ಮೇಷ ರಾಶಿ:

ಅಶಕ್ತ ದೇಹ ಮನಸ್ಸನ್ನು ದುರ್ಬಲಗೊಳಿಸುವುದರಿಂದ ನಿಮ್ಮ ಶಕ್ತಿಯನ್ನು ಮರಳಿ ಪಡೆಯಲು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಿ. ನಿಮ್ಮಲ್ಲಿ ಸಾಮರ್ಥ್ಯದ ಕೊರತೆಯಿರದೇ ಇಚ್ಛಾಶಕ್ತಿಯ ಕೊರತೆಯಿದೆಯೆಂದು ನೀವು ಅರ್ಥಮಾಡಿಕೊಳ್ಳಬೇಕು. ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಮಕ್ಕಳೊಂದಿಗೆ ವಾದ ಮಾನಸಿಕ ಒತ್ತಡ ತರುತ್ತದೆ – ಕೆಲವು ಸಮಸ್ಯೆಗಳನ್ನು ಕೆದಕದಿರುವುದೇ ಉತ್ತಮವಾದ್ದರಿಂದ ಒಂದು ಹಂತಕ್ಕಿಂತ ಹೆಚ್ಚು ತೊಂದರೆ ತೆಗೆದುಕೊಳ್ಳಬೇಡಿ. ನಿಮ್ಮ ಪ್ರೀತಿಪಾತ್ರರ ಅನುಪಸ್ಥಿತಿ ನಿಮ್ಮ ಹೃದಯವನ್ನು ಕೋಮಲಗೊಳಿಸುತ್ತದೆ. ನೀವು ಇಂದು ಪ್ರಯಾಣಿಸುತ್ತಿದ್ದರೆ ನಿಮ್ಮ ಸಾಮಾನಿನ ಬಗ್ಗೆ ಹೆಚ್ಚುವರಿ ಕಾಳಜಿ ತಗೆದುಕೊಳ್ಳಬೇಕಾಗುತ್ತದೆ. ನೀವು ಇಂದು ನಿಮ್ಮ ಸಂಗಾತಿಯ ಮೇಲೆ ಅನುಮಾನ ಪಡಬಹುದು ಹಾಗೂ ಇದು ಸಾಮರಸ್ಯಕ್ಕೆ ತೊಂದರೆಯುಂಟುಮಾಡಬಹುದು.

ಅದೃಷ್ಟ ಸಂಖ್ಯೆ: 2

ವೃಷಭ ರಾಶಿ :

ನಿಮ್ಮ ಕುಟುಂಬದ ಜೊತೆ ನಿಮ್ಮ ಸಮಯವನ್ನು ವ್ಯಯಿಸಿ ಪ್ರತ್ಯೇಕತೆ ಮತ್ತು ಒಂಟಿತನದ ಭಾವನೆಯನ್ನು ತೊಡೆದುಹಾಕಿ. ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ. ಬಾಕಿಯಿರುವ ಮನೆಕೆಲಸಗಳು ನಿಮ್ಮ ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ. ತಪ್ಪು ಸಂವಹನೆ ಅಥವಾ ಒಂದು ಸಂದೇಶ ನಿಮ್ಮ ದಿನವನ್ನು ಅವರಿಸಬಹುದು. ನಿಮ್ಮ ಶಕ್ತಿ ಮತ್ತು ನಿಮ್ಮ ಮುಂದಿನ ಯೋಜನೆಗಳನ್ನು ಮರು ನಿರ್ಣಯಿಸುವ ಸಮಯ. ಜನರ ಹಸ್ತಕ್ಷೇಪ ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಸಂಬಂಧಕ್ಕೆ ಇಂದು ಧಕ್ಕೆ ತರಬಹುದು.

ಅದೃಷ್ಟ ಸಂಖ್ಯೆ: 1

ಮಿಥುನ ರಾಶಿ :

