ರಿಷಿ ಶಾ, 31 ವರ್ಷದ ಅನಿವಾಸಿ ಭಾರತೀಯ ಯುವಕ, ತನ್ನ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿದ್ದ ಇವರು ಇವತ್ತು ಸಹಸ್ರಾರು ಕೋಟಿಗಳ ವಡೆಯ, ಹತ್ತುವರ್ಷಗಳ ಹಿಂದೆ ಆರೋಗ್ಯ ಮಾಹಿತಿಯ ಹೆಸರಲ್ಲಿ ಶುರು ಮಾಡಿದ ಸಾಫ್ಟ್ವೇರ್ ಕಂಪನಿ (OutCome Health) ಇವತ್ತು ಇವರನ್ನು ಈ ಕೀರ್ತಿಯತ್ತ ಸಾಗುವಂತೆ ಮಾಡಿದೆ, ಕೇವಲ 10 ವರ್ಷಗಳ ಹಿಂದೆ ಎಲ್ಲರ ಹತ್ತಿರ ಕೀಳಾಗಿ ಕಾಣಲ್ಪಡುತ್ತಿದ್ದ ಇವರು ಇವತ್ತು ಎಲ್ಲರೂ ಹುಬ್ಬೇರಿಸುವಂತೆ ಬೆಳೆದು ನಿಂತಿದ್ದಾರೆ.

10 ವರ್ಷಗಳ ಹಿಂದೆ ಶುರು ಮಾಡಿದ ಸಾಫ್ಟ್ವೇರ್ ಕಂಪನಿ ಇವತ್ತು ಬರೋಬ್ಬರಿ 35840 ಕೋಟಿ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದೆ..! ಅದಷ್ಟೇ ಅಲ್ಲ ರಿಷಿ ಶಾ ಅವರ ಹೆಸರು ಅಮೆರಿಕದ ಚಿಕಾಗೋನ ಶತಕೋಟ್ಯಧೀಶರ ಪಟ್ಟಿಯಲ್ಲಿ ದಾಖಲಾಗಿದೆ.

ಹಿನ್ನೆಲೆಯೇನು?

ಶಾ ಅವರ ತಂದೆ ಭಾರತೀಯರಾಗಿದ್ದರು, ಅವರ ತಂದೆಯ ಮರಣದ ನಂತರ ಶಾ ಅವರು ತಾಯಿಯ ಜೊತೆಗೂಡಿ ಚಿಕಾಗೋ ಗೆ ವಲಸೆ ಹೋಗಿದ್ದರು, ತಾಯಿಯು ವೃತ್ತಿಯಲ್ಲಿ ವೈದ್ಯರಾಗಿದ್ದರು ಇದನ್ನು ಪ್ರೇರಣೆಯಂತೆ ತೆಗೆದುಕೊಂಡ ಶಾ ಆರೋಗ್ಯ ಮಾಹಿತಿಯ ಹೆಸರಲ್ಲಿ ಕಂಪನಿ ತೆರೆದು ಇಂದು ಯಶಸ್ವೀ ಉದ್ಯೋಗಿಯಾಗಿ ಬೆಳೆದಿದ್ದಾರೆ.

ಔಟ್ಕಾಮ್ ಹೆಲ್ತ್ ಹೇಗೆ ಕೆಲಸ ಮಾಡುತ್ತದೆ:

ಇದೊಂದು ಆರೋಗ್ಯ ಮಾಹಿತಿ ನೀಡುವ ಕಂಪನಿ ಇದು ರೋಗಿಗಳಿಗೆ ಅವರ ಸಮಸ್ಯೆಗಳ ಅನುಸಾರ ಸಲಹೆಗಳನ್ನು ನೀಡುತ್ತದೆ ಇದರಲ್ಲಿ ಯಾವ ರೋಗಕ್ಕೆ ಯಾವ ಆಸ್ಪತ್ರೆ ಯಾವ ಡಾಕ್ಟರ್ ಹತ್ತಿರ ಹೋದರೆ ಸಮಸ್ಯೆಗೆ ಪರಿಹಾರ ಎಂದೆಲ್ಲ ತಿಳಿಸಿ ಕೊಡಲಾಗುತ್ತದೆ.

LEAVE A REPLY

Please enter your comment!
Please enter your name here