ಹೌದು ಇತ್ತೀಚಿನ ದಿನಗಳಲ್ಲಿ ಒಂದು ಸಣ್ಣ ಜ್ವರಕ್ಕೂ ನಾವು ಡಾಕ್ಟರ್ಗಳನ್ನು ಬೇಟಿಯಾಗುವುದನ್ನು ನೋಡುತ್ತೇವೆ, ಆದರೆ ಕೇವಲ ಒಂದು ಜ್ವರ ಅಥವಾ ಶೀತಕ್ಕೆ ನಾವು ಸಾವೆರಾರು ರೂಗಳನ್ನು ಖರ್ಚುಮಾಡುತ್ತೇವೆ ಆದರೆ ಪ್ರಕೃತಿಯಲ್ಲಿ ಸಿಗುವ ಈ ಡಾಕ್ಟರ್ಗಳನ್ನು ನಾವು ನಂಬಿದ್ದೆ ಆದಲ್ಲಿ ನಿಮಗೆ ಯಾವು ರೋಗವು ಹತ್ತಿರ ಸುಳಿಯಲಾರವು..! ಅವು ಯಾವುವು ಗೊತ್ತೇ..?

ಸೂರ್ಯ:

ಹೌದು ಪ್ರತಿನಿತ್ಯ ಕಾಣುವ ಸೂರ್ಯ ಒಬ್ಬ ಡಾಕ್ಟರ್ ನಂತೆಯೇ ಕೆಲಸಮಾಡುತ್ತಾನೆ, ಇವರಿಂದ ನಮಗೆ “ವಿಟಮಿನ್ ಡಿ” ಸಿಗಲಿದ್ದು ಇದು ನಮ್ಮ ಚರ್ಮ ರೋಗಗಳನ್ನು ಹೇಳ ಹೆಸರಿಲ್ಲದಂತೆ ಓಡಿಸುತ್ತವೆ. ಆದರಿಂದ ಚರ್ಮ ರೋಗ ಉಳ್ಳವರು ಪ್ರತಿ ಬೆಳಗ್ಗೆ ಸೂರ್ಯೋದಯವಾದ ಮೇಲೆ ಒಂದು ಗಂಟೆ ಸೂರ್ಯನ ಕಿರಣಗಳನ್ನು ನಿಮ್ಮ ದೇಹಕ್ಕೆ ಸ್ಪರ್ಶಿಸಿಕೊಳ್ಳಿ.

ವಿಶ್ರಾಂತಿ:

ಈಗಿನ ದಿನಗಳಲ್ಲಿ ಮನುಷ್ಯನಿಗೆ ದೈಹಿಕ ಹಾಗು ಮಾನಸಿಕ ನೋವುಗಳು ಮಾಮೂಲು ಇಂತವರು ದಿನಕ್ಕೆ ಏನಿಲ್ಲ ಎಂದರು 7ಗಂಟೆ ವಿಶ್ರಾಂತಿ ತೆಗೆದುಕೊಳ್ಳಿ ಇದರಿಂದ ಒಂದೇ ಸಮಯದಲ್ಲಿ ನಿಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ ಇದರಿಂದ ನಿಮ್ಮ ಮಾನಸಿಕ ಹಾಗು ದೈಹಿಸ್ಕ ಕಾಯಿಲೆಗಳು ನಿಮ್ಮ ಹತ್ತಿರ ಬರುವುದಿಲ್ಲ.

ವ್ಯಾಯಾಮ:

ಕೆಳವ ಊಟ ಮಾಡಿ ಮಲಗಿದರೆ ಅಷ್ಟೇ ಸಾಲದು ನೀವು ತೆಗೆದುಕೊಳ್ಳುವ ಆಹಾರಕ್ಕೆ ತಕ್ಕನಾಯಾಗಿ ಪ್ರತಿ ನಿತ್ಯ ವ್ಯಾಯಾಮ ಮಾಡಿ ಇದರಿಂದ ನಿಮ್ಮ ದೆಯಾದಲ್ಲಿ ಜಾಸ್ತಿ ಇರುವ ಖೊಲೆಸ್ಟ್ರಾಲ್ ಹಾಗು ಇತರೆ ಬೇಡವಾದ ವಸ್ತು ಗಳು ನಿಮ್ಮ ದೇಹದಿಂದ ಹೇಳ ಹೆಸರಿಲ್ಲದಂತೆ ಮಾಯವಾಗುತ್ತವೆ ಇದರಿಂದ ನಿಮ್ಮ ಬಳಿ ಹೃದಯ ಸಂಭಂದೀ ಖಾಯಿಲೆಗಳು ಹತ್ತಿರವೂ ಸುಳಿಯುವುದಿಲ್ಲ.

ಸಮತೋಲನ ಆಹಾರ:

ಸಿಕ್ಕ ಸಿಕ್ಕದನ್ನು ತಿನ್ನುವುದನ್ನು ಕಡಿಮೆ ಮಾಡಿ, ನಿಮ್ಮ ಶರೀರಕ್ಕೆ ಅವಶ್ಯಕವಾಗಿರುವ ಹಣ್ಣು ತರಕಾರಿ ಹಾಗು ಆಹಾರವನ್ನು ನಿಯಮಿತವಾಗಿ ತೆಗೆದುಕೊಳ್ಳಿ, ಇದಕ್ಕೆ ತಕ್ಕಂತೆ ನೀರನ್ನು ಕುಡಿಯಿರಿ ಇದರಿಂದ ನಿಮ್ಮ ದೇಹದಲ್ಲಿ ಉತ್ಪತ್ತಿಯಾಗುವ ವಿಷ ವಸ್ತುಗಳು ನಿಮ್ಮ ದೇಹದಿಂದ ಹೊರಹೋಗುತ್ತವೆ ಹಾಗು ನಿಮಗೆ ಈ ಆಹಾರದಿಂದ ಶಕ್ತಿಯೂ ಲಭಿಸಲಿದೆ.

ಆತ್ಮ ವಿಶ್ವಾಸ:

ಇದು ನಿಮ್ಮ ಜೀವನದಲ್ಲಿ ಅತ್ಯಂತ ಬೇಕಾಗಿರುವುದು ಕಾರಣ, ನಿಮ್ಮ ಜೀವನದಲ್ಲಿ ಏನೆಲ್ಲ ಆಗಬಹುದು ಆದರೆ ನಿಮ್ಮಲ್ಲಿನ ಆತ್ಮವಿಶ್ವಾಸ ನಿಮ್ಮಲ್ಲಿ ಹೊಸ ಚೈತನ್ಯವನ್ನು ತಂದುಕೊಡುತ್ತದೆ, ಏನಾದರೂ ನಿಮ್ಮ ಜೀವನದಲ್ಲಿ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬೇಡಿ.

 

LEAVE A REPLY

Please enter your comment!
Please enter your name here