ಪವನ್ ವಡೆಯರ್ ನಿರ್ದೇಶನದ ನಟ ಸಾರ್ವಭೌಮ ಚಿತ್ರದ ಶೂಟಿಂಗ್ ಮುಗಿಸಿಕೊಂಡು ವಾಪಸ್ ಬರುವ ಸಂಧರ್ಭದಲ್ಲಿ ಅವರು ಚಲಿಸುತ್ತಿದ್ದ ಕಾರು ಅಪಘಾತ ಸಂಭವಿಸಿದೆ. ಸುಮಾರು ಒಂದು ವಾರದಿಂದ ಬಳ್ಳಾರಿಯ ಸ್ಟೀಲ್ ಪ್ಲಾಂಟ್ ಬಳಿ ಶೂಟಿಂಗ್ ನಡೆಯುತ್ತಿತ್ತು .

ಬಳ್ಳಾರಿ ಭಾಗದ ಸಂಪೂರ್ಣ ಶೂಟಿಂಗ್ ಮುಗಿಸಿಕೊಂಡ ಬೆಂಗಳೂರಿಗೆ ಹಿಂದಿರುಗುವಾಗ ಅನಂತಪುರದ ಬಳಿ ಕಾರು ಅಪಘಾತಕ್ಕೀಡಾಗಿದೆ. ನೆನ್ನೆ ರಾತ್ರಿ ಈ ಘಟನೆ ಸಂಭವಿಸಿದೆ ಅಪ್ಪು ಸಣ್ಣಪುಟ್ಟ ಗಾಯಗಳೊಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪ್ಪು ಸ್ನೇಹಿತ ಭಾನುಪ್ರಕಾಶ್ ಅಪ್ಪುಗೆ ಏನು ಆಗಿಲ್ಲ ಅವರು ಚೆನ್ನಾಗೇ ಇದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.

ತುಮಕೂರು ಮಾರ್ಗವಾಗಿ ಬರಬೇಕಿತ್ತು ಆದರೆ ಟ್ರಾಫಿಕ್ ಹೆಚ್ಚಿರುತ್ತದೆ ಎಂದು ಅನಂತಪುರ ಮಾರ್ಗವಾಗಿ ಕಾರು ಬರುತ್ತಿತ್ತು, ಕಾರಿನಲ್ಲಿ ಗ್ಯಾನ್ ಮಾನ್ ಸೇರಿ ಮೂವರು ಪ್ರಯಾಣಿಸುತ್ತಿದ್ದರು, ರಾತ್ರಿ ೧೦ ಘಂಟೆ ಸಂಧರ್ಭದಲ್ಲಿ ಅನಂತಪುರದ ತಿರುವು ರಸ್ತೆಯಲ್ಲಿ ಚಾಲಕ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.

LEAVE A REPLY

Please enter your comment!
Please enter your name here