ಈ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಧನಂಜಯ್(25) ಚಲಿಸುತ್ತಿದ್ದ ರೈಲಿಗೆ ಸಿಲುಕಿ ಸಾವಿಗೆ ಶರಣಾದ ಯುವಕ. ಐಟಿಐ ಓದುತಿದ್ದ ಧನಂಜಯ್ ಬುದ್ದಿವಂತ, ಮನೆಯಲ್ಲಿ ತೀರ್ವ ಬಡತನ ಇರುವುದರಿಂದ ಕೆಲಸಕ್ಕಾಗಿ ತೀವ್ರ ಅಲೆಯುತ್ತಿದ್ದ, ಆಗಂತ ಇವನ ಸಾವಿಗೆ ಇದೆ ಕಾರಣ ಅಂತ ತಿಳ್ಕೊ ಬೇಡಿ ನಿಜವಾದ ವಿಷಯಾನೇ ಬೇರೆ.

ಅಸಲಿ ವಿಷಯವೆಂದರೆ ಇದರ ನಡುವೆ ಈತ ತಮ್ಮ ಸಂಬಂದಿಕರ ಮನೆಯಲ್ಲಿ ತನ್ನ ಮದುವೆಯ ಪ್ರಸ್ತಾಪ ಮಾಡಿದ್ದಾನೆ ಆದರೆ ಅವರು ಇವನ್ನನು ಹಂಗಿಸಿ ನಿನ್ನ ಮುಖಕ್ಕೆ ಹೆಣ್ಣು ಬೇರೆ ಬೇಕಾ ಹೋಗಿ ನಿಮ್ಮ ಮುಖ ಕನ್ನಡಲಿಯಲ್ಲಿ ನೋಡ್ಕೋ ಯಂಬ ಅಸೆಡ್ಡೆ ಮಾತುಗಳನ್ನಾಡಿ ಕಳುಹಿಸಿದ್ದಾರೆ.

ಸಂಭಂದಿಕರ ಈ ಮಾತುಗಳಿಂದ ಮಾನಸಿಕವಾಗಿ ಕುಗ್ಗಿದ ಈತ ತಾನು ಸುಂದರವಾಗಿಲ್ಲ ಎಂದು ಶುಕ್ರವಾರ ರಾತ್ರಿ ತನ್ನ ಸಹೋದರನಿಗೆ ಮೊಬೈಲ್ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ಅದೇ ಸಂದೇಶವನ್ನು ತನ್ನ ಕೈಮೇಲೆ ಬರೆದುಕೊಂಡಿದ್ದಾನೆ. ಧನಂಜಯ್ ಸಂದೇಶ ನೋಡಿದ ಸಹೋದರ ತಕ್ಷಣ ರೈಲ್ವೆ ನಿಲ್ದಾಣಕ್ಕೆ ಓಡಿ ಬಂದು ನೋಡಿದಾಗ ಸ್ವಲ್ಪ ದೂರದಲ್ಲಿ ಹಳಿ ಮೇಲೆ ಆತ ಶವವಾಗಿ ಬಿದ್ದಿದ್ದ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದಿವರಿಸಿದ್ದಾರೆ.

LEAVE A REPLY

Please enter your comment!
Please enter your name here