ಕಾವೇರಿ ನದಿ ನೀರಿನ ಹಂಚಿಕೆ ಸಂಭಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಮಾಡಿ ಸುಮಾರು ಹತ್ತು ನಿಮಿಷಗಳಕಾಲ ಮಾತನಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಕಮಲ್ ಹಾಸನ್ ನಾನು ನಟನಾಗಿ ಇಲ್ಲಿ ಬಂದಿಲ್ಲ ಬದಲಾಗಿ ನಾನು ತಮಿಳು ನಾಡಿನ ಜನತೆಯ ಪರವಾಗಿ ಕಾವೇರಿ ನದಿ ನೀರನ್ನು ಕುರುವೈ ಬೆಳೆಗೆ ಅವಶ್ಯಕತೆ ಇದ್ದು ಇದರ ಬಗ್ಗೆ ಮನವಿ ಸಲ್ಲಿಸಲು ಬಂದಿದ್ದೇನೆ, ಮತ್ತು ಎರಡೂ ರಾಜ್ಯಗಳ ನಡುವಿನ ಸೇತುವೆಯಾಗಿ ನಾನು ಕಾರ್ಯ ನಿರ್ವಹಿಸಲಿದ್ದೇನೆ. ಕುಮಾರಸ್ವಾಮಿಯವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಕಮಲ್ ಹಾಸನ್ ಹೇಳಿದರು.

ಈ ಬಗ್ಗೆ ಮಾತಾಡಿದ ಮುಖ್ಯಮಂತ್ರಿಗಳು ಎರಡೂ ರಾಜ್ಯಗಳ ನಡುವೆ ಸೌಹಾರ್ದ ಸಂಬಂಧವನ್ನು ಉಳಿಸಿಕೊಳ್ಳುವುದು ಹಾಗು ಎರಡೂ ರಾಜ್ಯಗಳ ರೈತರ ಹಿತವನ್ನು ಮನದಲ್ಲಿರಿಸಿ ಸಮಸ್ಯೆ ಬಗೆಹರಿಸುವ ಬಗ್ಗೆ ಮಾತುಕತೆ ನಡೆದಿದೆ. ಅಗತ್ಯ ಬಿದ್ದರೆ ತಮಿಳುನಾಡು ಸರ್ಕಾರದ ಜತೆ ಮಾತುಕತೆಗೂ ಸಿದ್ಧವಿರುವುದಾಗಿ ಹೇಳಿದರು.

LEAVE A REPLY

Please enter your comment!
Please enter your name here