ಈಗಂತೂ ಯಾರ ಕೈನಲ್ಲೂ ನೋಡಿದರೂ ಸ್ಮಾರ್ಟ್ ಫೋನ್ ಗಳೇ  ನಿಮ್ಮ ಬಜೆಟ್ ಗೆ ತಕ್ಕಂತೆ ಈಗಂತೂ ಸಾಕಷ್ಟು ವಿಶಿಷ್ಟ ಫೋನ್ ಗಳು ಸಿಗುತ್ತಿವೆ.. ಇಂತಹ ಸ್ಮಾರ್ಟ್ಫೋನ್ ಗಳಲ್ಲಿ ಹಲವಾರು ಕೊರತೆಗಳು ನಮ್ಮ ಬಳಕೆದಾರರಲ್ಲಿ ಸಾಕಷ್ಟು ಕಿರಿಕಿರಿ ಕೊಡುತ್ತವೆ ಅದರಲ್ಲೂ ಸ್ಪೇಸ್ (Space ) ಇಶ್ಯೂ ಅತ್ಯಂತ ಪ್ರಮುಖವಾದದ್ದು, ಇದರಿಂದ ಬಳಕೆದಾರರು ಹೊಸ ಅಪ್ಲಿಕೇಶನ್ ಗಳನ್ನೂ ಇನ್ಸ್ಟಾಲ್ ಮಾಡಿಕೊಳ್ಳಲಾಗದೆ ಒದ್ದಾಡುತ್ತಿರುತ್ತಾರೆ, ಇಂತಹ ಸ್ಟೋರೇಜ್ ಗೆ ಸಂಭಂದ ಪಟ್ಟ ತೊಂದರೆಗಳಿಗೆ ಏನೆಲ್ಲ ಮಾಡಬಹುದು ಎಂದು ನಾವು ನಿಮಗೆ ತೋರಿಸಿ ಕೊಡುತ್ತೇವೆ.

೧) ನಿಮ್ಮ ಅಪ್ಲಿಕೇಶನ್ ಗಳ ಕ್ಯಾಶೆ (CACHE) ಮೆಮೊರಿ ಅನ್ನು ಅಳಿಸಿಹಾಕಿ:

ಯಾವುದೇ ಒಂದು ಅಪ್ಲಿಕೇಶನ್ ಗಳಲ್ಲಿ cache  ಮೆಮೊರಿ ಎನ್ನುವ ಟೆಂಪರರಿ ಮೆಮೊರಿ ಇದ್ದೆ ಇರುತ್ತದೆ, ಇದರಲ್ಲಿ ನಮಗೆ ಬೇಕಾಗಿರದ ಹಲವು ಫೈಲುಗಳು ಇರುವುದರಿಂದ ನಮ್ಮ ಸ್ಮಾರ್ಟ್ಫೋನ್ ನ ಮೆಮೊರಿ ಯನ್ನು ಇದು ವೃತಾ ಬಳಸಿಕೊಳ್ಳುತ್ತಿರುತ್ತದೆ ಇದರಿಂದ ನಿಮ್ಮ ಫೋನ್ ನ ಮೆಮೊರಿ ಕಡಿಮೆಯಾಗಬಹುದು, ಹಾಗು ನಿಮ್ಮ ಫೋನ್ ಸ್ಲೋ ಕೂಡ ಆಗಬಹುದು.

೨) ಫೋಟೋ ಬ್ಯಾಕಪ್ ಅನ್ನು ಕ್ಲಿಯರ್ ಮಾಡುತ್ತಿರಿ:

