ರಾಜ್ಯ ಕ್ಯಾಬ್ ಚಾಲಕರಲ್ಲಿ ಮೊದಲಿನಿಂದಲೂ ಕುಮಾರಸ್ವಾಮಿಯವರ ಮೇಲೆ ನಂಬಿಕೆ ಇಟ್ಟು ಕಾಯುತ್ತಿದ್ದರು, ಕುಮಾರಸ್ವಾಮಿ ಯವರು ಮುಖ್ಯಮಂತ್ರಿಯಾದ ಮೇಲೆ ಅವರ ಸಂತೋಷ ಮುಗಿಲು ಮುಟ್ಟಿದೆ ಮತ್ತು ನಿರೀಕ್ಷೆಗಳು ಸಹ ದುಪ್ಪಟ್ಟಾಗಿದೆ.

ಅಂದು ಕೊಂಡಂತೆ ಮಾನ್ಯ ಮುಖ್ಯಮಂತ್ರಿಗಳು ಕ್ಯಾಬ್ ಚಾಲಕರ ಸಮಸ್ಯೆಗಳನ್ನೂ ಬಗೆಹರಿಸುವಲ್ಲಿ ಮುಂದಾಗಿದ್ದು ಈ ಮೊದಲು ಚಾಲಕರ ಪರವಾಗಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ಚಾಲಕರ ಸಮಸ್ಯೆ ಕುರಿತಂತೆ ಪರಿಹಾರ ಒದಗಿಸಲು ಅವರು ಸಾರಿಗೆ ಇಲಾಖೆಯೊಂದಿಗೆ ಹೋರಾಟ ನಡೆಸಿದ್ದರು. ಅಲ್ಲದೆ ತಾವೇ ನೂತನ ಕ್ಯಾಬ್ ಸಂಸ್ಥೆ ರಚಿಸಲು ಚಾಲಕರಿಗೆ ನೆರವು ನೀಡುವ ಸಂಬಂಧ ಮಾತನಾಡಿದ್ದರು.

ಈ ವಿಷಯಗಳು ಈಗ ಮರುಜೀವ ಪಡೆದುಕೊಂಡಿದೆ ಕಳೆದ ಬಾರಿ ಸಾರಿಗೆ ಇಲಾಖೆ ಪರವಾನಗಿ ನೀಡಿರಲಿಲ್ಲ ಮತ್ತು ಹಣದ ಕೊರತೆ ಇತ್ತು. ಉಬರ್, ಟ್ಯಾಕ್ಸಿ ಫಾರ್ ಶ್ಯೂರ್, ಓಲಾದ ಚಾಲಕರ ಸಂಸ್ಘಟನೆಯ ಮಾಜಿ ಅಧ್ಯಕ್ಷ ತನ್ವೀರ್ ಪಾಶಾ ರವರ ಪ್ರಕಾರ ನಮ್ಮ ಟಿವೈಜಿಆರ್ ಕ್ಯಾಬ್ ಸಂಸ್ಥೆಗಾಗಿ ಸಾರಿಗೆ ಇಲಾಖೆ ಪರವಾನಗಿ ನೀಡಲಿದೆ ಎಂದು ಅವರಿಗೆ ನಿರೀಕ್ಷೆ ಇದೆಯಂತೆ. ಈ ಕುರಿತಂತೆ ಗಮನ ಸೆಳೆಯುವದಕ್ಕಾಗಿ ಅವರು ಮುಖ್ಯಮಂತ್ರಿಗಳನ್ನು ಇನ್ನು 10 ದಿನಗಳಲ್ಲಿ ಭೇಟಿಯಾಗಲಿದ್ದಾರೆ. ಚಾಲಕರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಆಶಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here