ನಿಮ್ಮ ಆಕರ್ಷಕ ವರ್ತನೆ ಗಮನ ಸೆಳೆಯುತ್ತದೆ. ಹಣಕಾಸು ಸ್ಥಿತಿ ಊಹಾಪೋಹ ಅಥವಾ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸುತ್ತವೆ. ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧ ಹೊರಗಿನವರ ಅನಗತ್ಯ ಹಸ್ತಕ್ಷೇಪದಿಂದ ಹಾಳಾಗಬಹುದು. ನಿಮ್ಮ ಪ್ರೇಮಿಯ ಜೊತೆಗಿನ ನಿಮ್ಮ ಸಂಬಂಧ ಯಾವುದಾದರೂ ತಪ್ಪು ತಿಳುವಳಿಕೆಯ ಕಾರಣ ಘಾಸಿಗೊಳ್ಳಬಹುದು. ಪ್ರೀತಿ ಗಂಭೀರ ವ್ಯವಹಾರವೆಂದು ನೀವು ನೆನಪಿಡಬೇಕು, ಆದ್ದರಿಂದ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಭಾರೀ ಆತ್ಮವಿಶ್ವಾಸದ ಲಾಭ ತೆಗೆದುಕೊಳ್ಳಿ ಮತ್ತು ಕೆಲವು ಹೊಸ ಗೆಳೆಯರು ಮತ್ತು ಸ್ನೇಹಿತರನ್ನು ಸಂಪಾದಿಸಿ. ಈ ದಿನ ನಿಮ್ಮ ವೈವಾಹಿಕ ಜೀವನದಲ್ಲಿ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ. ನಿಯಂತ್ರಣ ಕಾಯ್ದುಕೊಳ್ಳಲು ಶಾಂತವಾಗಿರಿ.

ಅದೃಷ್ಟ ಸಂಖ್ಯೆ: 8

ಕರ್ಕ ರಾಶಿ :

ನಿಮ್ಮ ಆರೋಗ್ಯ ಸುಧಾರಿಸವುದನ್ನು ಪ್ರಾರಂಭಿಸಲು ಅತ್ಯುತ್ತಮ ದಿನ. ಹೂಡಿಕೆಯ ಬಗೆಗಿನ ನಿರ್ಣಾಯಕ ನಿರ್ಧಾರಗಳನ್ನು ಇನ್ನೊಂದು ದಿನಕ್ಕೆ ಮುಂದೂಡಬೇಕು. ಮಕ್ಕಳು ನಿಮಗೆ ಮನೆಕೆಲಸಗಳನ್ನು ಮಾಡಲು ಸಹಾಯ ಮಾಡುತ್ತಾರೆ. ನಿಮ್ಮ ಪ್ರೇಮ ಸಂಗಾತಿ ನಿಜಕ್ಕೂ ಇಂದು ಅದ್ಭುತವಾದದ್ದನ್ನು ಏನೋ ತರುತ್ತಾರೆ. ಯಾವುದಾದರೂ ಪ್ರಯಾಣದ ಯೋಜನೆಗಳಿದ್ದಲ್ಲಿ- ನಿಮ್ಮ ವೇಳಾಪಟ್ಟಿಯಲ್ಲಿ ಕೊನೆಗಳಿಗೆಯ ಬದಲಾವಣೆಗಳಿಂದ ಮುಂದೂಡಲ್ಪಡುತ್ತವೆ. ನಿಮ್ಮ ಜೀವನದ ಸಂಗಾತಿಯ ಆಂತರಿಕ ಸೌಂದರ್ಯ ಇಂದು ಎದ್ದು ಕಾಣುತ್ತದೆ.

ಅದೃಷ್ಟ ಸಂಖ್ಯೆ: 3

ಸಿಂಹ ರಾಶಿ :

ಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನಿಮ್ಮ ಹಣಕಾಸಿನಲ್ಲಿ ಅತೀ ಉದಾರವಾಗಿದ್ದಲ್ಲಿ ನಿಮ್ಮ ದುರುಪಯೋಗ ತೆಗೆದುಕೊಳ್ಳಲಾಗುತ್ತದೆ. ಸಂಜೆ ಸ್ನೇಹಿತರೊಡನೆ ಹೋಗಿ – ಇದು ತುಂಬ ಒಳ್ಳೆಯದನ್ನು ಮಾಡುತ್ತದೆ. ನಿಮ್ಮ ಸಂಗಾತಿಯ ಜೊತೆ ಹೊರಹೋಗುವಾಗ ಸಭ್ಯತೆಯಿಂದ ವರ್ತಿಸಿ. ವೈಯಕ್ತಿಕ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ನಿಮ್ಮ ಧರ್ಮಪತ್ನಿಯನ್ನು ನಿಯಮಿತವಾಗಿ ಅಚ್ಚರಿಗೊಳಿಸುತ್ತಿರಿ; ಇಲ್ಲದಿದ್ದರೆ ಅವರಿಗೆ ಅಭಧ್ರತೆಯ ಭಾವನೆ ಕಾಡಬಹುದು.

