ಬೇಕಾಗುವ ಸಾಮಾಗ್ರಿಗಳು:

ಅಕ್ಕಿ 1ಕಪ್, ಹಾಲು 10 ಕಪ್, ಏಲಕ್ಕಿ ಪುಡಿ ¼ ಚಮಚ,

ಬೆಲ್ಲದ ಪುಡಿ 11/2 ಕಪ್,

ಹೆಸರುಬೇಳೆ ½ ಕಪ್,

3-4 ಚಮಚ ತುಪ್ಪ,

ಸ್ವಲ್ಪ ಗೋಡಂಬಿ,

ದ್ರಾಕ್ಷಿ.

ಮಾಡುವ ವಿಧಾನ:

ಮೊದಲು ಅಕ್ಕಿಯನ್ನು ತೊಳೆದು ಒಂದು ಕುಕ್ಕರನಲ್ಲಿ ಹಾಲು ಮತ್ತು ಅಕ್ಕಿ ಹಾಕಿ ಬೇಯಿಸಿಕೊಳ್ಳಿ. ಹೆಸರು ಬೇಳೆಯನ್ನು ಬೇರೆಯಾಗಿ ಬೇಯಿಸಿಕೊಳ್ಳಿ. ಎರಡು ಪದಾರ್ಥಗಳು ಬೆಂದ ನಂತರ ಎರಡನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ಕುದಿಯಲು ಬಿಡಿ.

ನಂತರ ಅದಕ್ಕೆ ಬೆಲ್ಲವನ್ನು ಸೇರಿಸಿ, ಬೆಲ್ಲ ಚೆನ್ನಾಗಿ ಕರಗುವವರೆಗೂ ಕೈಯಾಡಿಸಿ.ನಂತರ ಅದಕ್ಕೆ ಗಟ್ಟಿಯಾದ ಹಾಲನ್ನು ಸೇರಿಸಿ, ದ್ರಾಕ್ಷಿ, ಗೋಡಂಬಿ(ಮೊದಲೆ ತುಪ್ಪದಲ್ಲಿ ಹುರಿದಿಟ್ಟುಕೊಂಡಿರಬೇಕು) ಹಾಕಿ, ಏಲಕ್ಕಿ ಪುಡಿ ಸೇರಿಸಿ. ಬಿಸಿಯಾಗಿ ಇರುವಾಗಲೇ ಬಡಿಸಿ.

LEAVE A REPLY

Please enter your comment!
Please enter your name here