ಬೇಕಾಗುವ ಸಾಮಗ್ರಿಗಳು :

ಕಡ್ಲೆ ಬೇಳೆ: ೧ ಕಪ್

ಸಕ್ಕರೆ: ೧ ಕಪ್

ಏಲಕ್ಕಿ ಪೌಡರ್: 1tsp

ಮೈದಾ ಹಿಟ್ಟು: 1 ೧/೨  ಕಪ್

ಅಕ್ಕಿ ಹಿಟ್ಟು :೧ ಚಮಚ

ರವೆ: ೧ ಚಮಚ

ಅರಿಶಿನ: ಚಿಟಿಕೆ

ಉಪ್ಪು ಹಾಗೂ ಎಣ್ಣೆ

ಮಾಡುವ ವಿಧಾನ :

ಕನಕ

ಮೈದಾ ಹಿಟ್ಟು ,ಅಕ್ಕಿ ಹಿಟ್ಟು ,ರವಾ,ಅರಿಶಿನ,ಎಣ್ಣೆಯನ್ನು ಹಾಕಿ,ನೀರನ್ನು ಸ್ವಲ್ಪ ಸ್ವಲ್ಪ ಬಳಸುತ್ತಾ,ಚಪಾತಿ ಹಿಟ್ಟಿನ ಹದಕ್ಕೆ ಕಲಸಿಟ್ಟುಕೊಳ್ಳಿ.(೨೦ ನಿಮಿಷ ಹಾಗೆ ಬಿಡಿ) ನಂತರ ಉಂಡೆಯನ್ನು ಕಟ್ಟಿಟ್ಟುಕೊಳ್ಳಿ.

ಹೂರಣ

ಕಡಲೆ ಬೇಳೆಯನ್ನು ಬೇಯಿಸಿ,ಅದರಿಂದ ನೀರನ್ನು ಬೇರ್ಪಡಿಸಿ ,ಪುಡಿ ಮಾಡಿಟ್ಟುಕೊಳ್ಳಿ.ಕಡ್ಲೆ ಪುಡಿಗೆ ಸಕ್ಕರೆ ಹಾಕಿ,ಚೆನ್ನಾಗಿ ಪಾಕ ಬರುವ ತನಕ ಕಾಯಿಸಿ.ನಂತರ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಬಿಸಿ ತಣಿಯುವ ತನಕ ಕಾದು,ನಿಂಬೆ ಆಕಾರದ ಉಂಡೆಯನ್ನು ಕಟ್ಟಿಟ್ಟುಕೊಳ್ಳಿ.

ನಂತರ ಕನಕದ ಉಂಡೆಯನ್ನು ತೆಗೆದುಕೊಂಡು ಲಟ್ಟಿಸಿ, ಅದರೊಳಗೆ ಹೂರಣದ ಉಂಡೆಯನ್ನು ತುಂಬಿ,ಅದನ್ನು ಚಪಾತಿಯಂತೆ ಲಟ್ಟಿಸಿ.(ಲಟ್ಟಿಸುವಾಗ,ಪ್ಲಾಸ್ಟಿಕ್ or ಬಾಳೆ ಎಲೆ,ಎಣ್ಣೆ  ಬಳಸಿ ) ತವಾ ಬಿಸಿಯಾದ ನಂತರ, ಹೋಳಿಗೆಯನ್ನು ಎರಡೂ ಬದಿಗೂ ಚೆನ್ನಾಗಿ ಬೇಯಿಸಿ.

LEAVE A REPLY

Please enter your comment!
Please enter your name here