ಅದೃಷ್ಟ ಸಂಖ್ಯೆ: 8

ಕನ್ಯಾ ರಾಶಿ :

ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ನೀವು ಇತರರ ಮೇಲೆ ಹೆಚ್ಚು ಖರ್ಚು ಮಾಡಬಯಸುತ್ತೀರಿ. ಹಳೆಯ ಸಂಪರ್ಕಗಳು ಮತ್ತು ಸಂಬಂಧಗಳ ಪುನಶ್ಚೇತನಕ್ಕೆ ಒಳ್ಳೆಯ ದಿನ. ಪ್ರಣಯದ ಅವಕಾಶಗಳಿವೆ – ಆದರೆ ಅವು ಕ್ಷಣಿಕವಾಗಿರುತ್ತವೆ. ಕಟ್ಟುಕತೆಗಳು ಮತ್ತು ವದಂತಿಗಳಿಂದ ದೂರವಿರಿ. ವಿವಾದಗಳಿರಲಿ ಅಥವಾ ಕಚೇರಿ ರಾಜಕೀಯವಿರಲಿ; ನೀವು ಇಂದು ಎಲ್ಲದರಲ್ಲೂ ಅದ್ಭುತವಾಗಿರುತ್ತೀರಿ.

ಅದೃಷ್ಟ ಸಂಖ್ಯೆ: 8

ತುಲಾ ರಾಶಿ :

ನಿಮ್ಮ ಅಹಾರ ಕ್ರಮದ ಬಗ್ಗೆ, ವಿಶೇಷವಾಗಿ ಮೈಗ್ರೇನ್ ರೋಗಿಗಳು ಸೂಕ್ತ ಎಚ್ಚರ ತೆಗೆದುಕೊಳ್ಳಬೇಕು. ಅವರು ತಮ್ಮ ಊಟ ತಪ್ಪಿಸಿಕೊಂಡಲ್ಲಿ ಅದು ಅವರಿಗೆ ಅನಗತ್ಯ ಭಾವನಾತ್ಮಕ ಒತ್ತಡವನ್ನು ಉಂಟುಮಾಡಬಹುದು. ಹೂಡಿಕೆ ಶಿಫಾರಸು ಮಾಡಲಾಗಿದ್ದರೂ ಸರಿಯಾದ ಸಲಹೆ ಪಡೆಯಬೇಕು. ನಿಮ್ಮ ಮನೆಯ ಕರ್ತವ್ಯಗಳನ್ನು ನೀವು ನಿರ್ಲಕ್ಷಿಸಿದ್ದಲ್ಲಿ ನಿಮ್ಮ ಜೊತೆಗಿರುವ ಯಾರಾದರೂ ಸಿಟ್ಟಾಗಬಹುದು. ಚಿಕ್ಕ ವ್ಯತ್ಯಾಸಗಳು ಉದ್ಭವಿಸುವುದರಿಂದ ಪ್ರಣಯಕ್ಕೆ ಹಿನ್ನೆಡೆಯುಂಟಾಗುತ್ತದೆ. ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ. ನೀವು ಕೆಲಸದಲ್ಲಿ ಇಂದು ನಿಮ್ಮ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರಿತುಕೊಳ್ಳುತ್ತೀರಿ. ಈ ದಿನ ನಿಜವಾಗಿಯೂ ಕಷ್ಟಕರವಾಗಿದೆ.

ಅದೃಷ್ಟ ಸಂಖ್ಯೆ: 2

ವೃಶ್ಚಿಕ ರಾಶಿ :

ದೇಹದ ನೋವಿನಿಂದ ಬಳಲುವ ಸಾಧ್ಯತೆ ಹೆಚ್ಚಿದೆ. ನಿಮ್ಮ ದೇಹದ ಮೇಲೆ ಹೆಚ್ಚು ಒತ್ತಡ ಹಾಕುವ ಯಾವುದೇ ದೈಹಿಕ ಪರಿಶ್ರಮವನ್ನು ತಪ್ಪಿಸಲು ಪ್ರಯತ್ನಿಸಿ. ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ. ಹಣಕಾಸಿನಲ್ಲಿ ಸುಧಾರಣೆ ದೀರ್ಘಕಾಲದಿಂದ ಬಾಕಿಯಿರುವ ನಿಮ್ಮ ಬಾಕಿಗಳು ಮತ್ತು ಬಿಲ್ಲುಗಳನ್ನು ಪಾವತಿಸುವುದನ್ನು ಅನುಕೂಲಕರವಾಗಿಸುತ್ತದೆ. ಮಕ್ಕಳೊಂದಿಗೆ ವಾದ ಕಿರಿಕಿರಿಯನ್ನುಂಟುಮಾಡಬಹುದು. ವೈಯಕ್ತಿಕ ವ್ಯವಹಾರಗಳು ನಿಯಂತ್ರಣದಲ್ಲಿರುತ್ತವೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ನಿಮ್ಮ ಸಾಮರ್ಥ್ಯ ನಿಮಗೆ ಗೌರವ ತರುತ್ತದೆ. ಈ ದಿನ ನಿಜವಾಗಿಯೂ ಪ್ರೇಮಭರಿತವಾಗಿದೆ. ಒಳ್ಳೆಯ ಆಹಾರ, ಸುಗಂಧ, ಸಂತೋಷಗಳ ಜೊತೆ ನೀವು ನಿಮ್ಮ ಅರ್ಧಾಂಗಿಯ ಜೊತೆ ಒಳ್ಳೆಯ ಸಮಯ ಕಳೆಯುತ್ತೀರಿ

