ಕೆಲವರಿಗೆ ಆಗಾಗ ಬಾಯಿಯ ಒಳಭಾಗದಲ್ಲಿ ಕಾಣಿಸಿಕೊಳ್ಳುವ ಬಾಯಿಹುಣ್ಣು (Mouth Ulcer) ಏನನ್ನೂ ತಿನ್ನಲೂ, ಕುಡಿಯಲೂ ಹಾಗೂ ಮಾತನಾಡಲೂ ಆಗದಂತಹ ಪರಿಸ್ಥಿತಿ ತರುತ್ತದೆ. ಸಾಧಾರಣವಾಗಿ ಏಳರಿಂದ ಹತ್ತು ಬಹುಬೇಗ ಗುಣವಾಗುತ್ತದೆ.

ಬಾಯಿಹುಣ್ಣಿಗೆ ಪ್ರಮುಖ ಕಾರಣಗಳು:

ದೇಹದ ಉಷ್ಣತೆ ಹೆಚ್ಚಾಗಿರುವುದು, ಖಾರದ, ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು,.ದೇಹದ ಹಾರ್ಮೋನುಗಳ ಅಸಮತೋಲನ. ಬಾಯಿ ಸ್ವಚ್ಛತೆಯ ಕೊರತೆ ಮತ್ತು ಅತಿಯಾದ ಧೂಮಪಾನ ಮತ್ತು ಮದ್ಯಪಾನ ಮಾಡುವು ಬಾಯಿ ಹುಣ್ಣು ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗುತ್ತದೆ.

ಬಾಯಿಹುಣ್ಣಿನ ನಿವಾರಣೆಗೆ ಪರಿಹಾರೋಪಾಯಗಳು:

ಅರಿಶಿನ:

ಅರಿಶಿನದ ಪುಡಿಯನ್ನು ಹಾಕಿ ಪೇಸ್ಟ್ ಮಾಡಿ ಅದನ್ನು ಹುಣ್ಣಾದ ಜಾಗಕ್ಕೆ ಹಚ್ಚಿ. ತಕ್ಷಣ ನೋವು ಕಡಿಮೆಯಾಗುತ್ತದೆ ಮತ್ತೆ ಬಾಯಿಹುಣ್ಣು ಬೇಗ ವಾಸಿಯಾಗುತ್ತದೆ.

ತೆಂಗಿನ ಹಾಲು:

ತೆಂಗಿನ ಕಾಯಿಯ ಹಾಲಿನಿಂದ ದಿನಕ್ಕೆ ಎರಡರಿಂದ ಮೂರು ಬಾರಿ ಬಾಯಿ ಮುಕ್ಕಳಿಸಿ ಉಗಿಯುತ್ತಿದ್ದರೆ ಎರಡೇ ದಿನದಲ್ಲಿ ಬಾಯಿ ಹುಣ್ಣು ಮಾಯವಾಗುತ್ತದೆ.

ಕೊತ್ತಂಬರಿ ಬೀಜ :

ಒಂದು ಚಮಚ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ ಕುದಿಸಿ. ಬಳಿಕ ಅದನ್ನು ಫಿಲ್ಟರ್ ಮಾಡಿ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಇದರಿಂದ ಬಾಯಿಯನ್ನು ಕ್ಲೀನ್ ಮಾಡಿ. ಹೀಗೆ ಮೂರು ಬಾರಿ ಮಾಡಿದರೆ ಬಾಯಿಹುಣ್ಣು ಬೇಗನೆ ಗುಣವಾಗುತ್ತದೆ.

ಅಡುಗೆ ಸೋಡಾ :

ಅಡುಗೆ ಸೋಡಾವನ್ನು ನೀರಿನಲ್ಲಿ ಹಾಕಿ ಪೇಸ್ಟ್ ಮಾಡಿಕೊಂಡು ನಂತರ ಅದನ್ನು ಬಾಯಿಹುಣ್ಣು ಆಗಿರುವ ಜಾಗಕ್ಕೆ ಹಚ್ಚುತ್ತಿದ್ದರೆ ಬಹುಬೇಗ ಗುಣಮುಖವಾಗುತ್ತದೆ.

ಜೇನು :

ಶುದ್ಧ ಜೇನನ್ನು ಕೈಬೆರಳಿನಲ್ಲಿ ತಗೊಂಡು ಹುಣ್ಣಾಗಿರುವ ಜಾಗಕ್ಕೆ ಹಚ್ಚುವುದರಿಂದ ಬೇಗನೆ ಬಾಯಿ ಹುಣ್ಣು ವಾಸಿಯಾಗುತ್ತದೆ ಗುಣಮುಖವಾಗುತ್ತದೆ.

ಮೆಂತ್ಯ:

ಮೆಂತೆ ಕಾಳನ್ನು ಬಾಯಿಯಲ್ಲಿ ಹಾಕಿ ಸ್ವಲ್ಪ ಹತ್ತು ಜಗಿಯುವುದರಿಂದ ಅಥವಾ ಮೆಂತ್ಯೆ ಸೊಪ್ಪನ್ನು ನೀರಿನಲ್ಲಿ ಕುದಿಸಿ ನೀರು ತಣ್ಣಗಾದಮೇಲೆ ನೀರನ್ನು ಫಿಲ್ಟರ್ ಮಾಡಿ ಬಾಯಿ ಮುಕ್ಕಳಿಸುವುದರಿಂದ ಬಾಯಿಹುಣ್ಣು ಬಹುಬೇಗ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here