ನಿಮಗೆ ಗೊತ್ತಾ ಸಮುದ್ರದ ಆಳವನ್ನು ಹೇಗೆ ಅಳತೆ ಮಾಡುತ್ತಾರೆ ಅಂತ..?

ಸಮುದ್ರ ಎಷ್ಟೊಂದು ದೊಡ್ಡದಾದ ನೀರಿನ ಮೂಲ ಇದನ್ನು ಹೇಗೆ ಅಳತೆ ಮಾಡುತ್ತಾರೆ ಅಂತ ನಿಮಗೆ ಆಗಾಗ ಪ್ರಶ್ನೆ ಬಂದಿರಬಹುದು ಆದರೆ ಉತ್ತರ? ಹೊತ್ತಿರೋದಿಲ್ಲ ನಾವು ಇವಾಗ ಕೇಳ್ತೇವೆ ಕೇಳಿ ಸಮುದ್ರವನ್ನು ಫಾತೊಮೀಟರ್ ಅನ್ನೋ ಉಪಕರಣದಿಂದ ಅಳತೆ ಮಾಡುತ್ತಾರೆ. ಇವು ಮೂಲತಃ ಸೋನಾರ್ ಅಲೆಗಳಿಂದ ಸಮುದ್ರದ ಮಟ್ಟವನ್ನು ಅಳೆಯುತ್ತದಂತೆ.

ನಿಮ್ಮ ಬಟ್ಟೆಯನ್ನು ಐರನ್ ಮಾಡುಸ್ತೀರಾ ಆದ್ರೆ ಅದನ್ನು ಕಂಡು ಹಿಡಿದವರು ಯಾರು ಅಂತ ಒಮ್ಮೆಯಾದ್ರೂ ಯೋಚನೆ ಮಾಡಿದ್ದೀರಾ..?

ಹೆನ್ರಿ ಡಬ್ಲ್ಯೂ ಸೀಲೇ ಎನ್ನು ವ್ಯಕ್ತಿ ಮೂಲತಃ ಅಮೆರಿಕದವರು ಇವರು 1882 ರಲ್ಲಿ ಇಸ್ತ್ರೀ ಪೆಟ್ಟಿಗೆಯನ್ನು ಕಂಡು ಹಿಡಿದಿದ್ದಂತೆ.

ಗುಳಿಗೆ ಕವರ್ ಗಳ ಪಕ್ಕದಲ್ಲಿ ಖಾಲಿ ಗುಳ್ಳೆಗಳು ಯಾಕೆ ಇರ್ತಾವೆ ಗೊತ್ತ ?

ನೀವು ಗುಳಿಗೆ ಕವರ್ ನೋಡೇ ಇರ್ತೀರ ಈ ರೀತಿಯಾದ ಖಾಲಿ ಜಾಗದಲ್ಲಿ ಬಬಲ್ ಯಾಕೆ ಇರ್ತಾವೆ ಅಂತ ಯಾವತ್ತಾದ್ರೂ ಯೋಚಿಸಿದ್ದೀರಾ..?

ಗುಳಿಗೆ ಗಳನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಿಸುವಾಗ ಆಗಬಹುದಾದ ಚೂರಿನಿಂದ ರಕ್ಷಿಸಲು ಈ ರೀತಿಯಾದ ಬಬಲ್ ಅನ್ನು ಹಾಕಿರುತ್ತಾರೆ.

ಮನೆಯಲ್ಲಿನ ಇರುವೆಗಳ ಬಗ್ಗೆ ನಿಮಗೆಷ್ಟು ತಿಳಿದಿದೆ..?

ಒಂದು ಅಂದಾಜಿನ ಪ್ರಕಾರ ಜಗತ್ತಿನ ಎಲ್ಲಾ ಇರುವೆಗಳ ಒಟ್ಟು ತೂಕವು ಭೂಮಿಯ ನೆಲದ ಮೇಲಿನ ಪ್ರಾಣಿಗಳ ಒಟ್ಟಾರೆ ತೂಕದ 15% ದಿಂದ 25% ರಷ್ಟಾಗುವುದು.

ಇರುವೆಗಳಲ್ಲಿ 12,000 ಕ್ಕೂ ಅಧಿಕ ತಳಿಗಳಿವೆ. ರಾಣಿ ಇರುವೆಯು ೩೦ ವರ್ಷಗಳವರೆಗೆ ಜೀವಿಸಬಲ್ಲುದು. ಕೆಲಸಗಾರ ಇರುವೆಗಳ ಆಯುಷ್ಯ ೧ ರಿಂದ ೩ ವರ್ಷಗಳು. ಆದರೆ ಗಂಡಿರುವೆಗಳು ಕೆಲವೇ ವಾರಗಳವರೆಗೆ ಜೀವಿಸಿರುವುವು.

