ಮೊನ್ನೆ ತಾನೇ ಯಡಿಯೂರಪ್ಪನವರ ಸರ್ಕಾರ ಉರುಳಿದ್ದು ಎಲ್ಲರಿಗೂ ಗೊತ್ತಿದೆ..! ಇದಕ್ಕೆ ಕಾರಣ ಕಾಂಗ್ರೆಸ್ ಮತ್ತು JDS ಮೈತ್ರಿ ಅಂತಲೂ ಗೊತ್ತಿದೆ ಆದರೆ ಈಗ ಅವರಿಬ್ಬರ ಮಧ್ಯದಲ್ಲೇ ಕಿತ್ತಾಟಗಳು ಶುರುವಾಗಿರೋದು ನೋಡಿದ್ರೆ ಈ ಸರ್ಕಾರ ಎಷ್ಟು ದಿನ ಉಳಿಯುತ್ತೋ ಯಾವಾಗ ಉರುಳುತ್ತೋ ಅಂತ ನಮ್ಮ ಜನ ತಾಳೆ ನೋಡೋ ಹಾಗೆ ಆಗಿದೆ.

ಕಾರಣ ಒಂದು:

ಹಲವು JDS  ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಈ ಮೈತ್ರಿ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಈ ಮೈತ್ರಿಯ ಬಾಗೆ ಹೊರಗಡೆಯ ಅಸಮಾನದ ಹೊಗೆಯನ್ನು ಹಾಕಲಾರಂಭಿಸಿದ್ದಾರೆ..!

ಕಾರಣ ಎರಡು:

2016 ರಲ್ಲಿ ವಿಧಾನಸೌಧದಲ್ಲೇ HD ರೇವಣ್ಣ ಮತ್ತು DK ಶಿವಕುಮಾರ್ ಕ್ಷುಲ್ಲಕ ಕಾರಣಕ್ಕೆ ಕಚ್ಚಾಡಿರುವ ವಿಡಿಯೋ ವೈರಲ್ ಆಗಿತ್ತು, ಇದನ್ನು ನೋಡಿದ ನಮ್ಮ ಜನ ಸಣ್ಣ ವಿಚಾರದಲ್ಲೇ ಹೀಗೆ ಮನಸ್ತಾಪ ಮಾಡಿಕೊಂಡಿರುವ ಇವರು ಸರ್ಕಾರದಂತಾ ವಿಚಾರದಲ್ಲಿ ಹೇಗೆಲ್ಲ ಕಚ್ಚಾಡಬಹುದೇನೋ ಅಂತ ಮಾತನಾಡಿಕೊಳ್ಳುತ್ತಿದ್ದಾರೆ.

ಕಾರಣ ಮೂರು:

ಅಧಿಕಾರಕ್ಕಾಗಿ ಈಗಾಗಲೇ ಎರಡು ಪಕ್ಷದಲ್ಲಿ ಕಚ್ಚಾಟಗಳು, ತೆರೆಮನೆಯಲ್ಲಿ ಕಸರತ್ತುಗಳು ನಡೆಯುತ್ತಿದ್ದು, ಯಾರು DCM ಆಗಬೇಕು ಯಾರು ಕ್ಯಾಬಿನೇಟ್ ಮಿನಿಸ್ಟರ್ ಆಗ್ಬೇಕು ಅಂತ ಹಗ್ಗ ಜಗ್ಗಾಟ ನಡೆಯುತ್ತಿದೆ ಒಂದು ವೇಳೆ ಅಧಿಕಾರ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಬಂದದ್ದೇ ಆದಲ್ಲಿ ಮುಂದೇನು ಎನ್ನುವುದನ್ನು ನೋಡಲು ನಮ್ಮ ಜನ ತುದಿಗಾಲಲ್ಲಿ ನಿಂತು ನೋಡುತ್ತಿದ್ದರೆ.

ಕಾರಣ ನಾಲ್ಕು:

ಕುಮಾರಸ್ವಾಮಿ ಯವರ ಸರ್ಕಾರ ಸಿದ್ದಾರಾಮಯ್ಯನವರನ್ನು ಹಳೆಯ ದ್ವೇಷದಿಂದ ಅಧಿಕಾರದಿಂದ ದೂರ ಇಡಬಹುದು ಇದು ಕಾಂಗ್ರೆಸ್ ನ ಒಂದು ಬಣಕ್ಕೆ ತೀವ್ರ ಮುಜುಗರ ಉಂಟಾಗಬಹುದು, ಇದರಿಂದಲೂ ಮುಂದೊಂದು ದಿನ ಸರ್ಕಾರಕ್ಕೆ ಹಾನಿಯಾಗಬಹುದು ಎಂದು ರಾಜಕೀಯ ಪಂಡಿತರು ಭವಿಷ್ಯ ನುಡಿದಿದ್ದಾರೆ.

 

 

 

LEAVE A REPLY

Please enter your comment!
Please enter your name here