ಬೇಕಾಗುವ ಪದಾರ್ಥಗಳು

* ಈರುಳ್ಳಿಗಳು – 3 (ಕತ್ತರಿಸಿದಂತಹುದು)

* ಕೆಂಪು ಒಣ ಮೆಣಸಿನಕಾಯಿಗಳು- 7-8

* ಹುರಿದ ಕಡಲೆ ಹಿಟ್ಟು – 1 ಟೇ.ಚಮಚ

* ಹುಣಸೆ ತಿರುಳು – 1 ಟೀ.ಚಮಚ

* ಉಪ್ಪು ರುಚಿಗೆ ತಕ್ಕಷ್ಟು

* ಬೆಲ್ಲ – 1 ಟೀ. ಚಮಚ

* ಎಣ್ಣೆ – 1 ಟೀ. ಚಮಚ

ಈರುಳ್ಳಿ ಚಟ್ನಿ ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಕೆಂಪು ಮೆಣಸಿನ ಕಾಯಿಗಳನ್ನು ಸ್ವಲ್ಪ ಸಮಯ ಉರಿಯಿರಿ. ನಂತರ ಅದಕ್ಕೆ ಈರುಳ್ಳಿ ಚೂರುಗಳನ್ನು ಹಾಕಿ, ಹೊಂಬಣ್ಣಕ್ಕೆ ಬರುವವರೆಗೆ ಉರಿಯಿರಿ. ಇದಕ್ಕೆ ಹುರಿದ ಕಡಲೆ ಹಿಟ್ಟು, ಉಪ್ಪು, ಹುಣಸೆ ತಿರುಳು ಮತ್ತು ಬೆಲ್ಲವನ್ನು ಹಾಕಿ. 4-5 ನಿಮಿಷಗಳ ಕಾಲ ಮಧ್ಯಮ ಗಾತ್ರದ ಉರಿಯಲ್ಲಿ ಹುರಿಯಿರಿ. ಬೆಲ್ಲವು ಸಂಪೂರ್ಣವಾಗಿ ಕರಗಬೇಕು ಎಂಬುದನ್ನು ಗಮನದಲ್ಲಿಡಿ. ಈಗ ಹುರಿಯನ್ನು ಆರಿಸಿ ಮತ್ತು ಮಿಶ್ರಣವನ್ನು ತಣ್ಣಗಾಗಲು ಬಿಡಿ. ಈಗ ಮಿಶ್ರಣವನ್ನು ದಪ್ಪನಾದ ಪೇಸ್ಟ್‌ನಂತೆ ಕಲೆಸಿಕೊಳ್ಳಿ. ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಸವಿಯಲು ನೀಡಿ.. ಇದು ಇಡ್ಲಿ ಹಾಗು ದೋಸೆಗಳೊಂದಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ ಹಾಗು ರುಚಿಯನ್ನು ಹೆಚ್ಚಿಸುತ್ತದೆ.

LEAVE A REPLY

Please enter your comment!
Please enter your name here