ಅದೃಷ್ಟ ಸಂಖ್ಯೆ: 4

ಧನು ರಾಶಿ :

ಸಂತೋಷದಿಂದ ತುಂಬಿದ ಒಳ್ಳೆಯ ದಿನ. ಇಂದು ನೀವು ಸುಲಭವಾಗಿ ಬಂಡವಾಳ ಪಡೆಯಬಹುದು -ಬಾಕಿಯಿರುವ ಸಾಲಗಳನ್ನು ಸಂಗ್ರಹಿಸಬಹುದು ಅಥವಾ ಹೊಸ ಯೋಜನೆಗಳಿಗೆ ಕೆಲಸ ಮಾಡಲು ಹಣ ಕೇಳಬಹುದು. ಸಂಬಂಧಿಕರು ಮತ್ತು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು. ನೀವು ಪ್ರೀತಿಯಲ್ಲಿ ನಿಧಾನವಾಗಿ ಆದರೆ ಸ್ಥಿರವಾಗಿ ಉರಿಯಬಹುದು. ತೆರಿಗೆ ಮತ್ತು ವಿಮೆ ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ. ಕೆಲಸದ ಒತ್ತಡ ಹಿಂದಿನಿಂದಲೂ ನಿಮ್ಮ ವೈವಾಹಿಕ ಜೀವನಕ್ಕೆ ಅಡ್ಡಿಪಡಿಸುತ್ತಿದೆ. ಆದರೆ ಇಂದು, ಎಲ್ಲಾ ಕುಂದುಕೊರತೆಗಳೂ ಮಾಯವಾಗುತ್ತವೆ.

ಅದೃಷ್ಟ ಸಂಖ್ಯೆ: 1

ಮಕರ ರಾಶಿ :

ನಿಮ್ಮ ಅನುಮಾನದ ಪ್ರಕೃತಿ ನಿಮಗೆ ಸೋಲಿನ ಮುಖ ತೋರಿಸಬಹುದು. ಹಣದ ಪರಿಸ್ಥಿತಿ ದಿನದಲ್ಲಿ ನಂತರ ಸುಧಾರಿಸುತ್ತದೆ. ಮನೆಯಲ್ಲಿನ ಕೆಲವು ಬದಲಾವಣೆಗಳು ನಿಮ್ಮನ್ನು ಭಾವುಕರನ್ನಾಗಿಸಬಹುದು- ಆದರೆ ನಿಮಗೆ ಮುಖ್ಯವಾದವರಿಗೆ ನೀವು ನಿಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಾಗುತ್ತದೆ. ಹರ್ಷಚಿತ್ತದಿಂದಿರಿ ಹಾಗೂ ಪ್ರೀತಿಯಲ್ಲಿನ ಏಳುಬೀಳುಗಳನ್ನು ಎದುರಿಸುವ ಧೈರ್ಯ ಹೊಂದಿರಿ. ವೈಯಕ್ತಿಕ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ನಿಮ್ಮ ಸಂಗಾತಿಯು ಇಂದು ನಿಮ್ಮ ಅಗತ್ಯಗಳನ್ನು ಅಂತಿಮವಾಗಿ ಪೂರೈಸಲು ನಿರಾಕರಿಸಬಹುದು ಹಾಗೂ ಇದು ಅಂತಿಮವಾಗಿ ನಿಮ್ಮನ್ನು ನಿರಾಶೆಗೊಳಿಸುತ್ತದೆ.

