ನಮ್ಮ ದೇಹಲ್ಲಿಯೇ ನಮ್ಮ ದೇಹದ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ ನಮ್ಮ ದೇಹದ ಒಂದು ಭಾಗವನ್ನು ನಮ್ಮ ಬೆರಳಿನಿಂದ ಒತ್ತೀ ಹಿಡಿದರೆ ನಮಗೆ ಬರುವ ಈ ಸಮಸ್ಯೆಯಿಂದ ಪರಿಹಾರ ಹೊಂದಬಹುದು ಎಂದರೆ ನೀವು ನಂಬಲೇ ಬೇಕು..

ಹಣೆಯನ್ನು ಬೆರಳಿನಿಂದ ಒತ್ತಿ ಹಿಡಿದರೆ:

ನಿಮಗೆ ಅತೀವ ತಲೆ ನೋವು ತಲೆ ಭಾರವಾದಂತಹ ಸಂಧರ್ಭದಲ್ಲಿ ಹಾಗು ನಿಮಗೆ ಅತೀವ ಒತ್ತಡವಿದ್ದಲ್ಲಿ ನೀವು ನಿಮ್ಮ ಹಣೆಯ ಮಧ್ಯಭಾಗದಲ್ಲಿ ಒಂದು ನಿಮಿಷಗಳ ಕಾಲ ಒತ್ತಿ ಹಿಡಿಡಿದ್ದೆ ಆದಲ್ಲಿ ನಿಮ್ಮ ತಲೆ ನೋಡು ಹೊರಟುಹೋಗುತ್ತದೆ. ಇದು ನಿಮ್ಮ ಉಸಿರಾಟದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ಮೂಗಿನ ಮೇಲ್ಬಾಗ:

ನಿಮಗೆ ಜ್ವರದ / ನೆಗಡಿಯ ಲಕ್ಷಣಗಳು ಕಂಡುಬಂದಲ್ಲಿ ನೀವು ಕಣ್ಣಿನ ಪಕ್ಕ ಅಥವಾ ಮೂಗಿನ ಪಕ್ಕದಲ್ಲಿ ಒಂದು ನಿಮಿಷದ ಕಾಲ ಬೆರಳಿನಿಂದ ಒತ್ತಿಕೊಳ್ಳಿ ಇದರಿಂದ ನಿಮಗೆ ಬರಬಹುದಾದ ಶೀತ ಅಥವಾ ಜ್ವರವು ಬರುವುದಿಲ್ಲ.  ಇದರಿಂದ ನಿಮಗೆ ಕಣ್ಣಿನ ನೋವುಗಳು, ಒತ್ತಡಗಳು ನಿವಾರಣೆಯಾಗಲುತ್ತವೆ.

ಮೂಗಿನ ಕೆಳಗೆ ತುಟಿಯ ಮೇಲೆ:

ಈ ರೀತಿಯಾಗಿ ಮಾಡುವುದರಿಂದ ನೀವು ಕಳೆದು ಕೊಂಡ ವಾಸನೆ ಗ್ರಹಿಕೆಯು ತೀಕ್ಷವಾಗುತ್ತದೆ, ಇದು ನಿಮ್ಮ ಕಣ್ಣಿನಲ್ಲಿ ಉರಿ ಕಂಡು ಬಂದಾಗಲೂ ಮಾಡಿಕೊಳ್ಳಬಹುದು, ಇದನ್ನು ನೀವು ವಾರಕ್ಕೊಮ್ಮೆ ಮಾಡಿಕೊಂಡಲ್ಲಿ ನಿಮ್ಮ ಸೌಂದರ್ಯವೂ ವೃದ್ಧಿಯಾಗುತ್ತದೆ ಹಾಗು ನಿಮ್ಮ ಮುಖದಲ್ಲಿ ಆಗುವ ರಕ್ತ ಪರಿಚಲನೆಯು ಸರಿಯಾಗುತ್ತದೆ.

ಕಿವಿಯ ಕೆಳಭಾಗದಲ್ಲಿ:

ಈ ಭಾಗದಲ್ಲಿ ನೀವು ನಿಮ್ಮ ಬೆರಳಿನಿಂದ ಒತ್ತಿಕೊಂಡರೆ ನಿಮ್ಮ ಮುಖದಲ್ಲಿ ಆಗುವ ಚರ್ಮದ ತೊಂದರೆಯಿಂದ ಹೊರಬರಬಹುದು, ನಿಮ್ಮ ಮುಖ ಕಾಂತಿಭರಿತವಾಗುತ್ತದೆ,

ತಲೆಯ ಕೆಳಗೆ / ಕುತ್ತಿಗೆಯ ಮೇಲ್ಬಾಗ:

ನಿಮಗೆ ಪದೇ ಪದೇ ಕೋಪ ಬರುತ್ತಿದ್ದರೆ ನಿಮಗೆ ಕೆಲಸ ಒತ್ತಡ ಜಾಸ್ತಿಯಾಗಿದ್ದರೆ ನೀವು ಈ ರೀತಿಯಾಗಿ ಮಾಡಿಕೊಳ್ಳಿ ನಿಮಗೆ ಒತ್ತಡದಿಂದ ಆಗಬಹುದಾದ ತೊಂದರೆಯಿಂದ ಹೊರಬರಬಹುದು.

 

LEAVE A REPLY

Please enter your comment!
Please enter your name here