ಪುಟ್ಟಣ್ಣರ ನಾಗರಹಾವು ಸಿನೆಮಾದ ಬಗ್ಗೆ ಎಷ್ಟು ಮಾತಾಡಿದರು ಕಡಿಮೆ ಕಾರಣ ಖ್ಯಾತಸಾಹಿತಿ, ಕಾದಂಬರಿಕಾರ ತ.ರಾ.ಸುಬ್ಬರಾಯರು ಬರೆದಿರುವ ನಾಗರಹಾವು ಕಾದಂಬರಿ ಆಧಾರಿತವಾದ ಈ ಚಿತ್ರ, ನಾಯಕನಾಗಿ ವಿಷ್ಣುವರ್ಧನ್ ಅವರ ಮೊದಲ ಚಿತ್ರ, ಅಂಬರೀಶ್ ಅಭಿನಯದ ಮೊದಲ ಚಲನಚಿತ್ರ, ಅಂಬರೀಶ್ ಅಭಿನಯದ ‘ಜಲೀಲ್’ ಪಾತ್ರಕ್ಕೆ ರಜನೀಕಾಂತ್ ಆಯ್ಕೆಯಾಗಿದ್ದರು. ಹಲವಾರು ದೃಶ್ಯಗಳ ಚಿತ್ರೀಕರಣ ನಡೆದಿತ್ತು. ನಂತರ ಕಾರಣಾಂತರಗಳಿಂದ ರಜನೀಕಾಂತ್ ಬದಲು ಅಂಬರೀಶ್ ಆ ಪಾತ್ರದಲ್ಲಿ ನಟಿಸಿದರು. ಸ್ಲೋ ಮೋಶನ್ ಕ್ಯಾಮರದಲ್ಲಿ ಚಿತ್ರೀಕರಣಗೊಂಡ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆ. ಬೆಂಗಳೂರಿನ ೩ ಚಿತ್ರಮಂದಿರಗಳಲ್ಲಿ ಏಕ ಕಾಲಕ್ಕೆ ಶತದಿನೋತ್ಸವ ಆಚರಿಸಿದ ಮೊದಲ ಚಿತ್ರ. ತ.ರಾ.ಸು. ಅವರ ಮೂರು ಕಾದಂಬರಿಗಳನ್ನು (ಸರ್ಪ ಮತ್ಸರ, ಒಂದು ಗಂ‍ಡು ಎರಡು ಹೆಣ್ಣು, ನಾಗರ ಹಾವು) ಸೇರಿ ತಯಾರಿಸಿದ ಚಿತ್ರ. ಎಷ್ಟು ಮಾತಾಡಿದರು ಕಡಿಮೇನೆ ಅಂತಹ ಮಹೋನ್ನತ ಚಿತ್ರ ಹೊಸ ತಂತ್ರಜ್ಞಾನಗಳನ್ನೂ ಅಳವಡಿಸಿಕೊಂಡು ಮತ್ತೊಮ್ಮೆ ಬೆಳ್ಳಿ ಪರದೆಗೆ ಅಪ್ಪಳಿಸಲಿದೆ.

ಇಂದು ಸಂಜೆ ಭಾರತೀಯ ಕಾಲಮಾನ 6.15 ಕ್ಕೆ ಸುದೀಪ್ ಅವರ ಅಫಿಶಿಯಲ್ ಟ್ವಿಟ್ಟರ್ ಖಾತೆಯಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದ್ದು ನೀವು ಒಮ್ಮೆ ನೋಡಿ ಶೇರ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here