ಸಾಮಾನ್ಯವಾಗಿ ಕ್ಯಾರೆಟ್ ಹಲ್ವಾ ಮಾಡಿರುತ್ತೀರ ತಿಂದಿರುತ್ತೀರ ಆದರೆ ಹೆಸರುಬೇಳೆಯಲ್ಲೂ ಹಲ್ವಾ ಮಾಡಬಹುದು ಎಂಬುದು ತುಂಬಾ ಜನಕ್ಕೆ ಗೊತ್ತಿಲ್ಲ..

ನೋಡಿ ಇದನ್ನ ಒಮ್ಮೆ

ಹೆಸರುಬೇಳೆ – ಒಂದು ಕಪ್

ಸಕ್ಕರೆ – ಒಂದು ಕಪ್

ಕೋವಾ – ಕಾಲು ಕಪ್

ತುಪ್ಪ – ಕಾಲು ಕಪ್

ಏಲಕ್ಕಿ ಪುಡಿ ಸ್ವಲ್ಪ

ಗೋಡಂಬಿ ಮತ್ತು ಬಾದಾಮಿ

ತಯಾರಿಸುವ ರೀತಿ:

ಮೊದಲಿಗೆ ಹೆಸರು ಬೇಳೆಯನ್ನು ಸ್ವಲ್ಪ ಅಂದರೆ ಹಸಿ ವಾಸನೆಹೋಗುವಂತೆ ಹರಿದುಕೊಳ್ಳಿ. ಹುರಿದ ಬೇಳೆಯನ್ನುನುಣ್ಣಗೆ ಪುಡಿ ಮಾಡಿಕೊಳ್ಳಿ.

ಸಕ್ಕರೆ ಮತ್ತು ನೀರನ್ನು ಹಾಕಿ ಒಂದೆಳೆ ಪಾಕವನ್ನುತಯಾರಿಸಿಕೊಂಡು ಅದಕ್ಕೆ ಹುರಿದಿಟ್ಟುಕೊಂಡಿರುವ ಹೆಸರುಬೇಳೆ ಪುಡಿಯನ್ನು ಹಾಕಿ ಮತ್ತು ಕೋವವನ್ನು ಸೇರಿಸಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಒಂದೆರಡು ಚಮಚತುಪ್ಪವನ್ನು ಸೇರಿಸಿ, ತಿರುಗಿಸುತ್ತಿರಿ, ಹಲ್ವ ಹದಕ್ಕೆ ಬಂದ ತಕ್ಷಣಇಳಿಸಿ, ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತುಗೋಡಂಬಿಯನ್ನು ಬೆರೆಸಿ.

ರುಚಿಯಾದ ಹೆಸರುಬೇಳೆ ಹಲ್ವತಯಾರಾಗುತ್ತದೆ. ಇದು ತಂಪು, ಬೇಸಿಗೆಗಾಲದಲ್ಲಿಒಳ್ಳೆಯದು.

LEAVE A REPLY

Please enter your comment!
Please enter your name here