ಬೆನ್ನು ನೋವು ಇತ್ತೀಚಿಗೆ ಸಾಮಾನ್ಯವಾಗಿದೆ, ಚಿಕ್ಕರಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರಲ್ಲೂ ಈ ನೋವ್ವು ಇತ್ತೀಚಿಗೆ ಹೆಚ್ಚಾಗಿ ಕಾಣಿಸುಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕರಣ ನಾವು ತಿನ್ನುವ ಆಹಾರ ಪದಾರ್ಥಗಳು ಹಾಗೂ ನಾವು ತಿನ್ನುವ ಆಹಾರ ಕ್ರಮ ಎಂದರೆ ಎಲ್ಲರು ಒಪ್ಪಲೇ ಬೇಕು. ಇಂದಿನ ಜೀವನ ಶೈಲಿಯಲ್ಲಿ ಒಂದೇ ಬದಿ ಕುಳಿತು ಕೆಲಸ ಮಾಡುವುದೇ ಹೆಚ್ಚು, ಮಾನಸಿಕ ಒತ್ತಡ, ಹಾಗೂ ದೇಹಕ್ಕೆ ಬೇಕಾದ ವ್ಯಾಯಾಮ ಮಾಡದೇ ಇರುವುದು ಸಹ ಕಾರಣವಾಗುತ್ತದೆ.

ಅತೀ ಹೆಚ್ಚಾಗಿ ಬೆನ್ನು ನೋವು ಕಾಣಿಸಿಕೊಂಡಾಗ ಬಿಸಿ ಬಿಸಿಯಾದ ಪದಾರ್ಥ ಸೇವಿಸುವುದು ಒಳಿತು. ಅದರಲ್ಲಿಯೂ ವಿಟಮಿನ್ ಡಿ ಕೊರತೆಯಿಂದ ಹಲವರಲ್ಲಿ ಬೆನ್ನು ನೋವು ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ವಿಟಮಿನ್ ಡಿ ಇರುವ ಅಣಬೆ, ಕಾಡ್ ಲಿವರ್, ಮೊಟ್ಟೆ, ಸೊಪ್ಪು ತರಕಾರಿಗಳನ್ನ ಸೇವಿಸುವುದು ಉತ್ತಮ.

ಅಲ್ಲದೇ ದಿನನಿತ್ಯದ ಬಳಕೆಯಲ್ಲಿ ವಿಟಮಿನ್ ಸಿ ಇರುವ ಆಹಾರಗಳನ್ನ ಸೇವಿಸಿ. ಇದರ ಜತೆಗೆ ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡಿ. ಅಲ್ಲದೇ ಕೊಬ್ಬು ಇರುವ ಆಹಾರ ಪದಾರ್ಥಗಳು, ಖಾರ ಪದಾರ್ಥಗಳು ಹಾಗೂ ಎಣ್ಣೆಯುಕ್ತ ಪದಾರ್ಥಗಳು, ಮೊಸರು, ಸಿಹಿ ತಿಂಡಿಗಳು, ಸಕ್ಕರೆ, ಉಪ್ಪಿನಕಾಯಿ, ಟೀ-ಕಾಫಿ ಬಳಕೆಯನ್ನು ಕಡಿಮೆ ಮಾಡಿ.

ಪ್ರತಿ ದಿನ ಪ್ರಾಣಾಯಾಮ ಮಾಡುವುದರಿಂದ ಬೆನ್ನುನೋವಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದ್ದು, ಸೂಕ್ತ ಸಲಹೆ ಪಡೆದು ನಂತರ ಪ್ರಾಣಾಯಾಮವನ್ನು ಪ್ರತಿದಿನ ಜೀವನ ಶೈಲಿಯಲ್ಲಿ ರೂಢಿಸಿಕೊಳ್ಳಿ. ಅತಿಯಾದ ಮಾನಸಿಕ ಒತ್ತಡ ಕೂಡ ಬೆನ್ನುನೋವಿಗೆ ಪ್ರಮುಖ ಕಾರಣವಾಗಿದ್ದು ಆದಷ್ಟು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಅದಕ್ಕೆ ಪೂರಕವಾಗಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಒಂದೊಮ್ಮೆ ಬೆನ್ನು ನೋವು ಅತಿಯಾಗಿ ಕಂಡು ಬಂದಲ್ಲಿ ಬೆನ್ನು ಮೂಳೆಯ ತೊಂದರೆ ಇರುವ ಸಾಧ್ಯತೆಯೂ ಇದ್ದು ನುರಿತ ವೈದ್ಯರನ್ನು ಸಂದರ್ಶಿಸುವುದು ಒಳಿತು.

LEAVE A REPLY

Please enter your comment!
Please enter your name here