ತುಂಬೆಗಿಡವನ್ನ ನಾವು ನೀವೆಲ್ಲರೂ ಹಲವು ಕಡೆಗಳಲ್ಲಿ ಕಂಡಿರುತ್ತೇವೆ, ಇದಕ್ಕೆ ಬೆಳೆಯಲು ಪ್ರತೇಕವಾದ ಜಾಗ ಬೇಕಾಗಿಲ್ಲ, ಎಲ್ಲೆಂದರಲ್ಲಿ ಹದವಾಗಿ, ಸೋಮಪಾಗಿ ಬೆಳೆಯುತ್ತದೆ. ಇದು ನೋಡಲು ಅಂದವಾಗಿರುವುದಲ್ಲದೆ ಇದರಲ್ಲಿ ಬಿಡುವ ಹೂವುಗಳು ವಿವಿಧ ಬಗೆಯವುಗಳಾಗಿವೆ. ಇದು ಹಲವು ರೋಗಗಳನ್ನ ಗುಣಪಡಿಸುವ ಗುಣವನ್ನ ಹೊಂದಿದೆ.

* ಬಿಳಿ ತುಂಬೆ ಹೂವಗಳನ್ನ ಸ್ವಲ್ಪ ಪ್ರಮಾಣದ ಜೇನು ತುಪ್ಪದಲ್ಲಿ ನೆನೆಸಿ ತಿಂದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.

* ತುಂಬೆಗಿಡದ ರಸದ ಜೊತೆ ಕರಿಮೆಣಸಿನ ಪುಡಿಯನ್ನು ಬೆರೆಸಿ ನಿಯಮಿತವಾಗಿ ಸೇವಿಸಿದರೆ ವಿಷಮಜ್ವರವು ಕಡಿಮೆಯಾಗುತ್ತದೆ.

* ತಲೆನೋವು, ತಲೆ ಭಾರ ಮತ್ತು ಮೂಗು ಕಟ್ಟಿದಲ್ಲಿ, ತುಂಬೆಗಿಡದ ಖಾಂಡವನ್ನು ನೀರಿನಲ್ಲಿ ಕುದಿಸಿ ಅದರ ಹಬೆಯನ್ನು ತೆಗೆದುಕೊಂಡರೆ, ತಲೆನೋವು, ತಲೆ ಭಾರ ಕಡಿಮೆಯಾಗುತ್ತದೆ.

* ನಿಯಮಿತ ಪ್ರಮಾಣದಲ್ಲಿ ತುಂಬೆಗಿಡದ ರಸಕ್ಕೆ ಅಕ್ಕಿತೊಳೆದ ನೀರನ್ನು ಬೆರೆಸಿ ಸೇವಿಸಿದರೆ ಮತ್ತು ಅದೇ ಮಿಶ್ರಣದಿಂದ ಕಣ್ಣನ್ನು ತೊಳೆಯುತ್ತಿದ್ದರೆ ಕಣ್ಣಿನ ಸಮಸ್ಯೆ ದೂರವಾಗುತ್ತದೆ.

* ದೇಹದಲ್ಲಿ ಯಾವುದೇ ತರಹದ ಊತವಿದ್ದಲ್ಲಿ ತುಂಬೆ ಸೊಪ್ಪಿನ ಕಷಾಯದಿಂದ ಶಾಕವನ್ನು ಕೊಟ್ಟರೆ ಊತ ಕಡಿಮೆಯಾಗುತ್ತದೆ.

* ತುಂಬೆಗಿಡದ ಕಷಾಯಕ್ಕೆ ಸೈಂಧವ ಉಪ್ಪನ್ನು ಸೇರಿಸಿ, ದಿನಕ್ಕೆ 2 ಬಾರಿ ಸೇವಿಸಿದರೆ, ಜೀರ್ಣಶಕ್ತಿ ಹೆಚ್ಚುತ್ತದೆ.

LEAVE A REPLY

Please enter your comment!
Please enter your name here