ಅಟಲ್‍ಜೀ ದೇಶ ಕಂಡ ನಿಸ್ವಾರ್ಥ ರಾಜಕಾರಣಿ, ಭಾರತ ಕಂಡ ಉತ್ಕೃಷ್ಟ ವಾಗ್ಮಿ ರಾಜಕಾರಣೀಯೂ ಹೌದು, ಪಾಕ್ ದೇಶ ಭಾರತವನ್ನು ನೆನೆಸಿಕೊಂಡರೆ ಗಡಗಡ ನಡುಗುವಂತೆ ಮಾಡಿದ್ದ ಭಾರತದ ದಿಟ್ಟ ಪ್ರಧಾನಿಯಾಗಿದ್ದರು ಅಟಲ್ ಜಿ..

ಅಟಲ್ ಬಿಹಾರಿ ವಾಜಪೇಯಿ ಜೀವನದತ್ತ ಒಂದು ಸುತ್ತು.

1924 ಡಿಸೆಂಬರ 25ರಂದು ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರ ಮಗನಾಗಿ ಮಧ್ಯಪ್ರದೇಶದ ಗ್ಯಾಲಿಯರ್ ಹತ್ತಿರದ ಶಿಂದಕಿ ಚವ್ವಾಣಿ ಎನ್ನುವ ಗ್ರಾಮದಲ್ಲಿ ಇವರ ಜನನವಾಯಿತು.

1939 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರ್ಪಡೆಯಾದರು.

1942 ರಲ್ಲಿ ಕ್ವಿಟ್ ಇಂಡಿಯಾ (ಬ್ರಿಟಿಷರೇ ಭಾರತ ಬಿಟ್ಟು ತೊಲಗಿ)ಚಳುವಳಿಯಲ್ಲಿ ಭಾಗವಹಿಸಿದ್ದರು

1951 ರಲ್ಲಿ ಭಾರತೀಯ ಜನ ಸಂಘ ಸ್ಥಾಪಿಸಿದರು

1953 ರಲ್ಲಿ ಭಾರತೀಯ ಜನ ಸಂಘದ ಮೂಲಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪರಿಚಯವಾಯಿತು

1957 ರಲ್ಲಿ ಲೋಕಸಭೆಯ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆಯಾದರು

1975 ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭ ಬಂದಾಗ ಜೈಲು ಪಾಲಾದರು..

1977 ರಲ್ಲಿ ಜನತಾ ಸಂಘದ ಮೊದಲ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ ಮತ್ತು ಅದೇ ವರ್ಷ ಅಮೆರಿಕದಲ್ಲಿ ಅಸೆಂಬ್ಲಿ ಉದ್ದೇಶಿಸಿ ಮಾತನಾಡಿದ್ದು ವಿಶೇಷ..

1979 ಮುರಾರ್ಜಿ ದೇಸಾಯಿ ಅವರ ಸರ್ಕಾರ ಪತನಗೊಂಡ ಸಂದರ್ಭದಲ್ಲಿ ಜನತಾ ಪಾರ್ಟಿ ವಿಸರ್ಜನೆ ಮಾಡಿದರು.

1980 ರಲ್ಲಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಸ್ಥಾಪನೆ, ಮತ್ತು ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ.

1992 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಸ್ವೀಕಾರ

1993 ಕಾನ್ಪುರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿತ್ತು

1996 ದೇಶದ ಪ್ರಧಾನಿಯಾಗಿ ಆಯ್ಕೆ 13 ದಿನ ಆಡಳಿತ

1998 ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆ ಪೂರ್ಣ ಅವಧಿ ಮುಗಿಸಿದ ಕಾಂಗ್ರೆಸ್ಸೇತರ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಗಿದ್ದರು.

1999 13 ನೇ ಲೋಕಸಭೆಗೆ ಆಯ್ಕೆ 2004ರ ತನಕ ಪ್ರಧಾನಿಯಾಗಿ ಕಾರ್ಯನಿರ್ವಹಣೆ

2004 14ನೇ ಲೋಕಸಭೆಗೆ 10 ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆ

2005 ಸಕ್ರಿಯ ರಾಜಕಾರಣದಿಂದ ನಿವೃತ್ತಿ..

ವಾಜಪೇಯಿ ನಿಧನದ ಬಗ್ಗೆ ಗಣ್ಯಾತಿಗಣ್ಯರು ಏನೆನ್ನುತ್ತಾರೆ ಗೊತ್ತ..?

 

LEAVE A REPLY

Please enter your comment!
Please enter your name here