಗೊಳಿಸಿ, ಒಂದು ಪಾಲನ್ನು ಪರಿಹಾರ ನಿಧಿಗೆ ಕೊಡಬೇಕು

3. ಸಿನಿಮಾ ನಟರು ಸ್ವ ಇಚ್ಛೆಯಿಂದ ತಮ್ಮ ಕೈಲಾಗುವ ಮೊತ್ತವನ್ನು ಪರಿಹಾರ ನಿಧಿಗೆ ದೇಣಿಗೆ ಕೊಡಬೇಕು ತಾವು ಕೊಟ್ಟ ಮೊತ್ತವನ್ನು ಬಹಿರಂಗಪಡಿಸಲಿ ಕೆ ಹೋಗಬಾರದು

4. ಯಾರ ಕೈಯಲ್ಲಿ ಎಷ್ಟ್ ಆಗುತ್ತದೆಯೋ ಅಷ್ಟು ಪರಿಹಾರ ನಿಧಿ ಕೊಡಬೇಕು

5. ದೇವಸ್ಥಾನಗಳಿಗೆ ಕೊಡುಗೆ ಕೊಡುವವರು ಒಂದೊಂದು ಕಾರ್ಯಕ್ಕೆ ಹಣ ಕೊಡುತ್ತಾರೆ ಅದರಂತೆ ಇಲ್ಲಿಯೂ ಸಹ ಕೆಲವರು ರಸ್ತೆಗೆ ಕೆಲವರು ಮನೆಗಳಿಗ ಕೆಲವರು ಸಂತ್ರಸ್ತರಿಗೆ ಆಹಾರ ಪದಾರ್ಥಗಳನ್ನು ಒದಗಿಸಲು ಸಹಾಯ ನಿಧಿ ಕೊಡಬೇಕು

6. ಸಂತ್ರಸ್ತರಿಗೆ ಸರಕಾರದ ಸಮಾನವಾದ ಭೂಮಿಯನ್ನು ಕೊಡಬೇಕು. ಎಲ್ಲರೂ ಒಂದಾಗಿರುವಂತೆ ಜಾತಿ ಧರ್ಮಗಳ ಭೇದವಿಲ್ಲದೆ ಎಲ್ಲರಿಗೂ ಒಳ್ಳೆಯ ಮನೆ ಕಟ್ಟಿಕೊಡಬೇಕು ಅಲ್ಲಿ ಯಾವುದೇ ಧರ್ಮದ ದೇವಾಲಯ ಇರಕೂಡದು ಮಾನವ ಧರ್ಮ ಒಂದೇ ಮುಖ್ಯವಾಗಬೇಕು

7. ಟೋಲ್ ಗೇಟ್ ಸ್ಥಾಪಿಸಿ ಆ ಹಾದಿಯಲ್ಲಿ ಹೋಗುವವರು ಕೊಡು ಹಣವನ್ನು ಪರಿಹಾರ ನಿಧಿಗೆ ಬಳಸಬೇಕು

8. ಇಲ್ಲಿ ಕೋಟ್ಯಾಂತರ ರೂಪಾಯಿಗಳ ಅವಶ್ಯವಿದೆ ಎಲ್ಲವನ್ನು ಸರ್ಕಾರವೇ ಭರಿಸಲು ಸಾಧ್ಯವಿಲ್ಲ ಆದ್ದರಿಂದ ಎಲ್ಲರೂ ಕೈ ಜೋಡಿಸೋಣ

9. ಮನೆ ಕಟ್ಟಿಕೊಡುವುದು ಕಿಂತ ಬದುಕು ಕಟ್ಟಿಕೊಡುವುದು ಮುಖ್ಯ ಅವರ ಸಂತೋಷ ನೆಮ್ಮದಿಗಳನ್ನು ಮರುಕಳಿಸುವುದು ಮುಖ್ಯ.

10. ಇಲ್ಲಿ ಕೈಗೊಳ್ಳುವ ಕಾರ್ಯಕ್ರಮಗಳು ಮುಂದೆ ಪ್ರಕೃತಿ ವಿಕೋಪವಾದಾಗ ಏನು ಮಾಡಬಹುದು ಅನ್ನುವುದಕ್ಕೆ ಮಾದರಿಯಾಗುತ್ತದೆ.

LEAVE A REPLY

Please enter your comment!
Please enter your name here