ಶಾರುಖ್ ಖಾನ್ ಅಭಿನಯದ ನಿರೀಕ್ಷೆಯನ್ನು ಹುಟ್ಟಿಸಿರುವ ಝೀರೋ ಚಿತ್ರದ ಟ್ರೈಲರ್ ಒಂದು ಬಿಡುಗಡೆಯಾಗಿದ್ದು ಶಾರುಖ್ ಖಾನ್ ಜೊತೆಗೆ ಸಲ್ಮಾನ್ ಖಾನ್ ಸಹ ಕಾಣಿಸಿ ಕೊಂಡಿದ್ದು ಈ ಇಬ್ಬರ ಅಭಿಮಾನಿಗಳಿಗೆ ಹಬ್ಬ ತಂದಿದೆ. ಈ ಚಿತ್ರದಲ್ಲಿ ಶಾರೂಖ್ ಜೊತೆಗೆ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್ ಮುಖ್ಯಭೂಮಿಕೆಯಲ್ಲಿ, ಅತಿಥಿ ಪಾತ್ರದಲ್ಲಿ ಶ್ರೀದೇವಿ, ರಾಣಿ ಮುಖರ್ಜಿ, ಕಾಜೊಲ್, ಕರೀಷ್ಮಾ ಕಪೂರ್ ಹಾಗು ಆಲಿಯಾ ಭಟ್ ನಟಿಸಿದ್ದಾರೆ.

ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಮತ್ತು ಕಲರ್ ಯಲ್ಲೋ ಸಂಸ್ಥೆಇಂದ ತಯಾರಾದ ಈ ಚಿತ್ರಕ್ಕೆ ಶಾರುಖ್ ಖಾನ್ ಹೆಂಡತಿ ಗೌರಿ ಖಾನ್ ನಿರ್ಮಾಪಕಿ, ಜೀರೋ ಚಿತ್ರ ಡಿಸೆಂಬರ್ 21, 2018 ರಂದು ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here