ಹೌದು ಹಾಗಲಕಾಯಿ ಗೊಜ್ಜು ಆರೋಗ್ಯಕ್ಕೆ ಉತ್ತಮ ಅನ್ನೋದು ಹಿರಿಯರ ಮಾತು, ಅದು ಸತ್ಯ ಕೂಡ. ನೀವು ಈ ಸರಳ ವಿಧಾನದ ಮೂಲಕ ಹಾಗಲಕಾಯಿ ಗೊಜ್ಜನ್ನು ತಯಾರಿಸಿ ಮನೆ ಮಂದಿ ಕುಳಿತು ಸವಿಯಿರಿ.

ಬೇಕಾಗುವ ಪದಾರ್ಥಗಳು

ಹಾಗಲಕಾಯಿ 2 – 3

ಉದ್ದಿನ ಬೇಳೆ – ಒಂದು ಚಮಚ

ಬೆಲ್ಲ – ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಎಳ್ಳು – ಎರಡು ಚಮಚ

ಮೆಂತ್ಯೆ – ಮುಕ್ಕಾಲು ಚಮಚ

ಒಣ ಕೊಬ್ಬರಿ – ಒಂದು ಬಟ್ಟಲು

ಒಣಗಿನ ಮೆಣಸಿನಕಾಯಿ – 8 -10

ಹುಣಸೆಹಣ್ಣು – ಒಂದು ನಿಂಬೆ ಗಾತ್ರದಷ್ಟು

ತಯಾರಿಸುವ ವಿಧಾನ…

ಮೊದಲು ನೀವು ಉದ್ದಿನಬೇಳೆ, ಮೆಂತ್ಯೆ, ಎಳ್ಳು, ಒಣಕೊಬ್ಬರಿ, ಒಣಗಿದ ಮೆಣಸಿನಕಾಯಿ ಎಲ್ಲವನ್ನು ಬೇರೆಬೇರೆಯಾಗಿ ಹುರಿದು ಮಿಕ್ಸಿ ಜಾರ್ ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು.  ನಂತರ ಹಾಗಲಕಾಯಿಯನ್ನು ತೊಳೆದು, ಒರೆಸಿ, ಬೀಜ ತೆಗೆದು ಸಣ್ಣ ಹೋಳುಗಳಾಗಿ ಹೆಚ್ಚಿ ಎಣ್ಣೆಯಲ್ಲಿ ಕರಿದುಕೊಳ್ಳಬೇಕು. ಕರಿದ ಹಾಗಲಕಾಯಿ, ಹುಣಸೆರಸ, ಪುಡಿ ಮಾಡಿಕೊಂಡ ಮಿಶ್ರಣ, ಉಪ್ಪು, ಚಿಟಿಕೆ ಅರಿಶಿನ, ಇಂಗು ಎಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು.  ಒಂದು ಚಮಚ ಎಣ್ಣೆ ಕಾಯಿಸಿ, ಸಾಸಿಸವೆ ಹಾಕಿ ಒಗ್ಗರಣೆ ಮಾಡಿದರೆ ಗೊಜ್ಜು ರೆಡಿ ಇರುತ್ತದೆ.

LEAVE A REPLY

Please enter your comment!
Please enter your name here