ಹೌದು ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ನಮ್ಮಿಶ್ರ ಸರ್ಕಾರ ಬಂದು ಇನ್ನು ಒಂದು ತಿಂಗಳು ಕಳೆದಿಲ್ಲ ಆಗಲೇ ರೈತರ ಮೇಲೆ ಅದರಲ್ಲೂ ಹೈನುಗಾರಿಕೆ ನಂಬಿಕೊಂಡಿದ್ದವರ ಮೇಲೆ ತನ್ನ ಪ್ರಹಾರ ಮಾಡಿದೆ, ಇದರಿಂದ ರೈತ ಸಮುದಾಯದಲ್ಲಿ ತೀವ್ರ ಅಸಮಾಧಾನ ಉಂಟಾಗಿದ್ದು ಹೈನುಗಾರಿಗೆ ನಂಬಿಕೊಂಡಿದ್ದ ರೈತ ಸಮೂಹ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದೆ.

ಶಾಕ್ ಆದರೂ ಏನು?

ಹಾಲು ಮಾರಿ ಜೀವನ ಸಾಗಿಸುತ್ತಿದ್ದ ರೈತರಿಗೆ ಕೊಡುತ್ತಿದ್ದ ಪ್ರೋತ್ಸಾಹ ಧನವನ್ನು ಸರ್ಕಾರ ಮೊಟಕುಗೊಳಿಸಿದೆ / ಪ್ರತಿ ಲೀಟರ್ ಹಾಲಿನ ದರದಲ್ಲಿ ಕಡಿತಗೊಳಿಸಿದೆ, ಹಿಂದಿನ ಸರ್ಕಾರಗಳು ಪ್ರತೀ ಲೀಟರ್ ಹಾಲಿಗೆ 2ರೂ ಗಳನ್ನ ಪ್ರೋತ್ಸಾಹಧನವಾಗಿ ಕೊಡುತ್ತಿದ್ದರು ಆದರೆ ಕುಮಾರಣ್ಣ ನೇತೃತ್ವದ ಸರ್ಕಾರ ಇದನ್ನು ಮೊಟಕುಗೊಳಿಸಿರುವುದು ರೈತಾಪಿ ಜನರನ್ನು ಕೆರಳಿಸಿದೆ.

ದರ ಕಡಿಮೆ ಮಾಡಿದ್ದರ ಉದ್ದೇಶ.

ಬೇಸಿಗೆ ಕಾಲದಲ್ಲಿ ಹಾಲಿನ ಬೇಡಿಕೆ ಕಡಿಮೆ ಇರುತ್ತದೆ ಆದರೆ ಹಾಲಿನ ಉತ್ಪಾದನೆ ಜಾಸ್ತಿ, ಅಂತಹ ಸಂಧರ್ಭದಲ್ಲಿ ಹಾಲನ್ನು ಹಾಲಿನ ಪುಡಿಯನ್ನಾಗಿಸಿ ಮಾರುವ ಪರಂಪರೆ ಇರುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಹಾಲಿನ ಪುಡಿಗೆ ಬೇಡಿಕೆ ಗಣನೀಯವಾಗಿ ಇಳಿದಿರುವುದರಿಂದ ಈ ದರ ಕಡಿತ ಅನಿವಾರ್ಯ ಎನ್ನುತ್ತಿದೆ ಸರ್ಕಾರದ ಅಧಿಕೃತ ಮೂಲಗಳು.

ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೇಗಿದೆ..?

ಕೆಎಂಎಫ್ ನಿತ್ಯ ಸರಾಸರಿ 75 ಲಕ್ಷ ಲೀ. ಹಾಲು ಸಂಗ್ರಹಿಸುತ್ತದೆ. ಈ ಪೈಕಿ 34 ಲಕ್ಷ ಲೀ. ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಮೊಸರು ತಯಾರಿಕೆಗೆ 4 ಲಕ್ಷ ಲೀ., ಗುಡ್ ಲೈಫ್ ಹಾಲು ತಯಾರಿಸಲು ಐದು ಲಕ್ಷ ಲೀ. ಹಾಗೂ ನಂದಿನಿ ಉತ್ಪನ್ನಗಳ ತಯಾರಿಕೆಗೆ ಐದು ಲಕ್ಷ ಲೀ. ಬಳಸಲಾಗುತ್ತದೆ. ಉಳಿದಿದ್ದನ್ನು ಹಾಲಿನ ಪುಡಿ ಮಾಡಲು ಬಳಸಿಕೊಳ್ಳಲಾಗುತ್ತದೆ. ಆದರೆ, ಉತ್ಪಾದನೆಯಾದ ಪೂರ್ಣ ಹಾಲಿ ಪುಡಿಯನ್ನು ಬಿಕರಿ ಮಾಡಲು ಸಾಧ್ಯವಾಗದಿರುವುದು ಹಾಲು ಉತ್ಪಾದಕರ ದರ ಕಡಿತಕ್ಕೆ ದಾರಿ ಮಾಡಿಕೊಟ್ಟಿದೆ ಎಂಬುದಾಗಿ ತಿಳಿದುಬಂದಿದೆ.

 

LEAVE A REPLY

Please enter your comment!
Please enter your name here