ಅಕ್ಷಯ ತೃತೀಯವನ್ನು ಬಂಗಾರದ ಹಬ್ಬ ಅಂತಾನೆ ಕರೀತಾರೆ ಈ ದಿನ ಬಂಗಾರವನ್ನು ಕೊಂಡರೆ “ಅಕ್ಷಯ” (ಹೆಚ್ಚು) ಆಗುತ್ತೆ ಅನ್ನೋದು ನಮ್ಮೆಲ್ಲರ ನಂಬಿಕೆ. ಈ ದಿನದಂದು ನಾವು ಒಳ್ಳೆಯ ಕೆಲಸಗಳಿಗೆ ಅಡಿಪಾಯ ಹಾಕಿದರೆ ಅದು ಅಕ್ಷಯ ಆಗುತ್ತದೆಂದು ನಂಬಿಕೆ! ಈ ದಿನಕ್ಕೆ ಯಾಕೆ ಅಷ್ಟು ಮಹತ್ವ ಅಂತ ಈ ಲೇಖನದ ಮೂಲಕ ತಿಳಿದುಕೊಳ್ಳಿ.

* ಈ ದಿನದಂದೇ ತ್ರೇತಾಯುಗ ಹಾಗು ಸತ್ಯ ಯುಗಗಳು ಪ್ರಾರಂಭವಾಗಿದ್ದವು ಅಂತ ಪುರಾಣ ಹೇಳುತ್ತೆ.

* ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನ ಅಂದರೆ “ಅಕ್ಷಯ ತೃತೀಯ” ದಿನದಂದೇ ವಿಷ್ಣುವಿನ ಆರನೇ ಅವತಾರವಾದ ಪರುಶುರಾಮನ ಜನನವಾಗಿದ್ದು

* ಈ ದಿನದಂದೇ ವ್ಯಾಸರು ಮಹಾಭಾರತವನ್ನು ಬರೆಯಲು ಪ್ರಾರಂಭಿಸಿದ್ದರಂತೆ, ಆದ್ದರಿಂದ ಇಂದಿನ ಪ್ರತಿಕ್ಷಣವನ್ನೂ ಒಳ್ಳೆಯ ಗಳಿಗೆಯೆಂದೇ ತಿಳಿಯುವುದುಂಟು.

* ಈ ದಿನದಂದು ನಿಮ್ಮ ಮಹತ್ವಾಕಾಂಕ್ಷೆಯ ಕೆಲಸಗಳನ್ನು ಪ್ರಾರಂಭ ಮಾಡಿದ್ದೆ ಆದರೆ ಅದಕ್ಕೆ ಎಂದಿಗೂ ಸೋಲಾಗುವುದಿಲ್ಲವಂತೆ! ಆದಕಾರಣಕ್ಕೆ ನಮ್ಮ ಜನ ಇಂದು ಬಂಗಾರವನ್ನು, ಮನೆಯನ್ನು,ಕೊಂಡುಕೊಳ್ಳಲು ಹವಣಿಸುವುದು.

ಪೌರಾಣಿಕ ಹಿನ್ನಲೆ:

ವನವಾಸದ ಸಂಧರ್ಭದಲ್ಲಿ ಪಾಂಡವರಿಗೆ ಈ ದಿನ ಅಕ್ಷಯ ಪಾತ್ರೆಯನ್ನು ಸಾಕ್ಷಾತ್ ಸೂರ್ಯ ದೇವನೇ ವರವಾಗಿ ನೀಡಿದ್ದ ಎನ್ನಲಾಗಿದೆ, ಇದರಿಂದ ಬಂದ ಊಟದಿಂದ ಪಾಂಡವರೆಲ್ಲರೂ ತಮ್ಮ ನಿತ್ಯದ ಪಾಕವನ್ನು ತಯಾರಿಸುತ್ತಿದ್ದರು ಎಂದು ಪುರಾಣ ಹೇಳುತ್ತದೆ, ಇದರಲ್ಲಿ ಉತ್ಪತ್ತಿಯಾದ ಊಟದ ಕೇವಲ ಒಂದು ಅಗಳಿನಿಂದ ಶ್ರೀ ಕೃಷ್ಣ ದೇವನು ಸಂತುಷ್ಟನಾಗಿದ್ದ ಎಂಬ ಪ್ರತೀತಿ ಇದೆ. ಆದರಿಂದಲೇ ಶ್ರೀ ಕೃಷ್ಣನು ಅಕ್ಷಯ ಪಾತ್ರೆ ವರವಾಗಿ ಬಂದ ದಿನವನ್ನು “ಅಕ್ಷಯ ತೃತೀಯ” ಎಂದು ಕರೆದ ಎಂಬುದು ತಿಳಿದಿದೆ.

ಪೂಜೆ ಹೇಗೆ ಮಾಡಬೇಕು:

ಈ ದಿನ ಕೈಲಾದಷ್ಟು ದ್ರವ್ಯ (ಬಂಗಾರ)ವನ್ನು ಕೊಂಡು ಅದನ್ನು ಲಕ್ಷ್ಮಿ ಮತ್ತು ಕುಬೇರನ ಮುಂದೆ ಇತ್ತು ಶ್ರಾದ್ಧ ಭಕ್ತಿ ಇಂದ ಪೂಜಿಸಬೇಕು, ನಂತರ ಫಲವನ್ನು ನೈವೇದ್ಯೆ ಮಾಡಿ ಸಿಹಿಗಳೊಂದಿದೆ ಊಟ ಮಾಡಬೇಕು.

ಲೇಖನ:

LEAVE A REPLY

Please enter your comment!
Please enter your name here