ದೊಡ್ಡ ಹೂಡಿಕೆದಾರರನ್ನು ಹೊರದೇಶದಿಂದ ಭಾರತಕ್ಕೆ ಸೆಳೆಯುವ ಸಾಹಸದಲ್ಲೇ ಮುಳುಗಿಹೋಗಿದ್ದ ಮೋದಿ ಸರ್ಕಾರ ರೈತರ ಬಗ್ಗೆ ಯೋಚನೆ ಮಾಡುವುದನ್ನು ಮರೆತು ಬಿಟ್ಟಿತ್ತು, ಕೊನೆಗೂ ಅನ್ನದಾತನ ಕರೆಗೆ ಕಿವಿಕೊಟ್ಟ ಕೇಂದ್ರ ಸರ್ಕಾರ ಭತ್ತ, ಕಬ್ಬು, ತೊಗರಿ ಸೇರಿದಂತೆ 17 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಒಪ್ಪಿಗೆ ನೀಡಿದೆ.

ಯಾವ ಬೆಳೆ, ಎಷ್ಟು ಏರಿಕೆ?
ದೇಶದ ಪ್ರಮುಖ ಬೆಳೆಯಾಗಿರುವ ಭತ್ತದ ಬೆಲೆ ಪ್ರತಿ ಕ್ವಿಂಟಲ್‍ಗೆ 200 ರೂ. ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಏರಿಸುವ ನಿರ್ಧಾರ ಕೈಗೊಂಡಿದೆ. ಹೀಗಾಗಿ ಸಾಮಾನ್ಯ ಭತ್ತದ ಸದ್ಯದ ಬೆಲೆ 1,550 ರೂ. ಇದ್ದು, ಅದನ್ನು 1,750 ರೂ.ಗೆ ಹೆಚ್ಚಳ ಮಾಡಿದೆ. ಅಲ್ಲದೇ ಎ ಗ್ರೇಡ್ ಭತ್ತದ ಬೆಲೆಯನ್ನು 1,590 ರೂ. ದಿಂದ 1,770 ರೂ., ಸೋಯಾಬೀನ್ ಬೆಲೆ 3,050 ರೂ. ದಿಂದ 3,399 ರೂ., ಶೇಂಗಾ ಬೆಲೆ 4,450 ರೂ. ದಿಂದ 4,890 ರೂ. ಹೆಚ್ಚಳ ಮಾಡಿದೆ.

ರಾಗಿಯ ಬೆಲೆ ಸದ್ಯ ಪ್ರತಿ ಕ್ವಿಂಟಾಲ್‍ಗೆ 1,900 ರೂ. ಇದ್ದು, 2,897 ರೂ.ಗೆ ಏರಿಕೆ ಸೇರಿದಂತೆ, ನೈಗರ್ ಸೀಡ್ (ಗುರೆಳ್ಳು) ಬೆಲೆ 4,050 ರೂ. ನಿಂದ 5,877 ರೂ., ಹೈಬ್ರೀಡ್ ಜೋಳದ ಬೆಲೆ 1,700 ರೂ. ದಿಂದ 2,430 ರೂ., ಜವಾರಿ ಜೋಳದ ಬೆಲೆ 1,725 ರೂ. ದಿಂದ 2450 ರೂ., ಸಜ್ಜೆಯ ಬೆಲೆ 1,425 ರೂ. ರಿಂದ 1,950 ರೂ., ಸೂರ್ಯಕಾಂತಿ ಬೀಜದ ಬೆಲೆ 4,100 ರೂ. ದಿಂದ 5,388 ರೂ., ಹತ್ತಿ (ಮಧ್ಯಮ ಎಳೆ) ಬೆಲೆ 4,020 ರೂ. ದಿಂದ 5,150 ರೂ., ಹತ್ತಿ (ಉದ್ದ ಏಳೆ) ಬೆಲೆ 4320 ರೂ. ದಿಂದ 5,450 ರೂ. ಏರಿಕೆಗೆ ಕ್ಯಾಬಿನೇಟ್‍ನಲ್ಲಿ ಅನುಮೋದನೆ ದೊರೆತಿದೆ.

ಹೆಸರು ಕಾಳು ಬೆಲೆ ಪ್ರತಿ ಕ್ವಿಂಟಲ್‍ಗೆ 5,575 ರೂ. ದಿಂದ 6,249 ರೂ. ಏರಿಕೆ ಸೇರಿದಂತೆ, ಗೋವಿನ ಜೋಳ 1425 ರೂ. ದಿಂದ 1700 ರೂ., ಎಳ್ಳು ಬೆಲೆ 5,300 ರೂ. ದಿಂದ 6249 ರೂ., ತೊಗರೆ ಬೆಳೆ 5,450 ರೂ. ದಿಂದ 5,675 ರೂ., ಉದ್ದು 5,400 ರೂ. ದಿಂದ 5,600 ರೂ. ನಿಗದಿ.

ಕಬ್ಬಿಗೆ ನೀಡುವ `ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ (ಎಫ್‍ಆರ್‍ಪಿ) ಮುಂದಿನ ಎರಡು ವಾರಗಳಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ. ಉತ್ತರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಪಂಜಾಬ್ ಸೇರಿದಂತೆ ವಿವಿಧ ರಾಜ್ಯದ ಹೆಚ್ಚು ಇಳುವರಿ ಪಡೆಯುವ 140 ಕಬ್ಬು ಬೆಳೆಗಾರರ ಜೊತೆಗೆ ಪ್ರಧಾನಿ ಚರ್ಚೆ ನಡೆಸಿದ್ದರು.

2019ರ ಲೋಕಸಭಾ ಚುನಾವಣೆ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡುತ್ತಿದ್ದಾರೆ. ಕೃಷಿ ಕ್ಷೇತ್ರ ಅಷ್ಟೇ ಅಲ್ಲದೆ ಸಕ್ಕರೆ ಉತ್ಪಾದನೆಗೂ 8,500 ಕೋಟಿ ರೂ. ಪ್ಯಾಕೇಜ್ ಸೇರಿದಂತೆ ಹಲವು ಘೋಷಣೆಗಳನ್ನು ಪ್ರಧಾನಿ ಮಾಡುವ ಸಾಧ್ಯತೆಯಿದೆ ಯಂದು ಪಬ್ಲಿಕ್ ಟಿವಿ ವರದಿಮಾಡಿದೆ.

LEAVE A REPLY

Please enter your comment!
Please enter your name here