ನಮ್ಮ ಸುತ್ತಮುತ್ತಲಿನ ಗಿಡಗವು ನಮ್ಮ ಅದೃಷ್ಟದ ಮೇಲೆ ಪ್ರಭಾವ ಬೀರುತ್ತದೆಯೆಂದು ಚೀನೀ ವಾಸ್ತುಶಾಸ್ತ್ರ ತಿಳಿಸುತ್ತದೆ ನಾವು ಹೇಳಿರುವ ಈ ಗಿಡಗಳನ್ನು ನಿಮ್ಮ ಮನೆಯಲ್ಲಿ ನೆಟ್ಟು /ಇಟ್ಟು ನೋಡಿ ನಿಮ್ಮ ಜೀವನದ ಬದಲಾವಣೆಗಳನ್ನು ನೀವೇ ಗಮನಿಸುತ್ತೀರಾ..!

ಲಕ್ಕಿ ಬೊಂಬು (Lucky Bamboo):

ಈ ಗಿಡವನ್ನು ನಿಮ್ಮ ಮನೆಯಲ್ಲಿ ಇಡುವುದರಿಂದ ನಿಮ್ಮ ಮನೆಯಲ್ಲಿ ಶಾಂತಿ, ನೆಲೆಸುತ್ತದೆ ಇದರಿಂದ ನಿಮಗೆ ಅಡೆಚಣೆ ಉಂಟಾಗಿರುವ ಕೆಲಸಗಳು ದೂರಹೋಗಿ ನಿಮಗೆ ಜಯ ಲಭಿಸಲಿದೆ. ಇದರಲ್ಲಿರುವ ಖಾಂದಾಗಲೂ ನಿಮಗೆ ಹೆಚ್ಚೆಚ್ಚು ಧನಾಗಮನದ ಸಂಕೇತವಾಗಿರಲಿದೆ.

ಮನಿ ಪ್ಲಾಂಟ್ (Money Plant):

ಹೆಸರೇ ಹೇಳುವಂತೆ ಈ ಗಿಡ ನಿಮ್ಮ ಮನೆ ಒಳಗೆ ಬೆಳಸಿದ್ದಾರೆ ನಿಮಗೆ ಧನಾಗಮನವಾಗಲಿದೆ, ನಿಮಗೆ ಹೆಚ್ಚಿನ ಸಂಧರ್ಭಗಳಲ್ಲಿ ಶುಭ ಕೆಲಸಗಳು ಕೂಡಿಬರುತ್ತವೆ ಇದರಿಂದ ನಿಮ್ಮ ಕಾರ್ಯಸಿದ್ಧಿ ಹಾಗು ನಿಮ್ಮ ಉದ್ಯೋಗದಲ್ಲಿ ಅನುಕೊಳ್ಳಗಳು ಕಂಡುಬರುತ್ತದೆ.

ಜೇಡ್ ಪ್ಲಾಂಟ್ (Jade Plant): 

ಚೀನೀ ವಾಸ್ತು ತಜ್ಞ ಫೆನ್ಫ್ ಚುಯ್ ಲಾರ್ ಪ್ರಕಾರ ಈ ಗಿಡ ನಿಮ್ಮ ಮನೆಯಲ್ಲಿನ ಭಿನ್ನಾಭಿಪ್ರಾಯ ತೊಡೆದು ಹಾಕುತ್ತದೆ ಅದರಲ್ಲೂ ಅತ್ತೆ ಸೊಸೆ ಜಗಳ, ಗಂಡ ಹೆಂಡತಿ ಭಿನ್ನಾಭಿಪ್ರಾಯ, ಗಲಾಟೆಗಳನ್ನು ಇದು ನಿರ್ಮೂಲನೆ ಮಾಡುತ್ತದೆ ಇದರಿಂದ ನಿಮ್ಮ ಕುಟುಂಬದಲ್ಲಿ ಸುಖ ಶಾಂತಿ ನೆಲೆಸುತ್ತದೆ.

ಆರ್ಚಿಡ್ಸ್ (Orchids):

ಈ ಗಿಡಗಳನ್ನು ನಿಮ್ಮ ಮನೆಯಲ್ಲಿ ಅಥವಾ ಆಫೀಸ್ ನ ನಿಮ್ಮ ಟೇಬಲ್ ಮೇಲೆ ಇಡುವುದರಿಂದ ನಿಮಗೆ ಉದ್ಯೋಗದಲ್ಲಿ ಪ್ರಗತಿ ವಿದೇಶದಲ್ಲಿ ಕೆಲಸ ಹೀಗೆ ಹಲವಾರು ಅನುಕೂಲಗಳು ಕಂಡುಬರುತ್ತದೆ.

 

LEAVE A REPLY

Please enter your comment!
Please enter your name here