ಶುಗರ್ ಅಥವಾ ಸಕ್ಕರೆ ಕಾಯಿಲೆ ಇತ್ತೀಚಿಗೆ ಎಲ್ಲರಲ್ಲೂ ಕಂಡುಬರುತ್ತಿರುವ ಒಂದು ರೋಗ ಇದರಿಂದ ಹೊರಬರಲಾರದೆ ಎಷ್ಟೋ ಜನ ಜೀವ ತೆತ್ತಿದ್ದಾರೆ ಆದರೆ ಇದನ್ನು ಬರದೇ ಇರುವ ರೀತಿಯಲ್ಲಿ ನೋಡಿಕೊಳ್ಳಬೇಕು ನಿಮಗೆ ನಾವು ಹೇಳಿದ ಈ ಲಕ್ಷಣಗಳು ಕಂಡಲ್ಲಿ ನಿಮ್ಮ ಸಕ್ಕರೆ ಆಹಾರದ ಪ್ರಮಾಣವನ್ನು ನೀವು ಇಳಿಸಿಕೊಳ್ಳಲೇಬೇಕು ಇಲ್ಲದಿದ್ದರೆ ನಿಮಗೆ ಸಕ್ಕರೆ ಕಾಯಿಲೆ ಬರುವುದರಲ್ಲಿ ಅನುಮಾನವಿಲ್ಲ.
ಪದೇ ಪದೇ ಹೊಟ್ಟೆ ಹಸಿಯುತ್ತಾ..?
ಈಗಿನ್ನು ತಿಂದಿದ್ದೀರಿ ಮತ್ತೆ ನಿಮಗೆ ಹೊಟ್ಟೆ ಹಸಿಯುತ್ತ..?ಹಾಗಾದ್ರೆ ಕನ್ಫರ್ಮ್ ನಿಮ್ಮಲ್ಲಿ ಸಕ್ಕರೆ ಪ್ರಮಾಣ ಜಾಸ್ತಿ ಯಾಗಿದೆ / ನೀವು ತಿಂದ ಆಹಾರದಲ್ಲಿ ಸಕ್ಕರೆ ಹೆಚ್ಚಾಗಿದೆ ಎಂದು ಹೀಗಿರುವಾಗ ಆದಷ್ಟು ಸಕ್ಕರೆ ಪ್ರಮಾಣ ಕಡಿಮೆ ಇರುವ ಆಹಾರವನ್ನು ಬಳಸಿ.
ಈಗತಾನೇ ಎದ್ದಿದ್ದೀರಿ ಮತ್ತೆ ಸುಸ್ತು ನಿದ್ದೆ ಬರುತ್ತಾ..?
ಈ ರೀತಿಯಾದರೆ ಮೈಗಳ್ಳತನ ಅಂದುಕೊಳ್ಳೋರೇ ಜಾಸ್ತಿ ಆದರೆ ನಿಮ್ಮ ದೇಹದಲ್ಲಿ ಶುಗರ್ ಪ್ರಮಾಣ ಜಾಸ್ತಿಯಾಗಿ ಆಹಾರದಿಂದ ಬರುವ ಶಕ್ತಿಯನ್ನು ಹೀರಿಕೊಳ್ಳದೆ ಇದ್ದಲ್ಲಿ ಹೀಗಾಗುತ್ತದೆ..! ಆದಷ್ಟು ವ್ಯಾಯಾಮ ಮಾಡಿ ಹೆಚ್ಚೆಚ್ಚು ನೀರು ಕುಡಿಯಿರಿ ಒಂದಿಷ್ಟು ದಿನ ವ್ಯಾಯಾಮವನ್ನು ಬಿಡದೆ ಮಾಡಿ ಹಾಗು ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಿ..
ಪದೇ ಪದೇ ಮೂತ್ರಕ್ಕೆ ಹೋಗುತ್ತೀರಾ..?
ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿ ಆದರೆ ನಿಮ್ಮ ಕಿಡ್ನಿ ಗಳು ಮೂತ್ರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ವಿಫಲವಾಗುತ್ತವೆ ಅದರ ಕಾರಣವೇ ಹೀಗೆ ಪದೇ ಪದೇ ಮೂತ್ರಕ್ಕೆ ಹೋಗುವುದು, ಆದಷ್ಟು ಸಕ್ಕರೆ ಪ್ರಮಾಣವನ್ನು ತಗ್ಗಿಸಿ.
ಸಿಕ್ಕಾಬಟ್ಟೆ ಬಾಯಾರಿಕೆ ಆಗುತ್ತಾ..?
ನಿಮ್ಮ ದೇಹದಲ್ಲಿ ವಿಪರೀತ ಸಕ್ಕರೆ ಅಂಶವಿದ್ದಲ್ಲಿ ಹೀಗಾಗುತ್ತದೆ ಆದಷ್ಟು ಸಕ್ಕರೆ ಪ್ರಮಾಣವನ್ನು ನಿಮ್ಮ ಆಹಾರದಲ್ಲಿ ತಗ್ಗಿಸಿ.
ದೇಹದ ತೂಕ ಇಳಿಕೆ:
ನಿಮ್ಮ ರಕ್ತದಲ್ಲಿನ ಹೆಚ್ಚ್ಚಿನ ಪ್ರಮಾಣದ ಗ್ಲುಕೋಸ್ ಅಂಶ ನಿಮ್ಮ ದೇಹದ ತೂಕದ ಇಳಿಕೆಗೆ ಕಾರಣವಾಗುತ್ತದೆ, ಅದು ಕೂಡ ಕಡಿಮೆ ಸಮಯದಲ್ಲಿ.
ಸೂಚನೆ : ಈ ಮೇಲಿನ ತೊಂದರೆಗಳು ನಿಮ್ಮಲ್ಲಿ ಕಂಡು ಬಂದರೆ ನೀವು ತಕ್ಷಣ ನಿಮ್ಮ ಹತ್ತಿರದ ನುರಿತ ವೈದ್ಯರನ್ನು ಭೇಟಿ ಮಾಡಿ ಈ ಲೇಖನ ನಿಮ್ಮಲ್ಲಿ ಜಾಗೃತಿ ಮೂಡಿಸುತ್ತದೆಯೇ ವಿನಃ ನಿಮ್ಮ ತೊಂದರೆಗೆ ಪರಿಹಾರ ಸೂಚಿಸುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ: http://www.vaartaasante.com/medical-disclaimer/