ಮೈಸೂರ್ ಪಾಕ್ ಕರ್ನಾಟಕ ಪ್ರಸಿದ್ಧ ಸಿಹಿ ತಿನಿಸು ಇದು ಕೇವಲ ದೇಶದಲ್ಲಿ ಮಾತ್ರವಲ್ಲದೆ ವಿಶ್ವವಿಖ್ಯಾತಿ ಕೊಂಡಿದಂತಹ ಒಂದು ತಿನಿಸು ಇನ್ನು ಮಾಡುವ ವಿಧಾನವನ್ನು ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ.

ಮೈಸೂರ್ ಪಾಕ್ ಮಾಡಲು ಬೇಕಾಗುವ ಸಾಮಗ್ರಿಗಳು.

  • ಕಡಲೆ ಹಿಟ್ಟು – 1 ಬಟ್ಟಲು
  • ಸಕ್ಕರೆ -2 ಬಟ್ಟಲು
  • ತುಪ್ಪ – 1.1/2

ಬಟ್ಟಲುಮಾಡುವ ವಿಧಾನ.

ಮೊದಲು ಒಲೆಯ ಮೇಲೆ ಪಾತ್ರೆಯಿಟ್ಟು ನೀರನ್ನು ಬಿಸಿ ಮಾಡಿಕೊಳ್ಳಿ. ಆಮೇಲೆ ಸಕ್ಕರೆಯನ್ನು ಹಾಕಿ.ಸಕ್ಕರೆ ಕರಗಿದ ಬಳಿಕ ಸ್ವಲ್ಪ ಕಡಲೆಹಿಟ್ಟುನ್ನು ಸ್ವಲ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಸ್ವಲ್ಪ ತುಪ್ಪವನ್ನು ಹಾಗಿ ಚೆನ್ನಾಗಿ ಕೈಯಾಡಿಸಬೇಕು. ಹೀಗೆಯೇ ಸ್ವಲ್ಪ ಕಡಲೆಹಿಟ್ಟು ಸ್ವಲ್ಪ ತುಪ್ಪ ಹಾಕಿ ಗಂಟಾಗದಂತೆ ಚೆನ್ನಾಗಿ ತಿರುವುತ್ತಿರಿ.ತಳಹಿಡಿಯದಂತೆಯೇ 10-15 ನಿಮಿಷ ಒಲೆಯ ಮೇಲಿಟ್ಟು ಇಳಿಸಬೇಕು.ತಟ್ಟೆಯೊಂದನ್ನು ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಸವರಿ, ತಯಾರಾದ ಮೈಸೂರ್ ಪಾಕನ್ನು ಹಾಕಿ ತಣ್ಣಗಾಗಲು ಬಿಡಿ.1 ಗಂಟೆ ಬಳಿಕ ಬೇಕಾದ ಆಕಾರಕ್ಕೆ ಕತ್ತರಿಸಿ ರುಚಿಕರವಾದ ಹಾಗೂ ವಿಶೇಷವಾದ ಮೈಸೂರ್ ಪಾಕ್ ಸವಿಯಲು ಸಿದ್ಧ.

LEAVE A REPLY

Please enter your comment!
Please enter your name here