ಇರುವೆಗಳ ಜೀವನ ಕ್ರಮ ವಿಸ್ಮಯಕರ ಆ ಕಾರಣದಿಂದಲೇ ‘ಇರುವೆ ವಿಜ್ಞಾನ’ (ಮರ್ಮೆಕಾಲಜೀ) ಎಂಬೊಂದು ವಿಶಿಷ್ಟ ವಿಜ್ಞಾನ ಶಾಖೆಯೇ ಅಸ್ತಿತ್ವದಲ್ಲಿದೆಯಂತೆ.

ಕೋಳಿ ಮೊದಲ ಮೊಟ್ಟೆ ಮೊದಲ.?

ಈ ಪ್ರಶ್ನೆ ನೀವೇ ಕೇಳೇ ಕೇಳಿರುತ್ತೀರಿ..? ಆದರೆ ಉತ್ತರ ದೇವರಾಣೆಗೂ ಗೊತ್ತಿರೋಲ್ಲ, ಒಂದು ಸಂಶೋಧನೆಯ ಪ್ರಕಾರ ಭೂಮಿಗೆ ಮೊದಲು ಬಂದಿದ್ದು ಮೊಟ್ಟೆ ಅಂತೇ..! ಹೇಗೆ ಗೊತ್ತ..? ಹಲವು ಶತಮಾನಗಳ ಹಿಂದೆ ಕೋಳಿ ಎನ್ನುವ ಜೀವ ಇರಲಿಲ್ಲ ಅಂತೇ, ಕೋಳಿಯಂತೆಯೇ ಇರುವ ಜೀವಿ ಮತ್ತೊಂದು ಜೀವಿಯ ಜೊತೆಗೆ ಮಿಲನ ಕ್ರಿಯೆ ನಡೆಸಿ ಮೊಟ್ಟೆ ಉತ್ಪತ್ತಿಯಾಯಿತಂತೆ ಅದೇ ಈಗಿನ ಕೋಳಿ ಅಂತಾನೂ ಹೇಳ್ತಾರೆ, ಈಗ ಗೊತ್ತಾಯ್ತ ಮೊಟ್ಟೆ ಯಾಕೆ ಮೊದಲು ಅಂತ..?

ನ್ಯೂಸ್ ಪೇಪರ್ ಕೆಳಗಡೆ ನಾಲ್ಕು ಬಣ್ಣ ಬಣ್ಣದ ಡಾಟ್ ಯಾಕೆ ಇರುತ್ತವೆ ಗೊತ್ತ ..?

ನ್ಯೂಸ್ ಪೇಪರ್ ನಲ್ಲಿನ ಅಕ್ಷರಗಳ ಬಣ್ಣ CMYK (cyan, magenta, yellow, and key) ಕಲರ್ ಇಂದ ಮಾಡಲ್ಪಟ್ಟಿರುತ್ತದೆ, ಈ ರೀತಿಯಾದ ಡಾಟ್ ಪ್ರಿಂಟ್ ಮಾಡುವುದರಿಂದ ಪೇಪರ್ ಕಂಪನಿಯವರಿಗೆ ಯಾವ ಬಣ್ಣ ಎಷ್ಟು ಸಾಮರ್ಥ್ಯ ಬಾಕಿ ಇದೆ ಎಂದು ತಿಳಿದುಕೊಳ್ಳಲು ಹೀಗೆ ಮುದ್ರಿಸಿರುತ್ತಾರೆ.

ನಮ್ಮ ಕಣ್ಣು ಎಷ್ಟು ಮೆಗಾ ಪಿಕ್ಸೆಲ್ ಇರುತ್ತದೆ ಗೊತ್ತೇ..?

ಹೌದು ಕಣ್ಣನ್ನು ಕ್ಯಾಮೆರದಲ್ಲಿನ ಮೆಗಾ ಪಿಕ್ಸೆಲ್ ಗೆ ಹೋಲಿಸಿದರೆ ಅದು ಅಂದಾಜು 576 ಮೆಗಾಪಿಕ್ಸೆಲ್ ಗೆ ಹೋಲುತ್ತದೆ.

 

LEAVE A REPLY

Please enter your comment!
Please enter your name here