ಅದೃಷ್ಟ ಸಂಖ್ಯೆ: 1

ಕುಂಭ ರಾಶಿ :

ನೀವು ಬಹುಕಾಲದಿಂದ ಎದುರು ನೋಡುತ್ತಿದ್ದ ಜೀವನದ ಒತ್ತಡಗಳಿಂದ ಇಂದು ಶಮನ ಪಡೆಯುತ್ತೀರಿ. ಅವುಗಳನ್ನು ಶಾಶ್ವತವಾಗಿ ದೂರವಿಸಿರಿಸಲು ನಿಮ್ಮ ಜೀವನಶೈಲಿಯನ್ನು ಬದಲಿಸಲು ಇದು ಸರಿಯಾದ ಸಮಯ. ದೀರ್ಘಕಾಲದ ಲಾಭಗಳಿಗೆ ಸ್ಟಾಕ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದನ್ನು ಶಿಫಾರಸು ಮಾಡಲಾಗಿದೆ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ ಕೆಲಸ ಮಾಡುತ್ತಿರುತ್ತವೆ -ನೀವು ಕಾರ್ಯಗಳನ್ನು ತಪ್ಪಿಸಬೇಕು – ಇವು ವ್ಯಾಜ್ಯಗಳಿಗೆ ಕಾರಣವಗಬಹುದು – ನೀವು ಸೇಡು ತೀರಿಸಿಕೊಳ್ಳಬಯಸಿದಲ್ಲಿ ಇದನ್ನು ಘನತವೆತ್ತ ರೀತಿಯಲ್ಲಿ ಮಾಡಬೇಕು . ಇದನ್ನು ಒಂದು ವಿಶೇಷ ದಿನವಾಗಿಸಲು ದಯೆ ಮತ್ತು ಪ್ರೀತಿಯ ಸಣ್ಣ ತುಣುಕುಗಳನ್ನು ನೀಡಿ. ನಿಮ್ಮ ಜೀವನದಲ್ಲಿ ನಂತರ ವಿಷಾದಿಸಬಹುದಾದ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಮಹಿಳೆಯರು ಶುಕ್ರನಿಂದ ಮತ್ತು ಪುರುಷರು ಮಂಗಳನಿಂದ, ಆದರೆ ಇದು ಶುಕ್ರ ಹಾಗು ಮಂಗಳಗಳು ಒಬ್ಬರಲ್ಲೊಬ್ಬರು ಲೀನವಾಗುವ ದಿನ.

ಅದೃಷ್ಟ ಸಂಖ್ಯೆ: 7

ಮೀನ ರಾಶಿ :

ಅತಿಯಾಗಿ ತಿನ್ನುವುದನ್ನು ತಪ್ಪಿಸಿ ಮತ್ತು ಫಿಟ್ ಆಗಿ ಉಳಿಯಲು ನಿಯಮಿತವಾಗಿ ಹೆಲ್ತ್ ಕ್ಲಬ್‌ಗೆ ಭೇಟಿ ನೀಡಿ. ಗೃಹ ಸೌಕರ್ಯಗಳ ಮೇಲೆ ಅಧಿಕವಾಗಿ ಖರ್ಚು ಮಾಡಬೇಡಿ. ನೀವು ಅತೀ ಉದಾರಿಯಾಗಿದ್ದಲ್ಲಿ – ನಿಮ್ಮ ನಿಕಟ ಜನರು ನಿಮ್ಮ ಅನುಚಿತ ಲಾಭ ತೆಗೆದುಕೊಳ್ಳಬಹುದು. ಕೆಲವರಿಗೆ ಹೊಸ ಪ್ರಣಯ ನಿಮ್ಮ ಚೈತನ್ಯವನ್ನು ಪ್ರೇರೇಪಿಸಬಹುದು ಹಾಗೂ ನಿಮ್ಮನ್ನು ಹರ್ಷಚಿತ್ತರಾಗಿರಿಸಬಹುದು. ಒಳ್ಳೆಯ ದಿನ ಕಾನೂನು ಸಲಹೆ ಪಡೆಯಲು ವಕೀಲರನ್ನು ಭೇಟಿ ಮಾಡಿ. ನಿಮ್ಮ ಸಂಗಾತಿಯು ಇಂದು ನಿಮ್ಮನ್ನು ಸಂತೋಷಗೊಳಿಸುವಲ್ಲಿ ಪ್ರಯತ್ನಗಳನ್ನು ಮಾಡುತ್ತಾರೆ.
ಅದೃಷ್ಟ ಸಂಖ್ಯೆ: 5

LEAVE A REPLY

Please enter your comment!
Please enter your name here