ರುಚಿಕರವಾದ ಹಾಗು ಆರೋಗ್ಯಕರವಾದ ಈರುಳ್ಳಿ ದೋಸೆಯನ್ನು ತಯಾರಿಸುವ ಸಿಂಪಲ್ ವಿಧಾನ ಇಲ್ಲಿದೆ ನೋಡಿ ನೀವು ಕೂಡ ನಿಮ್ಮ ಮನೆಯಲ್ಲಿ ಈ ರೆಸಪಿಯನ್ನು ಮಾಡಲು ಬಯಸುವುದಾದರೆ ಈ ವಿಧಾನದ ಮೂಲಕ ತಯಾರಿಸಿ.

ತಯಾರಿಸಲು ಬೇಕಾಗುವ ಸಾಮಗ್ರಿಗಳು

ಎರಡು ಕಪ್ ಹುಳಿ ಬಂದ ದೋಸೆ ಹಿಟ್ಟು

೨-೩ ಈರುಳ್ಳಿ

೩-೪ ಹಸಿಮೆಣಸಿನ ಕಾಯಿ

ಸ್ವಲ್ಪ ಕರಿಬೇವು

ಸ್ವಲ್ಪ ಕೊತ್ತಂಬರಿ ಸೊಪ್ಪು

ಎರಡು ಚಮಚ ತುರಿದ ಕ್ಯಾರೇಟ್

ರುಚಿಗೆ ತಕ್ಕಷ್ಟು ಉಪ್ಪು

ಎರಡು ಚಮಚ ಎಣ್ಣೆ

ತಯಾರಿಸುವ ವಿಧಾನ:

ಮೊದಲನೆಯದಾಗಿ ಹುಳಿ ಬಂದ ದೋಸೆ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ತುರಿದ ಕ್ಯಾರೆಟ್, ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.

ನಂತರ ದೋಸೆ ಹೆಂಚು ಬಿಸಿ ಮಾಡಿ, ಸ್ವಲ್ಪ ಎಣ್ಣೆ ಸವರಿ. ಹೆಂಚು ಕಾದ ಮೇಲೆ ದಪ್ಪವಾಗಿ ದೋಶೆ ಹುಯ್ಯಿರಿ. ಸುತ್ತಲೂ ಎಣ್ಣೆ ಹಾಕಿ ಹದವಾದ ಉರಿಯಲ್ಲಿ ಎರಡೂ ಕಡೆ ಬೇಯಿಸಿದರೆ ನೀವು ಬಯಸುವ ರುಚಿಕರವಾದ ಈರುಳ್ಳಿ ದೋಸೆ ಸಿದ್ಧವಿರುತ್ತದೆ.

LEAVE A REPLY

Please enter your comment!
Please enter your name here