ನಾವು ಯಾವುದೇ ಕೆಲಸ ಮಾಡಿದರು ಆಧಾರ್ ಕಾರ್ಡ್ ಬೇಕು, ಸರ್ಕಾರದ ಯಾವುದೇ ಯೋಜನೆಯನ್ನು ನಾವು ಪಡೆಯಬೇಕು ಎಂದರೆ ಅದಕ್ಕೆ ಆಧಾರ್ ಕಾರ್ಡ್ ಬಹಳ ಮುಖ್ಯ. ನಮ್ಮ ಹಕ್ಕು ಆಗಿರುವ ಈ ಆಧಾರ್ ಕಾರ್ಡ್ ಇಲ್ಲದಿದ್ದರೆ ಯಾವ ಕೆಲಸವೂ ಆಗುವುದಿಲ್ಲ. ಅದಕ್ಕಾಗಿ ಈ ಆಧಾರ್ ಕಾರ್ಡ್ ಅನ್ನು ನಾವು ಜೋಪಾನವಾಗಿ ಇಟ್ಟುಕೊಳ್ಳ ಬೇಕು. ಅಪ್ಪಿ ತಪ್ಪಿಯೂ ಕಳೆದುಕೊಳ್ಳ ಬಾರದು, ಅಕಸ್ಮಾತ್ ಕಳೆದರೆ….? ಅಯ್ಯೋ ಆಧಾರ್ ಕಾರ್ಡ್ ಕಳೆದಿದೆ ಎಂದು ಚಿಂತೆ ಮಾಡಬೇಡಿ ಇನ್ನು ಮುಂದೆ ಆಧಾರ್ ಕಾರ್ಡ್ ಪಡೆಯಲು ಬಹಳ ದಿನ ಕಾಯ ಬೇಕಿಲ್ಲ, ಆಧಾರ್ ಕಾರ್ಡ್ ಪಡೆದುಕೊಳ್ಳುವಾಗ ಪಡೆದಿರುವ ರಸೀತಿ ಸಂಖ್ಯೆ(ನೋಂದಣಿ ನಂತರ ಸಿಗುವ ಸಂಖ್ಯೆ) ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ಹೊಂದಿರಬೇಕು ಅಥವಾ ನೆನಪಿಟ್ಟುಕೊಂಡಿರಬೇಕು ಇವೆರಡು ಇದ್ದರೆ ಡೂಪ್ಲಿಕೇಟ್ ಆಧಾರ್ ಕಾರ್ಡ್ ಮರಳಿ ಪಡೆಯಲು ಸಹಾಯವಾಗುತ್ತದೆ.

1. ಇ ಆಧಾರ್‌ಕಾರ್ಡ್ ಆನ್‌ಲೈನ್ ಅಫಿಶಿಯಲ್ ವೆಬ್‌ಸೈಟ್‌ ತೆರೆಯಿರಿ. ನಂತರ ಆಧಾರ್ ಎನ್‌ರೊಲ್‌ಮೆಂಟ್‌ನಲ್ಲಿ “ಗೆಟ್ ಆಧಾರ್ ನಂಬರ್ ಆನ್ ಮೊಬೈಲ್”ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

2 ನೋಂದಣಿ ಸಂಖ್ಯೆ ವಿವರ ಸಲ್ಲಿಸಿ “ಗೆಟ್ ಆಧಾರ್ ನಂಬರ್ ಆನ್ ಮೊಬೈಲ್”ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಹೊಸದೊಂದು ವಿಂಡೊ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ನೋಂದಣಿ ಸಂಖ್ಯೆ ವಿವರ ಸಲ್ಲಿಸಿ(ನೋಂದಣಿ ಸಂಖ್ಯೆ, ದಿನಾಂಕ, ಸಮಯ, ನಿವಾಸ ಹೆಸರು ಹಾಗೂ ಪಿನ್ ಕೋಡ್) ಆಧಾರ್ ರಸೀತಿ ಸ್ಲಿಪ್ ನಲ್ಲಿರುವಂತೆ.

3.ಆಧಾರ್‌ಕಾರ್ಡ್ ಡೌನ್‌ಲೋಡ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಫೋನಿಗೆ ಒನ್ ಟೈಮ್ ಪಿನ್ ಬರುತ್ತದೆ. OTP ನಮೂದಿಸಿ 7ನಕಲಿ ಆಧಾರ್‌ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ನಿಮ್ಮ ಮುಂದೆ ಬರಲಿದೆ. ನಂತರ ಪಾಸ್‌ವರ್ಡ್ ಕೇಳುತ್ತದೆ.

4.ಪಾಸ್‌ವರ್ಡ್ ನೀಡಿ ಆಧಾರ್ ಪಡೆಯಿರಿ ಪಾಸ್‌ವರ್ಡ್ ಬಗ್ಗೆ ಇ-ಮೇಲ್ ಮತ್ತು ಎಸ್ಎಂಎಸ್ ಬರುತ್ತದೆ. ಪಾಸ್‌ವರ್ಡ್ ಹಾಕಿ ಆಧಾರ್‌ಕಾರ್ಡ್ ಡೌನ್‌ಲೊಡ್ ಮಾಡಿಕೊಳ್ಳಿ.

LEAVE A REPLY

Please enter your comment!
Please enter your name here