ಮಹಾಭಾರತ ಯುದ್ಧವು ಕೊನೆಗೊಂಡಂತೆ, ಪಾಂಡವರು ತಮ್ಮ ಸಂಬಂಧಿಕರನ್ನು ಕೊಲ್ಲುವುದರ ಮೂಲಕ ಪಾಪ ಮಾಡಿದ್ದರಿಂದ ದೈವಿಕ ಅಸಮಾಧಾನವಿತ್ತು, ಇದಕ್ಕಾಗಿ ಅವರು ಕೃಷ್ಣ ಪರಮಾತ್ಮನನ್ನು ಭೇಟಿ ಮಾಡಲು ನಿರ್ಧರಿಸಿದರು. ಕೃಷ್ಣನು ಅವರಿಗೆ ಕಪ್ಪು ಹಸು ಮತ್ತು ಕಪ್ಪು ದ್ವಜವನ್ನು ನೀಡಿ ಈ ಹಸು ಮತ್ತು ದ್ವಜ ಬಣ್ಣ ಬದಲಿಸಿ ಬಿಳಿಯಾದರೆ ನಿಮ್ಮ ಪಾಪ ಪರಿಹಾರವಾಗುತ್ತದೆ ಎಂದು ತಿಳಿಸಿದನು, ಮತ್ತು ಶಿವನ್ನನ್ನು ಬೇಡಿ ತಪಸ್ಸು ಮಾಡಲು ಹೇಳಿದನು, ನಂತರ ಪಾಂಡವರು ಆ ಹಸುವನ್ನು ಹಿಂಬಾಲಿಸುತ್ತಿದ್ದರು ಮತ್ತು ಅವರು ಧ್ವಜವನ್ನು ಹೊತ್ತೊಯ್ಯುತ್ತಿದ್ದರು ಮತ್ತು ಗುಜರಾತಿನ ಭಾವನಗರದಲ್ಲಿರುವ ಕೊಲಿಯಕ್ ಕಡಲತೀರವನ್ನು ತಲುಪಿದಾಗ, ಹಸು ಮತ್ತು ಧ್ವಜ ಎರಡೂ ಬಣ್ಣವನ್ನು ಬದಲಾಯಿಸಿದವು. ಪಾಂಡವರ ಭಕ್ತಿಯಿಂದ ಪ್ರಭಾವಿತನಾದ ಶಿವನು ದರ್ಶನ ಕೊಟ್ಟನು

ಪಾಂಡವರು ಈ ದೇವಸ್ಥಾನವನ್ನು ಅಮವಾಸ್ಯೆ ಅಥವಾ ಭದ್ರಾ ತಿಂಗಳಲ್ಲಿ ಸ್ಥಾಪಿಸಿದ್ದಾರೆ ಎಂದು ನಂಬಲಾಗಿದೆ, ಮತ್ತು ಪ್ರತಿ ವರ್ಷವೂ ಈ ದೇವಸ್ಥಾನದಲ್ಲಿ ಭದಾರ್ವಿ ಎಂಬ ಹೆಸರಿನ ಪ್ರಸಿದ್ಧ ಜಾತ್ರೆ ನಡೆಯುತ್ತದೆ.

ಈ ದೇವಸ್ಥಾನದ ಬಗ್ಗೆ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ, ಈ ದೇವಸ್ಥಾನವು ಸಮುದ್ರದ ಮಧ್ಯದಲ್ಲಿ ನೆಲೆಗೊಂಡಿದೆ ಮತ್ತು ದೇವಸ್ಥಾನಕ್ಕೆ ಪ್ರವೇಶಿಸಲು ಸಮುದ್ರದ ನೀರು ಹಿಂದಕ್ಕೆ ಹೋಗವುದನ್ನು ಕಾಯಬೇಕು, ಸಮುದ್ರದ ನೀರು ಕೆಲವೇ ಗಂಟೆಗಳ ಕಾಲ ಮಾತ್ರ ಹಿಮ್ಮೆಟ್ಟುತ್ತದೆ ಮತ್ತು 7 ಗಂಟೆ ನಂತರ, ದೇವಸ್ಥಾನ ಮತ್ತೆ ಅಲೆಗಳ ಕೆಳಗೆ ಮುಚ್ಚಿಹೋಗುತ್ತದೆ.

LEAVE A REPLY

Please enter your comment!
Please enter your name here