ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಕಾರ್ಯಗಳಲ್ಲಿ ಇಂದಿರ ಕ್ಯಾಂಟೀನ್ ಕೂಡ ಒಂದು, ರೈತರ ಸಾಲ ಮನ್ನಾ ವತ್ತಡ ರಾಜ್ಯದ ಮೇಲಿದೆ ಹಾಗು ಈ ಸಾಲದ ಬಜೆಟ್ ನಲ್ಲಿ ಆರ್ಥಿಕ ಸಂಕಷ್ಟ ಹೊರೆ ರಾಜ್ಯದ ಮೇಲಿದೆ ಈ ನೆಪವೊಡ್ಡಿ ಕುಮಾರಸ್ವಾಮಿ ಯವರು ಇಂದಿರ ಕ್ಯಾಂಟೀನ್ ಮತ್ತು ಇತರ ಹಿಂದಿನ ಕಾಂಗ್ರೆಸ್ ಸರ್ಕಾರದ ಕೆಲವು ಯೋಜನೆಗಳಿಗೆ ಕತ್ತರಿ ಹಾಕುವ ಸಂಭವಗಲಿದೆ ಎನ್ನಲಾಗಿದೆ.

ಬಜೆಟ್​ನಲ್ಲಿ ಸಾಲಮನ್ನಾ ಘೋಷಿಸಿ, ಹಣಕಾಸು ಕೊರತೆ ನೆಪವೊಡ್ಡಿ ಹಿಂದಿನ ಸರ್ಕಾರದ ಕಾರ್ಯಕ್ರಮಗಳಿಗೆ ತಡೆ ಒಡ್ಡಬಹುದು. ಇದರಿಂದ ಸಮ್ಮಿಶ್ರ ಸರ್ಕಾರದಲ್ಲಿ ಜನರಿಗೆ ಕಾಂಗ್ರೆಸ್ ಮೇಲಿನ ನಂಬಿಕೆ ಕಡಿಮೆ ಆಗಬಹುದು. ಇದು ನಮಗೆ ಮುಂದೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

LEAVE A REPLY

Please enter your comment!
Please enter your name here