ಹೌದು ಕುಮಾರಸ್ವಾಮಿಯವರು ಪ್ರತಿದಿನವೂ ಒಂದು ಒಳ್ಳೆ ಯೋಜನೆಗಳ ಪ್ರಸ್ತಾಪ ಮಾಡುತ್ತಲೇ ಇದ್ದಾರೆ ಅಂದಹಾಗೆ ಇಂದು ಅವರು ಎರಡು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ ಅದರಲ್ಲಿ ಒಂದು ಹೆಣ್ಣುಮಕ್ಕಳಿಗೆ ಒಂದನೇ ತರಗತಿಯಿಂದ ಪದವಿಯವರೆಗೂ ಉಚಿತ ಶಿಕ್ಷಣ ಕೊಡುವ ಬಗ್ಗೆ ಚಿಂತನೆ ನಡೆಸಿದ್ದಾರಂತೆ, ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಬಂದರು ವಿಧಾನಸೌಧದ ಬಾಗಿಲು ನಿಮಗೆ ತೆರೆದಿರುತ್ತದೆ, ಖಾಸಗಿ ಶಾಲೆಗಳ ಮೇಲೆ ಡೊನೇಶನ್ ನಿರ್ಬಂಧ ಹೂಡುವ ಬದಲು ನಮ್ಮ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುತ್ತೇನೆ, ಯಾರು ತಾನೆ ಸಾಲ ಮಾಡಿ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ಎಂದು ತಮ್ಮ ನಿರ್ಧಾರಗಳನ್ನು ಇಂದು ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಅವರು ಕಾಲೇಜು ಶಿಕ್ಷಣ ಪಡೆದ ನ್ಯಾಷನಲ್ ಕಾಲೇಜು ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಹಂಚಿಕೊಂಡರು.

ಇನ್ನು ಎರಡನೆಯದು 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ ನೀಡುವ ಭರವಸೆ ನೀಡಿದ್ದೆ. ಅದಕ್ಕೆ ನಾನು ಬದ್ಧನಾಗಿದ್ದು ಮುಂದಿನ ಬಜೆಟ್ ನಲ್ಲಿ ಜಾರಿಗೆ ತರುತ್ತೇನೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಘೋಷಿಸಿದರು. ಅಂತೂ ಜನಮೆಚ್ಚುಗೆಯ ಕೆಲಸಗಳಿಗೆ ಜನಉಪಯೋಗಿ ನಿರ್ದಾರಗಳನ್ನ ತೆಗೆದು ಕೊಳ್ಳುತ್ತಿರುವ ಕುಮಾರಸ್ವಾಮಿಯವರಿಗೆ ವಂದನೆಗಳು. ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಮರೆಯದೆ ತಿಳಿಸಿ.

3 COMMENTS

  1. Respected Sir,
    Kindly look at the recruitment process of assistant professors recruitment in govt first grade colleges.inform the commissioner of collegiate education to issue the order.

LEAVE A REPLY

Please enter your comment!
Please enter your name here