ಉತ್ತರ ಕರ್ನಾಟಕದಲ್ಲಿ ಹಲವಾರು ರೀತಿಯ ಸ್ಪೈಸಿ ಐಟಂ ಬಗ್ಗೆ ನೀವು ಕೇಳರತ್ತೀರಾ. ಅದೇ ತರ ಇದು ಉತ್ತರ ಕರ್ನಾಟಕದ ಒಂದು ಖಾರವಾದ ಅಡಿಗೆಯಲ್ಲಿ ಈ ಕಡುಬು ಒಂದು ಇದಕ್ಕೆ ಉಂಡಗಡುಬ ಎನ್ನುತ್ತಾರೆ. ಮುಖ್ಯವಾಗಿ ಹೇಳ ಬೇಕು ಅಂದ್ರೆ ಇದನ್ನು ಕರಿಯಲು ಒಂದು ಚುರು ಎಣ್ಣೆ ಬಳಸಲ್ಲ ಆದ್ರೂ ಇದು ತಿನ್ನತ್ತಾ ಇದ್ರೆ ವಾವ್ ಸಾಕು ಅನಸೇದೆ ಇಲ್ಲ.

ಈಗ ನಿಮಗೂ ತಿನ್ನ ಬೇಕು ಅನಸ್ತಾ ಇದೇನಾ ಹಾಗಾದ್ರೆ ನೀವು ಮನೆಲ್ಲಿ ಮಾಡಕೊಂಡು ತಿನ್ನಿ

ಉಂಡಗಡುಬು ಮಾಡಲು ಬೇಕಾದ ಸಾಮಾಗ್ರಿಗಳು

ಅಕ್ಕಿ ಹಿಟ್ಟು

ಜೋಳದ ಹಿಟ್ಟು

(ಸ್ವಲ್ಪ) ಕಡಲೆ ಹಿಟ್ಟು

ಬೆಳ್ಳುಳ್ಳಿ

ಜಿರಿಗೆ

ಕರಿಬೇವು

ಕೊತ್ತಂಬರಿ

ಹಸಿಮೆಣಸಿನಕಾಯಿ

ಮಾಡುವ ವಿಧಾನ

ಮೊದಲು ಅಕ್ಕಿ ಹಿಟ್ಟು, ಜೋಳದ ಹಿಟ್ಟು ಮತ್ತು ಸ್ವಲ್ಪ ಕಡಲೆ ಹಿಟ್ಟನ್ನು ಮಿಕ್ಸ ಮಾಡಿಕೊಳ್ಳಿ ನಂತರ ಒಂದು ಮಿಕ್ಸಿ ಜಾರಿಗೆ ಬೆಳ್ಳುಳ್ಳಿ, ಜಿರಿಗೆ, ಕರಿಬೇವು, ಕೊತ್ತಂಬರಿ ಹಾಕಿ ಎಲ್ಲವನ್ನು ಮಿಕ್ಸಿ ಮಾಡಿಕೊಳ್ಳಿ ಆಮೇಲೆ ಓಲೆಯ ಮೇಲೆ ನೀರನ್ನು ಕುದಿಯಲು ಇಡಿ(1/2 ಕೆಜಿ ಹಿಟ್ಟಿಗೆ 1/2 ಲೀ ನೀರನ್ನು ಕುದಿಯಲು ಇಡಬೇಕು) ನೀರು ಕುದಿದ ನಂತರ ಅದಕ್ಕೆ ನೀವು ಮಿಕ್ಸಿ ಮಾಡಿಕೊಂಡ ಪೆಸ್ಟನ್ನು ಕುದಿಯುವ ನೀರಿಗೆ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮತ್ತು ಅದು ಕುದಿಯುವ ನೀರಿಗೆ ಸ್ವಲ್ಪ ಎಣ್ಣೆ ಹಾಕಿ ನಂತರ ಅದಕ್ಕೆ ನೀವು ಮೊದಲೆ ಮಿಕ್ಸ ಮಾಡಿದ 3 ಹಿಟ್ಟನು ಹಾಕಿ ಆ ಕುದಿಯುವ ನೀರಿನಲ್ಲಿ ಹಾಕಿ (ಕೈಯಾಡಿಸುವುದು ಬೇಡ) ಎಲ್ಲವು ಐಟಂಗಳು ಕುದ್ದು ತಳ ಸೇರಿದಂತೆ ಆಗುತ್ತದೆ ಆಗ ರಾಗಿ ಕೈಯಾಡಿಸುವ ಹುಟ್ಟು ಅಥವಾ ಕಡಗೊಲಿನಿಂದ ಕೈಯಾಡಿಸಿ ಅದನ್ನು ಓಲೆಯಿಂದ ಕೆಳಗೆ ಇಳಿಸಿ ಸ್ವಲ್ಪ ತಣ್ಣಗಾಗಲು ಬಿಡಿ ಅದು ತಣ್ಣಗಾದ ನಂತರ ಅಡುಗೆ ಎಣ್ಣೆಯನ್ನು ಆ ಹಿಟ್ಟಿಗೆ ಹಚ್ಚಿ ಸರಿಯಾಗಿ ನಾದಿಕೊಳ್ಳಿ ನಂತರ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು ಅದಕ್ಕೆ ಒಂದು ಆಕಾರ ನೀಡಿ ಇಡ್ಲಿ ಮಾಡುವ ಕುಕ್ಕರಿನ ಪ್ಲೇಟುಗಳಲ್ಲಿ ಆ ಚಿಕ್ಕ ಚಿಕ್ಕ ಆಕಾರ ನೀಡಿದ ಉಂಡೆಗಳನ್ನು ಇಟ್ಟು ಒಂದು ವಿಶಿಲ್ ಆಗುವವರೆಗೂ ಬಿಡಿ ನಂತರ ಇಳಿಸಿ ಹಸಿಮೆಣಸಿನಕಾಯಿ ಚಟ್ನಿಯೊಂದಿಗೆ ಸವಿಯಲು ಕೊಡಿ…

ಇದು ನಮ್ಮ ಉತ್ತರ ಕರ್ನಾಟಕದ ಸ್ಪೆಸಲು ನೀವು ಜರ ಟ್ರೈ ಮಾಡ್ರಲಾ..