ರಾಹುಲ್ ಗಾಂಧಿ ಈಗ ಚುನಾವಣೆಗೆ ನಿಲ್ಲುತ್ತಾರೋ ಇಲ್ವೋ ಅನ್ನೋ ಒಂದು ಪ್ರಶ್ನೆ ರಾಜಕೀಯ ಪಂಡಿತರಲ್ಲಿ ಮೂಡಿದೆ, ಈ ಲೆಕ್ಕಾಚಾರ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ, ಇದಕ್ಕೆ ಕಾರಣ ಹಲವು ದಿನಗಳ ಹಿಂದ RSS (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ರಾಹುಲ್ ಗಾಂಧಿ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿರುವುದು.!

ಮಾನನಷ್ಟ ಮೊಕದ್ದಮೆಯ ಕಾರಣ:

ರಾಹುಲ್ ಗಾಂಧಿ ಸ್ವತಃ RSS ನ ಕಾರ್ಯಕರ್ತರೇ ಮಹಾತ್ಮ ಗಾಂಧಿ ಯನ್ನು ಹತ್ಯೆ ಮಾಡಿದ್ದು ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು ಇದು ದೇಶಾದ್ಯಂತ ಹಲವು ಚರ್ಚೆಗೆ ಗ್ರಾಸವಾಗಿತ್ತು ಇದರಿಂದ RSS ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಿತ್ತು.

ಮಾನನಷ್ಟ ಮೊಕದ್ದಮೆಯ ಪ್ರಕರಣ ಈಗ ಮತ್ತೊಮ್ಮೆ ಚರ್ಚೆಗೆ:

ಈ ಪ್ರಕರಣದ ಕುರಿದು ಮೊನ್ನೆಯಷ್ಟೇ ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಬಿಜೆಪಿಯ ರೆಬೆಲ್ ಡಾ।। ಸುಬ್ರಮಣೀಯನ್ ಸ್ವಾಮಿಯವರು, ರಾಹುಲ್ ಗಾಂಧಿಯವರ ಮೇಲೆ ಐಪಿಸಿ ಸೆಕ್ಷನ್ 499 ಮತ್ತು 500 ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿದ್ದು ಇದೊಂದು ಗಂಭೀರ ಪ್ರಕರಣ ಎಂದು ಅವರು ಹೇಳಿದ್ದಾರೆ, ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಮೇಲೆ ದಾಖಲೆಯಿಲ್ಲದೆ ಇಲ್ಲ ಸಲ್ಲದ ಆರೋಪ ಮಾಡುವಂತಿಲ್ಲ ಒಂದು ವೇಳೆ ಮಾಡಿ ಸಿಕ್ಕಿಬಿದ್ದರೆ ಅವರಿಗೆ 2 ವರ್ಷದ ಶಿಕ್ಷೆ ವಿಧಿಸಬಹುದಾಗಿದೆ ಎಂದರು.

ಜೈಲಿಗೆ ಹೋದರೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.!

ಹೌದು ಒಂದು ವೇಳೆ ಈ ಪ್ರಕರಣದಲ್ಲೇನಾದರೂ ರಾಹುಲ್ ಗಾಂಧಿ ಜೈಲಿಗೆ ಹೋದದ್ದೇ ಆದಲ್ಲಿ ಅವರು ಲೋಕಸಭೆ ಚುನಾವಣೆ ಸ್ಪರ್ಧಿಸುವ ಅರ್ಹತೆ ಕಳೆದುಕೊಳ್ಳುವ ಸಂಭವವಿರುತ್ತದೆ ಎಂದು ಸುಬ್ರಮಣೀಯನ್ ಸ್ವಾಮಿ ತಿಳಿಸಿದ್ದಾರೆ..!

LEAVE A REPLY

Please enter your comment!
Please enter your name here