ಮಗುವನ್ನು ಬೆಳೆಸುವುದು ಒಂದು ಕಠಿಣ ವಿಷಯವಾಗಿದೆ. ಇತ್ತೀಚಿಗೆ ಕೆಲವು ತಾಯಿ ತಂದೆ ಮಕ್ಕಳನ್ನು ಬೆಳೆಸುವಲ್ಲಿ ಯಡುವುತ್ತಿದ್ದಾರೆ ಎನ್ನಿಸುತ್ತದೆ ಹೇಗೆ ಅಂತೀರಾ ಇಲ್ಲಿ ಓದಿ

ಹೊಡೆಯುವುದು ಮತ್ತು ಶಿಕ್ಷೆ

ಮಕ್ಕಳನ್ನು ಶಿಕ್ಷಿಸುವ ಅಥವಾ ಹೊಡೆಯುವುದರಿಂದ ಬುದ್ಧಿ ಕಲಿಸಬಹುದು ಎಂದು ನೀವು ನಂಬಿದ್ದರೆ ಅದು ನಿಮ್ಮ ಮೂರ್ಖತನವೆ ಸರಿ. ನೀವು ಹೊಡೆಯುವುದರಿಂದ ಮತ್ತು ಶಿಕ್ಷಿಸುವುದರಿಂದ ಮಗುವನ್ನು ಹೆದರಿಸಬಹುದೆ ಹೊರತು ಮತ್ತೇ ಅದೇ ತಪ್ಪುಗಳನ್ನು ಮಾಡದಂತೆ ತಡೆಯಲು ಆಗುವುದಿಲ್ಲ

ವಾದಗಳನ್ನು ವಿರೋಧಿಸುವುದು

ನಿಮ್ಮ ಮಗು ನಿಮ್ಮ ಜತೆ ವಾದ ಮಾಡುತ್ತಿದ್ದರೆ ನೀವು ಅದಕ್ಕೆ ಪ್ರಚೋದನೆಯನ್ನು ಎಂದಿಗೂ ಕೊಡಬಾರದು. ಒಂದು ವೇಳೆ ನೀವು ಅದಕ್ಕೆ ಪ್ರತೀವಾದ ಮಾಡಿದರೆ ಮಕ್ಕಳು ಇನ್ನು ಹೆಚ್ಚು ಮಾತನ್ನು ಕಲೆಯುತ್ತವೆ. ಆದ್ದರಿಂದ ಅದನ್ನು ಅಲ್ಲೆ ಮೊಟಗುಗೊಳಿಸುವಂತೆ ಆಜ್ಞೆ ಮಾಡಿದರೆ ಒಳ್ಳೆಯದು

ಆಧುನಿಕ ವಿದ್ಯುನ್ಮಾನಗಳ ಬಳಕೆ

ಇತ್ತೀಚಿನ ದಿನಗಳಲ್ಲಿ, ವಿದ್ಯುನ್ಮಾನ ಸಾಧನಗಳನ್ನು ಬಳಸಿಕೊಂಡು ಮಕ್ಕಳು ಹೆಚ್ಚು ಸಮಯ ಕಳೆಯುತ್ತಾರೆ ಇದಕ್ಕೆ ಕಾರಣ ನೀವೆ ಮಗುವಿನೊಂದಿಗೆ ನೀವು ಸಮಯ ಕಳೆಯದೆ ಇದ್ದರೆ ಮಗು ತನ್ನ ಸಮಯವನ್ನು ಮೊಬೈಲ್, ವೀಡಿಯೋ ಗೇಮ್ಗಳೊಂದಿಗೆ ಕಳೆಯುತ್ತವೆ

ಕಿರುಚಾಡುವುದು

ನೀವು ಎಷ್ಟು ಕಿರುಚಾಡಿದರು ನಿಮ್ಮ ಮಗು ಬದಲಾಗಿಲ್ಲವೆದಂದರೆ ಅದು ನೀವು ಕಿರಿಚಾಡುವ ವರ್ತನೆಗೆ ಹೊಂದಿಕೊಂಡು ಬಿಟ್ಟಿದೆ ಎಂದು ಅರ್ಥ ಆದಷ್ಟು ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸಿ

ಮಕ್ಕಳನ್ನು ಅತೀಯಾದ ಬೀಗಿಯಿಂದ (ಹದ್ದುಬಸ್ತಿನಲ್ಲಿ)ಇಟ್ಟುಕೊಳ್ಳುವುದು

ಪೋಷಕರಾದವರು ತಮ್ಮ ಮಕ್ಕಳನ್ನು ಅತೀಯಾಗಿ ಸ್ಟ್ರೀಕ್ಟಆಗಿ ಬೆಳೆಸುವುದರಿಂದ ಹೆಚ್ಚು ಮಕ್ಕಳು ಹಾಳಾಗಿರುವ ಉದಾಹರಣೆಗಳನ್ನು ನಾವು ನೋಡುತ್ತಿದ್ದೇವೆ ಆದ್ದರಿಂದ ಮಕ್ಕಳನ್ನು ಅತೀ ಬಿಗಿಯಾಗಿ ಮತ್ತು ಅತೀ ಪ್ರೀತಿಯಿಂದ ಬೆಳೆಸಬಾರದು ಎಲ್ಲದಕ್ಕೂ ಒಂದು ಮಿತಿ ಇರಬೇಕು

ಪ್ರೀತಿ, ಸ್ನೇಹವನ್ನು ತಡೆಯಬಾರದು

ಭಾವನಾತ್ಮಕ ಅಥವಾ ದೈಹಿಕ ಕಿರುಕುಳದ ರೂಪದಲ್ಲಿ ನಿಮ್ಮ ಪ್ರೀತಿ ವ್ಯಕ್ತವಾಗಬಾರದು ಇದು ಮಗುವಿನ ಮನಸಿನ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ. ಒಂದು ವಯಸ್ಸಿನವರೆಗೂ ಮಕ್ಕಳನ್ನು ದೇವರಂತೆ ಕಾಣಿ, ಮಧ್ಯ ವಯಸ್ಸಿನಲ್ಲಿ ಮಕ್ಕಳನ್ನು ಉತ್ತಮ ಸಮಾಜದ ಕೊಡುಗೆ ಯಾಗುವಂತೆ ಕಾಣಿ ವಯಸ್ಸಿಗೆ ಬಂದ ಮೇಲೆ ಸ್ನೇಹಿತರಂತೆ ಕಾಣಿ.

LEAVE A REPLY

Please enter your comment!
Please enter your name here