ಹೌದು ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಿಂದ ನಗರಗಳಿಗೆ ಯುವಕರು ಹಿರೀಕರು ವಲಸೆ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ ಹಿಂದಿನ ರೈತಾಪಿ ಕೆಲಸವನ್ನು ಬಿಟ್ಟು ಸಿಟಿ ಕಡೆ ಮುಖಮಾಡುವ ಹಲವು ಜನರಿಗೆ ಮಹಾರಾಷ್ಟ್ರಾದ ರಾಜೇಶ್ ಎಲ್ಲರಿಗೂ ಮಾದರಿಯಾಗಿದ್ದಾರೆ.

ರಾಜೇಶ್ ಮೂಲತಃ ಮಹಾರಾಷ್ಟ್ರಾದ ಹಳ್ಳಿಯವರು ಇವರು ನಗರದಲ್ಲಿ ಬರೋಬ್ಬರಿ 33 ವರ್ಷಗಳ ಕಾಲ ಕೆಲಸ ಮಾಡಿದವರು ಅದು ಒಳ್ಳೆಯ ಆದಾಯದ ಖಾಸಗೀ ಕೆಲಸ ಈಗ ಇವರು ತಮ್ಮ ಹಳ್ಳಿಗೆ ಹಿಂದಿರುಗಿ ತಮಗೆ ಬಳುವಳಿಯಾಗಿ ಬಂದ ಹೊಲದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ರಾಜೇಶ್ ರವರು ತಮಗೆ ೧೭  ವರ್ಷ ಆಗುವ ತನಕ ತಮ್ಮ ತಂದೆಯೊಂದಿಗೆ ಹೊಲಕ್ಕೆ ಹೋಗುವ ಅಭ್ಯಾಸ ಮಾಡಿಕೊಂಡಿದ್ದರು, ನಂತರ ಕಾರಣಾಂತರವಾಗಿ ಸಿಟಿಯ ಕಡೆ 33 ವರ್ಷ ಮುಖ ಮಾಡಬೇಕಾಯಿತು, ಈ ಅವಧಿಯಲ್ಲಿ ರಾಜೇಶ್ ಅವರು ಸಾವಯವ ಕೃಷಿಯ ಬಗ್ಗೆ ಅಧ್ಯಾಯನ ಮಾಡುತ್ತಿದ್ದರು  ನಂತರ ಈಗ  ಹಳ್ಳಿಗೆ  ಸಾವಯವ  ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಇತರೆ ಕೃಷಿಕರನ್ನು ಸಾವಯವ ಕೃಷಿಗೆ ಸೆಳೆಯುವ ಪ್ರಯತ್ನ:

ರಾಜೇಶ್ ತಾವು ಮಾತ್ರ ಸಾವಯವ ಕೃಷಿಯನ್ನು ಮಾಡದೆ ತಮಗೆ ತಿಳಿದಿರುವ ಅನೇಕ ಕೃಷಿಕರೊಡನೆ ಚರ್ಚಿಸಿ ಸಾವಯವ ಕೃಷಿಗೆ ಗೆ ಒಟ್ಟು ನೀಡುತ್ತಿದ್ದಾರೆ, ಇದರಿಂದ ಅನೇಕರು ಲಾಭದಾಯಕ ಕೃಷಿಪದ್ದತಿಯನ್ನು ಅಳವಡಿಸಿಕೊಂಡಿರುವುದು ಗಮನಾರ್ಹ.

ರಾಜೇಶ್ ಅವರು ತಮ್ಮ 16 ಎಕರೆ ಪ್ರದೇಶದಲ್ಲಿ ಭತ್ತ ಗೋದಿ ಯನ್ನು ಬೆಳೆಯುತ್ತಿದ್ದು ಈ ಪಾರಂಪರಿಕ ಕೃಷಿಯಿಂದ ಸಂತೋಷವಾಗಿದ್ದಾರೆ. ಕೈತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು ಮತ್ತೆ ಕೃಷಿ ಮಾಡುವಲ್ಲಿ ಯಶಸ್ಸು ಕಂಡಿರುವ ರಾಜೇಶ್ ಅವರು ಖಂಡಿತವಾಗಿಯೂ ಅಭಿನಂದನಾರ್ಹರು..

LEAVE A REPLY

Please enter your comment!
Please enter your name here