ಕೆಲವೊಂದು ರೆಸಿಪಿಗಳು ನಮ್ಮ ಉತ್ತಮ ಆರೋಗ್ಯವನ್ನು ವೃದ್ಧಿಸುವಲ್ಲಿ ತುಂಬಾನೇ ಸಹಕಾರಿಯಾಗಿದೆ. ಅವುಗಳಲ್ಲಿ ರವೆ ಬಾಳೆ ಹಣ್ಣಿನ ಹಲ್ವಾ ಕೂಡ ಒಂದು ಇದನ್ನು ನಿಮ್ಮ ಮನೆಗಳಲ್ಲಿ ಸರಳವಾಗಿ ಈ ವಿಧಾನದ ಮೂಲಕ ತಯಾರಿಸಬಹುದು..

ಬೇಕಾಗುವ ಸಾಮಾಗ್ರಿಗಳು

ಒಂದು ಕಪ್ ಹಾಲು

ಒಂದೂವರೆ ಕಪ್ ನೀರು

ಎರಡು ಬಾಳೆ ಹಣ್ಣು

ಗೋಡಂಬಿ, ಒಣದ್ರಾಕ್ಷಿ ಅರ್ಧ ಕಪ್

ಸಕ್ಕರೆ 3/4 ಕಪ್

ಒಂದು ಕಪ್ ರವೆ

ಅರ್ಧ ಕಪ್ ತುಪ್ಪ

ತಯಾರಿಸುವ ವಿಧಾನ:

ಮೊದಲು ನೀವು ಒಂದು ಪಾತ್ರೆಯಲ್ಲಿ ನೀರು ಮತ್ತು ಹಾಲನ್ನು ಮಿಶ್ರ ಮಾಡಿ ಕಾಯಿಸಿಕೊಳ್ಳಬೇಕು ನಂತರ ಮತ್ತೊಂದು ಬಾಣಲೆಯಲ್ಲಿ ರವೆಯನ್ನು ಹುರಿಯಬೇಕು. ಹೀಗೆ ಉರಿಯುವಾಗ ಸ್ವಲ್ಪ ತುಪ್ಪ ಎರಡು ಚಮಚ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

ಅದಾದ ಮೇಲೆ ರವೆಗೆ ಸಕ್ಕರೆ ಹಾಕಿ ಮಿಶ್ರ ಮಾಡಿ ರವೆಯನ್ನು ಕುದಿಯುತ್ತಿರುವ ಹಾಲಿಗೆ ಹಾಕಿ ಸೌಟ್ ನಿಂದ ಆಗಾಗ ತಿರುಗಿಸುತ್ತಾ ಇರಬೇಕು. ರವೆ ಹಾಲನ್ನು ಹೀರಿಕೊಂಡು ಬೇಯುವವರೆಗೆ ಆಗಾಗ ತಿರುಗಿಸುತ್ತಾ ಇರಿ. ನಂತರ ಬಾಳೆಹಣ್ಣನ್ನು ಹಿಸುಕಿ ಹಾಕಿ, ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ತಿರುಗಿಸಬೇಕು. ಈ ಅಡುಗೆ ಪಾತ್ರೆಯಲ್ಲಿ ತಳ ಹಿಡಿಯಲು ಬಿಡಬಾರದು.

ನಂತರ ರವೆ ಬೆಂದ ಮೇಲೆ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ತಯಾರಾದ ರವೆ ಬಾಳೆ ಹಣ್ಣು ಹಲ್ವಾಕ್ಕೆ ಹಾಕಿ ಚೆನ್ನಾಗಿ ಮಿಶ್ರ ಮಾಡಿದರೆ ರುಚಿಕರ ರವೆ ಬಾಳೆ ಹಣ್ಣಿನ ಹಲ್ವಾ ರೆಡಿ ಇರುತ್ತದೆ.

LEAVE A REPLY

Please enter your comment!
Please enter your name here