ಅಕ್ರಮವಾಗಿ ಗ್ರಾನೈಟ್ ತುಂಬಿದ್ದ ಲಾರಿ ಬಿಟ್ಟು ಬರುವಂತೆ ಸಿಬ್ಬಂದಿಗೆ ಒತ್ತಡ ಹಾಕಿದ ಮೇಲಾಧಿಕಾರಿಗೆ ಪೋನಿನಲ್ಲೆ ಖಡಕ್ ಅವಾಜ್ ಹಾಕಿದ್ದ ಪಿಎಸ್‌ಐ ಶ್ರೀನಿವಾಸ್ ಅಮಾನತು ಮಾಡಲಾಗಿದೆ.ಈ ಬಗ್ಗೆ ಭೀಮಾಶಂಕರ್ ಗುಳೇದ್ ಅವರು ಪಿಎಸ್‌ಐ ಶ್ರೀನಿವಾಸ್ ಅವರನ್ನು ಅಮಾನತು ಮಾಡುವಂತೆ ಅದೇಶ ನೀಡಿದ್ದಾರೆ ಎನ್ನಲಾಗಿದೆದೇವನಹಳ್ಳಿ ತಾಲೂಕಿನ ರಾಮನಾಥಪುರದಲ್ಲಿ ಘಟನೆ. ನಡೆದಿದ್ದು,

ಈ ಎಲ್ಲಾ ಘಟನೆಯನ್ನು ಸ್ಥಳೀಯರು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ಸೋಷಿಯಲ್ ಮಿಡಿಯಾಗಳಲ್ಲಿ ವಿಡಿಯೋ ಹಾಕಿದ್ದಾರೆ. ಸದ್ಯ ಪಿಎಸ್‍ಐ ಶ್ರೀನಿವಾಸ್‍ರವರು ಮೇಲಾಧಿಕಾರಿಗೆ ಖಡಕ್ ಆವಾಜ್ ಹಾಕಿದ ವಿಡಿಯೋ ವೈರಲ್ ಆಗಿದ್ದು, ಪಿಎಸ್‍ಐ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಕ್ರಮವಾಗಿ ಗ್ರಾನೈಟ್ ಸಾಗಾಟದ ಬಗ್ಗೆ ಖಚಿತ‌ ಮಾಹಿತಿ ಮೇರೆಗೆ ವಿಶ್ವನಾಥಪುರ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ, ಗ್ರಾನೈಟ್ ಸಾಗಿಸಲು ಅನುಮತಿ ಇಲ್ಲದಿದ್ದರೂ ಹಿರಿಯ ಅಧಿಕಾರಿಗಳ ಹೆಸರು ಹೇಳಿ ಲಾರಿಯವರು ಸಿಬ್ಬಂದಿಗೆ ಧಮ್ಕಿ ಹಾಕಿದ್ದರು.ಇದೇ ವೇಳೆ ದಂಧೆಕೋರರಿಂದ ಧಮ್ಕಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪಿಎಸ್‌ಐ ಶ್ರೀನಿವಾಸ್ ಗೂ ಹಿರಿಯ ಪೊಲೀಸ್ ಅಧಿಕಾರಿ ಮುಖಾಂತರ ಒತ್ತಡ ಹೇರಿದ್ದ ದೇವನಹಳ್ಳಿ ಮಾಜಿ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಎನ್.ಕೃಷ್ಣಮೂರ್ತಿ ಮತ್ತು ಬೆಂಬಲಿಗರು.

ಪರವನಾಗಿಯಿಲ್ಲದೆ ಹಿಡಿದಿದ್ದ 2 ಲಾರಿಗಳನ್ನ ಬಿಟ್ಟು ಕಳಿಸುವಂತೆ ಪಿಎಸ್‌ಐ ಶ್ರೀನಿವಾಸ್ ಗೆ ಒತ್ತಡ ಹೇರಿದ್ದಾರೆ. ಇದೇ ವೇಳೆ ದಂಧೆಕೋರರ ಪರ ಮಾತನಾಡಿದ ಸಿಪಿಐ ವರ್ತನೆಗೆ ಗರಂ ಆಗಿ ಪೋನಿನಲ್ಲೆ ಸಿಪಿಐ ಗೆ ಕ್ಲಾಸ್ ತೆಗೆದುಕೊಂಡಿದ್ದರು

 

LEAVE A REPLY

Please enter your comment!
Please enter your name here