ಮೊನ್ನೆತಾನೆ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪನವರು ಇವತ್ತು ವಿಶ್ವಾಸ ಮತಯಾಚನೆ ಮಾಡದೆಯೇ ರಾಜೀನಾಮೆ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನಂತೆ 15ನೇ ವಿಧಾನಸಭೆ ಚೊಚ್ಚಲ ವಿಧಾನಸಭೆಯಲ್ಲಿ ಶನಿವಾರ 4ಗಂಟೆಗೆ ಹಂಗಾಮಿ ಸ್ಪೀಕರ್ ಕೆಜಿ ಬೋಪಯ್ಯ ಅವರ ನೇತೃತ್ವದಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ
ಹಂಗಾಮಿ ಸ್ಪೀಕರ್ ಕೆಜಿ ಬೋಪಯ್ಯ ಅವರ ಸೂಚನೆ ಮೇರೆಗೆ ಬಿಎಸ್ ಯಡಿಯೂರಪ್ಪ ವಿಶ್ವಾಸಮತ ಪ್ರಸ್ತಾವನೆ ಮಂಡಿಸಿದರು.ಬಳಿಕ ಭಾಷಣ ಆರಂಭಿಸಿ, ಹೋರಾಟ ಜೀನವದ ಹಾದಿಯನ್ನು ಮೆಲುಕು ಹಾಕಿದರು.
ವಿಶ್ವಾಸಮತ ಯಾಚನೆ ಮಾಡದೆಯೇ ರಾಜೀನಾಮೆ:
ಭಾವನಾತ್ಮಕ ಭಾಷಣ ಮಾಡಿದ ಬಿಎಸ್ ಯಡಿಯೂರಪ್ಪ ಕೊನೆಯಲ್ಲಿ ನಾನು ವಿಶ್ವಾಸಮತ ಪ್ರಸ್ತಾಪ ಮಂಡಿಸದೇ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿ ಗದ್ಗದಿತರಾದರು. ಜನತಾ ಜನಾರ್ದನರ ಮುಂದೆ ಹೋಗಿ ನ್ಯಾಯ ಕೇಳುತ್ತೇನೆ. ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುವುದಾಗಿ ಹೇಳಿ ವಿಧಾನಸಭೆ ಕಲಾಪದಿಂದ ನಿರ್ಗಮಿಸಿದರು.
ಕೇವಲ 55ಗಂಟೆ ಮಾತ್ರ ಮುಖ್ಯಮಂತ್ರಿ !
ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ(ಮೇ 17) ಬಿಎಸ್ ಯಡಿಯೂರಪ್ಪ ಕೇವಲ 55 ಗಂಟೆಯಲ್ಲಿ ವಿಶ್ವಾಸಮತ ಯಾಚಿಸದೇ ಅಧಿಕಾರ ಕಳೆದುಕೊಂಡಿದ್ದಾರೆ. ಇದಕ್ಕೂ ಮೊದಲು 2007ರಲ್ಲಿ ಕೇವಲ 7 ದಿನ ಮುಖ್ಯಮಂತ್ರಿಯಾಗಿದ್ದು ಬಳಿಕ ರಾಜೀನಾಮೆ ಕೊಟ್ಟಿದ್ದರು. 2008ರ ಮೇ 30ರಿಂದ 2011ರವರೆಗೆ ಅಂದರೆ ಸುಮಾರು 3 ವರ್ಷ 62 ದಿನಗಳ ಕಾಲ ಸಿಎಂ ಆಗಿ ಅಧಿಕಾರದಿಂದ ಕೆಳಗಿಳಿದಿದ್ದರು.
ಮುಂದೇನು?
ಈಗ ರಾಜೀನಾಮೆ ಬಳಿಕ ಮುಂದೇನು ಅಂತ ಪ್ರಶ್ನೆ ಉದ್ಭವವಾಗಿದೆ, ರಾಜಕೀಯ ಪಂಡಿತರ ಪ್ರಕಾರ ಬರುವ ಸೋಮವಾರ ಕುಮಾರಸ್ವಾಮಿ ಯವರು ಕಾಂಗ್ರೆಸ್ ನ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಸಂಭವವಿದೆ