ಜ್ಯೋತಿಶ್ಶಾಸ್ತ್ರದ ಪ್ರಕಾರ ಕನಸುಗಳಿಗೂ ಹಾಗು ಮುಂದೆ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳಿಗೂ ಸಂಭಂದವಿರುತ್ತದೆ ಇದನ್ನು ಕೆಲವರು ಗ್ರಹಿಸುವವರು ಇರುತ್ತಾರೆ ಇನ್ನು ಕೆಲವರು ಇದನ್ನು ತಿಳಿಯದೆ ನಿರ್ಲಕ್ಷಿಸುವುದೂ ಉಂಟು, ನಿಮಗೆ ಈ ರೀತಿಯಾದ ಕನಸುಗಳು ಬಿದ್ದರೆ ಈ ರೀತಿಯಾದ ಶಕುನ ಉಂಟಾಗಬಹುದು, ಯಾವ ರೀತಿ ಈ ಲೇಖನದಿಂದ ತಿಳಿಯಿರಿ.

ಕನಸ್ಸಿನಲ್ಲಿ ನಿಮ್ಮ ತಾಯಿ ಕಂಡರೆ:

ನಿಮ್ಮ ಹೆತ್ತ ತಾಯಿ ಕನಸ್ಸಿನಲ್ಲೂ ನಿಮ್ಮ ಒಳ್ಳೆಯದನ್ನೇ ಬಯಸುತ್ತ ಇರುತ್ತಾರೆ, ನಿಮಗೆ ನಿಮ್ಮ ತಾಯಿ ಕನಸ್ಸಿನಲ್ಲಿ ಕಂಡರೆ ನಿಮ್ಮ ತೊಂದರೆಗಳನ್ನು ನಿಮ್ಮ ತಾಯಿಯೊಂದಿಗೆ ಹಂಚಿಕೊಳ್ಳಿ ನಿಮ್ಮ ತೊಂದರೆಗಳಿಗೆ ನಿಮ್ಮ ತಾಯಿಯಲ್ಲಿ ಉತ್ತರ ಇರಬಹುದು ಎಂದು ಇದರ ಅರ್ಥ. ಕೆಲವೊಂದು ಸಲ ನೀವು ನಿಮ್ಮ ತಾಯಿಯ ಆಸೆಯನ್ನು ಈಡೇರಿಸದೇ ಇದ್ದ ಮಾತ್ರಕ್ಕೂ ನಿಮ್ಮ ತಾಯಿ ನಿಮ್ಮ ಕನಸಿನಲ್ಲಿ ಬರಬಹುದು.

ನಿಮ್ಮನ್ಯಾರಾದರು ಅಟ್ಟಿಸಿಕೊಂಡು ಬಂದರೆ:

ಈ ರೀತಿಯಾದ ಕನಸು ಬಿದ್ದರೆ ನೀವು ತೊಂದರೆಗಳಿಂದ ಯಾವಾಗಲೂ ಬಹುದೂರ ಓದಲು ಪ್ರಯತ್ನಿಸುತ್ತಿದ್ದೀರಿ ಎಂದು ಅರ್ಥ ಬರುತ್ತದೆ. ಇದು ನಿಮ್ಮಲ್ಲಿ ನಿಮಗೆ ವಿಶ್ವಾಸದ ಕೊರತೆ ಎಂದು ಸಾರುತ್ತದೆ.

ನಿಮ್ಮ ಕನಸಲ್ಲಿ ನಗ್ನ ಚಿತ್ರಗಳು ಬಂದರೆ.

ನಿಮಗೆ ಈ ರೀತಿಯಾದ ಕನಸು ಬಿದ್ದರೆ ನೀವು ಮಾನವೀಯತೆಯನ್ನು ಹಲವು ಬಾರಿ ಮರೆಯುತ್ತೀರಿ ಎಂದು ಅರ್ಥ ಬರುತ್ತದೆ. ನೀವು ಹೆಣ್ಣಾಗಿದ್ದರೆ ನಿಮಗೆ ನಿಮ್ಮ ರಕ್ಷಣೆಯ ಭಯ ಕಾಡುತ್ತದೆ ಎಂದು ಅರ್ಥ. ಮತ್ತೆ ಮೊದಲಿನಂತೆ ಆಗಲು, ನೀವು ಆದಷ್ಟು ನಿಮ್ಮ ತನದೊಂದಿಗೆ ನೀವು ಬದುಕಿ, ಸ್ವಾಭಿಮಾನಿಯಾಗಿ.

ಕನಸ್ಸಿನಲ್ಲಿ ಮೋಡಗಳು ಬಂದರೆ:

ನಿಮ್ಮ ಕನಸ್ಸಿನಲ್ಲಿ ಮೋಡಗಳು ಬಂದರೆ ನಿಮಗೆ ನಿಮ್ಮ ಭಾವನೆಗಳು ಕಾಡುತ್ತಿರುತ್ತವೆ, ನೀವು ನಿಮ್ಮ ಭಾವನೆಗಳನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಿ ಅವಾಗ ನಿಮ್ಮ ಈ ರೀತಿಯಾದ ಕನಸುಗಳು ಮರೆಯಾಗುತ್ತವೆ.

ನಿಮ್ಮ ಕನಸ್ಸಿನಲ್ಲಿ ರಕ್ತ ಕಂಡರೆ:

ನಿಮಗೆ ಪಾಪ ಪ್ರಜ್ಞೆ ಇದ್ದರೆ ಈ ರೀತಿಯಾದ ಕನಸುಗಳು ನಿಮಗೆ ಬರುತ್ತವೆ, ಆದಷ್ಟು ದೇವರ ನಾಮ ಜಪಿಸಿ ಮಲಗಿಕೊಳ್ಳಿ, ಆದಷ್ಟು ಪರರಿಗೆ ಒಳ್ಳೆಯದನ್ನೇ ಬಯಸಿ ಅವಾಗ ನಿಮ್ಮ ಈ ರೀತಿಯಾದ ಕನಸುಗಳು ಮರೆಯಾಗುತ್ತವೆ.

ಲೇಖನ :

 

LEAVE A REPLY

Please enter your comment!
Please enter your name here