ಡ್ರೈ ಫ್ರೂಟ್ಸ ಉಂಡೆ

ಬೇಕಾಗುವ ಪದಾರ್ಥಗಳು:

ಬೆಲ್ಲ 250ಗ್ರಾಂ

ಗೋಡಂಬಿ 50 ಗ್ರಾಂ

ಖರ್ಜೂರ 50 ಗ್ರಾಂ

ಏಲಕ್ಕಿ 5

ಒಣದ್ರಾಕ್ಷಿ 50 ಗ್ರಾಂ

ಬಾದಾಮಿ 50 ಗ್ರಾಂ

ಗಸಗಸೆ 4 ಚಮಚ

ಮಾಡುವ ವಿಧಾನ :

ಮೇಲೆ ಹೇಳಿರುವ ಎಲ್ಲಾ ತರಹದ ಡ್ರೈ ಫ್ರೂಟ್ಸನ್ನು ಸಣ್ಣಗೆ ಚೂರುಗಳಾಗಿ ಮಾಡಿಕೊಳ್ಳಿ. ಗಸಗಸೆಯನ್ನು ಹುರಿದುಕೊಳ್ಳಿ. ಬೇಕಾದರೆ ಒಣ ಕೊಬ್ಬರಿ ತುರಿಯನ್ನು ಸೇರಿಸಿಕೊಳ್ಳಬಹುದು. ಬೆಲ್ಲವನ್ನು ನೀರಿನಲ್ಲಿ ಶುಭ್ರವಾಗಿ ತೊಳೆದು ಗಟ್ಟಿ ಪಾಕವನ್ನು ಹಿಡಿದುಕೊಳ್ಳಬೇಕು. ಈ ಪಾಕಕ್ಕೆ ಮೇಲೆ ಹೇಳಿರುವ ಎಲ್ಲಾ ಡ್ರೈ ಫ್ರೂಟ್ಸ್ ಸೇರಿಸಿ, ಹುರಿದ ಗಸಗಸೆ, ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕೆದಕಿ. ಪಾಕವು ಗಟ್ಟಿಯಾದ ನಂತರ ಉಂಡೆಗಳನ್ನು ಕಟ್ಟಿ ಮಕ್ಕಳಿಗೆ ತಿನ್ನಲು ಕೊಡಿ

ಉಪಯೋಗಗಳು :

ಡ್ರೈ ಫ್ರೂಟ್ಸ್ ಮಕ್ಕಳ ಮೂಳೆ, ಹಲ್ಲುಗಳು, ದೇಹದ ಬೆಳವಣಿಗೆಗೆ ಸಹಕಾರ ನೀಡುವುದು

 

LEAVE A REPLY

Please enter your comment!
Please enter your name here