ಬಳ್ಳಾರಿಯ ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇಗುಲದಲ್ಲಿ ಪುಷ್ಕರಣಿಯೊಂದು ಪತ್ತೆಯಾಗಿದೆ. ಸಣ್ಣ ಹಾಗು ಸುಂದರ ಕೆತ್ತನೆ ಹೊಂದಿರುವ ಈ ಪುಷ್ಕರಣಿ ಒಳಗೆ ಇಳಿಯಲು ಒಂದು ಭಾಗದಲ್ಲಿ ಮೆಟ್ಟಿಲುಗಳಿವೆ ಮತ್ತು ಈ ಪುಷ್ಕರಣಿಯ ಮಧ್ಯದಲ್ಲಿ ಒಂದು ನಂದಿ ವಿಗ್ರಹವಿದೆ.

ವಿರೂಪಾಕ್ಷೇಶ್ವರ ದೇಗುಲದ ಪ್ರವೇಶ ದ್ವಾರದ ಎಡಬದಿಯಲ್ಲಿ ನಿರ್ಮಿಸಿದ್ದ ಯಾತ್ರಾರ್ಥಿಗಳ ಕೊಠಡಿಗಳನ್ನು ಇತ್ತೀಚಿಗೆ ತೆರವುಗೊಳಿಸಿ ಅಲ್ಲಿ ಹಾಸುಗಲ್ಲುಗಳನ್ನು ಕಟ್ಟುತ್ತಿದ್ದರು. ಈ ಸಂದರ್ಭದಲ್ಲಿ ಕೆತ್ತನೆಯ ಕಲ್ಲುಗಳು ಕಂಡು ಬಂದಿದ್ದರಿಂದ ಈ ನೆಲವನ್ನು ಇತ್ತೀಚಿಗೆ ಅಗೆದಿದ್ದರು. ಈ ವೇಳೆ ಕಲ್ಯಾಣಿ ಪತ್ತೆಯಾಗಿದೆ ಪತ್ತೆಯಾದ ಪುಷ್ಕರಣಿಯ ಬಗ್ಗೆ ಸಿಬ್ಬಂದಿಗಳು ಪರೀಶಿಲನೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

LEAVE A REPLY

Please enter your comment!
Please enter your name here