ಈ ಘಟನೆ ಸಂಭವಿಸಿದ್ದು ಶಿವಮೊಗ್ಗದ ಆಲ್ಕೊಳ ಗ್ರಾಮದ ಕೆರೆಯಲ್ಲಿ, ಲೋಕೇಶ್ ಎಂಬುವವರು ಸುಮಾರು ೩೦ ವರ್ಷಗಳಿಂದ ಈ ಕೆರೆಯನ್ನು ಗುತ್ತಿಗೆ ಪಡೆದು ಮೀನುಗಾರಿಕೆ ಮಾಡುತ್ತಿದ್ದಾರೆ. ಲೋಕೇಶ್ ಪ್ರತಿ ದಿನದಂತೆ ನೆನ್ನೆ ಮೀನಿಗೆ ಬಲೇ ಹಾಕಿ ಮನೆಗೆ ತೆರಳಿದ್ದಾರೆ ಮರುದಿನ ಮುಂಜಾನೆ ಐದು ಘಂಟೆಗೆ ಬಂದು ನೋಡಿದರೆ ಮೀನಿನ ಜೊತೆ ಆರು ಅಡಿ ಹೆಬ್ಬಾವು ಕಾಣಿಸಿದೆ.

ತಕ್ಷಣ ಅವರು ಸ್ನೇಕ್ ಕಿರಣ್ ಅವ್ರಿಗೆ ಕರೆ ಮಾಡಿದ್ದಾರೆ, ಸ್ಥಳಕ್ಕೆ ಬಂದ ಕಿರಣ್ ಬಹಳ ಶ್ರಮ ಪಟ್ಟು ಲೋಕೇಶ್ ಸಹಾಯ ಪಡೆದು ಹಾವನ್ನು ದಡ ಸೇರಿಸಿ, ಅರಣ್ಯ ಅಧಿಕಾರಿಗಳ ಸೂಚನೆಯನಂತೆ ಹಾವನ್ನು ಕಾಡಿಗೆ ಬಿಟ್ಟಿದ್ದಾರೆ.

ಆದರೆ ಮೀನಿನ ಬಲೆಯಿಂದ ಹೆಬ್ಬಾವನ್ನು ಹೊರ ತೆಗೆಯಲು, ಲೋಕೇಶ್ ಮೀನಿನ ಬಲೆಯನ್ನು ಕತ್ತರಿಸ ಬೇಕಾಯಿತು, ಆ ಬಲೆ ಸುಮಾರು ಹತ್ತು ಸಾವಿರ ಬಲೆಯದ್ದಾಗಿದೆ.

LEAVE A REPLY

Please enter your comment!
Please enter your name here