ಬಳಗಾವಿಯಲ್ಲಿ ನಡೆಯುತ್ತಿರುವ ರೈತನ ಪ್ರತಿಭಟನೆ ಯಲ್ಲಿ ನೂರಾರು ಲೀಟರ್ ಹಾಲು ರಸ್ತೆ ಪಾಲಾಗಿದೆ, ಸುಮಾರು ಎಂಟು ವರ್ಶಗಳಿಂದ ಇಲ್ಲಿಯ ರೈತರು ಮ್ಹಹಾರಾಷ್ಟ್ರ ಮೂಲದ ಗೋಕುಲ್ ಡೈರಿಗೆ ಹಾಲನ್ನು ಮಾರುತ್ತಿದ್ದರು,

ಮೊದಮೊದಲು ದುಪ್ಪಟ್ಟು ಬೆಲೆ ಕೊಟ್ಟು ಹಾಲನ್ನು ಖರೀದಿಸುತ್ತಿದ್ದ ಗೋಕುಲ್ ಡೈರಿಯು ಕೆಲವು ದಿನಗಳ ಹಿಂದೆ ಪ್ರತಿ ಲೀಟರ್ ಗೆ ಹದಿನೆಂಟು ರೂಪಾಯಿ ನಿಗದಿ ಮಾಡಿತ್ತು ಅದಕ್ಕೂ ಒಪ್ಪಿ ರೈತರು ಹಾಲನ್ನು ನೀಡುತ್ತಿದ್ದರು ಆದರೆ ಈಗ ಏಕಾಏಕಿ ಹಾಲನ್ನು ಬೇಡವೆಂದು ತಿರಸ್ಕರಿಸಿದೆ.

ಬೇರೆ ಡೈರಿಗೆ ಹಾಲನ್ನು ಮಾರಲು ಹೋದರೆ, ಅವರೂ ಸ್ವೀಕರಿಸುತ್ತಿಲ್ಲ. ದಿನಕ್ಕೆ ಸಾವಿರಾರು ಲೀಟರ್ ಉತ್ಪಾದನೆಯಾಗುತ್ತಿದ್ದು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಸರ್ಕಾರ ಕೂಡಲೇ ಇತ್ತ ಗಮನಕೊಡಬೇಕು ಎಂದು ಕೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here