ಮಲ್ಲೇಶ್ ಅಂದರೆ ತಕ್ಷಣ ತಿಳಿಯದೆ ಇರಬಹುದು ಆದ್ದರೆ ವಠಾರ ಮಲ್ಲೇಶ್ ಅಂದರೆ ನೆನಪಿಗೆ ಬಂದೆ ಬರುತ್ತಾರೆ, ತಮ್ಮ 42 ಪ್ರಾಯದಲಿದ್ದ ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು, ಎರಡು ಕಿಡ್ನಿ ಹಾಗು ಬ್ರೇನ್ ಸ್ಟ್ರೋಕ್ ನಿಂದ ಬಳಲುತ್ತಿದ್ದ ಅವರು ಬೆಂಗಳೂರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದ ಕಾರಣದಿಂದಾಗಿ ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಬಂದಿದ್ದರು.

ಆದ್ರೆ ಇಂದು ಬೆಳಗ್ಗೆ ಆನೇಕಲ್​​ನ ತಮ್ಮ ಮನೆಯಲ್ಲೇ ಮಲ್ಲೇಶ್ ಕೊನೆಯುಸಿರೆಳೆದಿದ್ದಾರೆ. ಮಲ್ಲೇಶ್ ಬನ್ನೇರುಘಟ್ಟದ ಜಂಗಲಪಾಳ್ಯದಲ್ಲಿ ವಾಸವಾಗಿದ್ದರು. ಮಲ್ಲೇಶ್ ಮೂಲತಃ ಕೃಷಿಕ ಕುಟುಂಬದವರಾಗಿದ್ದು, ಟೆಲಿಫೋನ್ ಬೂತ್ ಕೆಲಸ ಮಾಡುತ್ತಿದ್ದರು. ಒಂದು ದಿನ `ವಠಾರ’ ಧಾರಾವಾಹಿ ಮ್ಯಾನೇಜರ್ ಮಂಜುನಾಥ್ ಇವರ ಟೆಲಿಫೋನ್ ಬೂತ್‍ಗೆ ಬಂದಿದ್ದರು. ಅಲ್ಲಿ ಮಲ್ಲೇಶ್ ಅವರನ್ನು ನೋಡಿ ಧಾರಾವಾಹಿಯಲ್ಲಿ ನಟಿಸುವಂತೆ ಅವಕಾಶ ನೀಡಿದ್ದರು. ಆ ಮೂಲಕ ಕಿರುತೆಗೆ ಕಾಲಿಟ್ಟಿದ್ದರು.

LEAVE A REPLY

Please enter your comment!
Please enter your name here