ವಾಸ್ತು ನಮಗೆ ಹೇಗೆಲ್ಲ ಇದ್ದಾರೆ ಒಳ್ಳೇದಾಗಲಿದೆ ಅಂತ ತೋರಿಸಿಕೊಟ್ಟಿದೆ, ಇದರಲ್ಲಿ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಹೇಗೆಲ್ಲ ಇದ್ದರೆ ಒಳಿತು ಎಂದು ತಿಳಿಸಿದೆ.

ವಾಸ್ತು ಪ್ರಕಾರ ಹೀಗೆ ರಾತ್ರಿ ಮಲಗಿ ನಿಮ್ಮ ಶರೀರಕ್ಕೂ ಒಳ್ಳೆಯದಾಗಲಿದೆ:

ಉತ್ತರಕ್ಕೆ ತಲೆ ಮಾಡಿ ಮಲಗಿದರೆ:

ಯಾವುದೇ ಕಾರಣಕ್ಕೂ ಉತ್ತರಕ್ಕೆ ತಲೆ ಮಾಡಿ ಮಲಗಿಕೊಳ್ಳಬೇಡಿ ಇದರಿಂದ, ಕಾರಣ ಸತ್ತಾಗ ಮಾತ್ರ ಹೆಣವನ್ನು ಉತ್ತರಕ್ಕೆ ಮಲಗಿಸುವುದು ಎಂದು ತಿಳಿಸಲಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಹೀಗೆ ಮಲಗಬೇಡಿ.

ದಕ್ಷಿಣಕ್ಕೆ ತಲೆ ಮಾಡಿ ಮಲಗಿದರೆ:

ದಕ್ಷಿಣಕ್ಕೆ ತಲೆ ಮಾಡಿ ಮಲಗುವುದು ಅತ್ಯಂತ ಒಳ್ಳೆಯದು ಇದರಿಂದ ನಿಮಗೆ ಧನಾತ್ಮಕ ಅಂಶಗಳು ಸಿಗಲಿವೆ, ನೀವು ಹೀಗೆ ಮಲಗಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಸಂಪತ್ತಿನ ಜೊತೆಗೆ ಸುಖ ಶಾಂತಿ ನೆಲೆಸುತ್ತದೆ.

ಪೂರ್ವಕ್ಕೆ ತಲೆ ಮಾಡಿ ಮಲಗಿದರೆ:

ಇದು ಒಂದು ಉತ್ತಮ ದಿಕ್ಕಾಗಿದೆ ಹೀಗೆ ಮಲಗಿದ್ದೆ ಆದರೆ ನಿಮಗೆ ಜ್ಞಾನ ಸಂಪತ್ತು ಪ್ರಾಪ್ತವಾಗುತ್ತದೆ, ಈ ರೀತಿಯಾಗಿ ಮಲಗಿದರೆ ನಿಮಗೆ ಆಧ್ಯಾತ್ಮಿಕ ಭಾವತೆ ಜಾಸ್ತಿ ಆಗಲಿದೆ, ಈ ದಿಕ್ಕು ಓದುವ ಮಕ್ಕಳಿಗೆ ಒಳಿತನ್ನು ನೀಡಿ ಯಶಸ್ಸನ್ನು ಪ್ರಾಪ್ತಿ ಮಾಡುತ್ತದೆ.

ಪಶ್ಚಿಮಕ್ಕೆ ತಲೆ ಮಾಡಿ ಮಲಗಿದರೆ:

ಪಶ್ಚಿಮವೂ ಒಂದು ತಲೆ ಮಾಡಿ ಮಲಗಿಕೊಳ್ಳಲು ಉತ್ತಮ ದಿಕ್ಕಾಗಿರಲಿದೆ, ಹೀಗೆ ತಲೆ ಮಾಡಿ ಮಲಗಿದ್ದೆ ಆದಲ್ಲಿ ನಿಮ್ಮಲ್ಲಿ ಉತ್ತಮ ಗುಣಗಳು ಬರಲಿವೆ, ಇದು ನಿಮಗೆ ಒಳ್ಳೆಯ ಹೆಸರನ್ನು ನೀಡಲು ಕಾರ್ಯನಿರ್ವಯಿಸುತ್ತದೆ.

 

LEAVE A REPLY

Please enter your comment!
Please enter your name here