ಸೌಂದರ್ಯ ಸಾಧನಗಳಿರುವುದು ಮಹಿಳೆಯರಿಗೆ ಮಾತ್ರವಲ್ಲ. ಪುರುಷರು ಸಹ ಅಂದವಾಗಿ ಕಾಣಲು ಸ್ಪಾ, ಮೆನ್ಸ್ ಪಾರ್ಲರ್‍ಗೆ ಹೋಗಿ ಮಸಾಜ್, ಫೇಶಿಯಲ್ ಮತ್ತಿತರ ಸೌಂದರ್ಯ ಮಂತ್ರ ಪಾಲಿಸಬಹುದು. ನೀವು ಸ್ಪಾ, ಬ್ಯೂಟಿ ಪಾರ್ಲರ್ ಗೆ ಹೋಗಬೇಕು ಅಂತೀಲ್ಲ ಮನೆಯಲ್ಲಿಯೇ ಕುಳಿತು ನಿಮ್ಮ ವಿರಾಮದ ಸಮಯದಲ್ಲಿ ಮಾಡಬಹುದಾದ ಕೆಲವು ಟಿಪ್ಸ್ ಇಲ್ಲಿವೆ

ಗಂಡಸರ ಮುಖದಲ್ಲಿ ಮೊಡವೆಗಳು ತಪ್ಪಿದ್ದಲ್ಲ ಒಂದು ವೇಳೆ ನಿಮ್ಮ ಮುಖದ ಮೇಲೆ ತುಂಬಾ ಮೊಡುವೆಗಳಿದ್ದರೆ ಮುಖಕ್ಕೆ ಪುದೀನಾ ರಸಹಚ್ಚಿ 10 ನಿಮಿಷದ ಬಳಿಕ ತೊಳೆಯಿರಿ. ಇದರಿಂದ ಮೊಡವೆಯಿಂದ ಮುಕ್ತರಾಗಬಹುದು

ಸ್ವಲ್ಪ ಅರಿಶಿನ ಪುಡಿಯ ಜತೆ ಹಾಲಿನ ಕೆನೆ ಮತ್ತು ರೋಸ್ ವಾಟರ್ ಮಿಶ್ರಣ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ

ಬಾಳೆಹಣ್ಣನ್ನು ಸ್ಮ್ಯಾಷ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ತೊಳೆಯಿರಿ ಇದರಿಂದ ಮುಖ ಲವಲವಿಕೆಯಿಂದ ಕೊಡಿರುತ್ತದೆ

ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಆಗಿದ್ದರೆ ಸೌತೆಕಾಯಿ ಪೇಸ್ಟ್ ಅಥವಾ ಆಲೂಗಡ್ಡೆಯನ್ನು ದುಂಡಗೆ ಕತ್ತರಿಸಿಕೊಂಡು ಕಣ್ಣಿನ ಮೇಲೆ 20 ನಿಮಿಷ ಇಟ್ಟುಕೊಂಡರೆ ಕಲೆ ಮಾಯವಾಗುತ್ತವೆ

ತಲೆಸ್ನಾನಕ್ಕೆ ಹೋಗುವ ಮುನ್ನ ತಲೆಗೆ ನಿಂಬೆ ರಸ ಹಚ್ಚಿಕೊಳ್ಳುವುದರಿಂದ ಪಿತ್ತ ಮತ್ತು ತಲೆ ಹೊಟ್ಟು ಕಡಿಮೆಯಾಗುತ್ತದೆ

LEAVE A REPLY

Please enter your comment!
Please enter your name here