ಸ್ಮಾರ್ಟ್ಫೋನ್ ಎಂದಾಕ್ಷಣ ಕ್ಯಾಮೆರಾ ಫೀಚರ್ ಎಲ್ಲರಿಗೂ ಇಷ್ಟವಾಗುವಂತದ್ದು, ನಾವು ಬೇಕಾಗಿರುವ ಅಥವಾ ಬೇಡಾಗಿರುವ ಸಾವಿರಾರು ಫೋಟೋಗಳನ್ನು ಅದರಲ್ಲಿ ಕ್ಲಿಕ್ಕಿಸಿರುತ್ತೇವೆ, ಇದು ನಮ್ಮ ಫೋನ್ ಮೆಮೊರಿಯಲ್ಲಿ ಉಳಿದು ಅರ್ಧ ಮೆಮೊರಿ ಸಾಮರ್ಥ್ಯವನ್ನು ತಿಂದುಬಿಟ್ಟಿರುತ್ತದೆ, ಇದರಿಂದ ಹೊರಬರಲು ನಿಮಗೆ ಬೇಡವಾದ ಹಲವಾರು ಫೋಟೋಗಳನ್ನು ಡಿಲೀಟ್ ಮಾಡಿ ಹಾಗು ಬೇಕಾಗಿರುವ ಫೋಟೋಗಳನ್ನು ಗೂಗಲ್ ಫೋಟೋ ಅಥವಾ ಬೇರೆ ಯಾವುದೇ ಕ್ಲೌಡ್ ಗಳಲ್ಲಿ ಸೇವ್ ಮಾಡಿರಿ, ಇದರಿಂದ ನಿಮ್ಮ ಫೋನ್ ಗಣನೀಯವಾಗಿ ವೇಗಪಡೆದುಕೊಳ್ಳುತ್ತದೆ.

೩) ಡೀಫಾಲ್ಟ್ (DEFAULT) ಮೆಮೊರಿಯನ್ನು ಫೋನ್ ಮೆಮೋರಿಯಿಂದ ಮೈಕ್ರೋ ಕಾರ್ಡ್ ಗೆ ಬದಲಾಯಿಸಿಕೊಳ್ಳಿ.

ಹಲವಾರು ಸ್ಮಾರ್ಟ್ಫೋನ್ ಗಳಲ್ಲಿ default  ಮೆಮೊರಿ ಯಾಗಿ ಫೋನ್ ಮೆಮೊರಿ ಯಾಗಿರುತ್ತದೆ ಇದನ್ನು ನಿಮ್ಮ ಮೆಮೊರಿ ಕಾರ್ಡ್ ಮೆಮೊರಿ ಮಾಡುವುದರಿಂದ ನೀವು ಡೌನ್ಲೋಡ್ ಮಾಡಿದ, ಫೋಟೋ ಕ್ಲಿಕ್ಕಿಸಿದ್ದ , ಅಥವಾ ಇನ್ನು ಹಲವಾರು ನಿತ್ಯ ಬಳಕೆಯ ಫೈಲುಗಳು ಮೆಮೊರಿ ಕಾರ್ಡ್ ಅಲ್ಲಿ ಸಂಗ್ರಹಿಸಲ್ಪಡುತ್ತವೆ ಇದರಿಂದ ಫೋನ್ ಮೆಮೊರಿ ಖಾಲಿಗಾಗಿಯೇ ಉಳಿದು, ನಿಮ್ಮ ಸ್ಮಾರ್ಟ್ಫೋನ್ ಸ್ಮಾರ್ಟ್ ಆಗಿಯೇ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ.

೪) ಬೇಡದ ಅಪ್ಲಿಕೇಶನ್ ಗಳನ್ನು Uninstall ಮಾಡಿ:

ನಿಮ್ಮ ಫೋನ್ ಗಳಲ್ಲಿ ಉಪಯೋಗಕ್ಕೆ ಬರುವ ಅಪ್ಲಿಕೇಶನ್ ಗಳಿಗಿಂತಾ ಉಪಯೋಗಕ್ಕೆ ಬರದೇ ಇರುವ ಅಪ್ಲಿಕೇಶನ್ ಗಳೆ ಹೆಚ್ಚಾಗಿರುತ್ತವೆ, ಆದಷ್ಟು ನಿಮಗೆ ಬೇಕಾಗಿರದ ಅಪ್ಪ್ಲಿಕೇಷನ್ಗಳನ್ನು uninstall  ಮಾಡಿ ಇದರಿಂದ ನಿಮಗೆ ಉಪಯೋಗವಾಗುವ ಅಪ್ಲಿಕೇಶನ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಇನ್ಸ್ಟಾಲ್ ಮಾಡಿಕೊಳ್ಳಲು ಜಾಗ ಸಿಕ್ಕಂತಾಗುತ್ತದೆ.

LEAVE A REPLY

Please enter your comment!
Please enter your name here